Saturday, November 23, 2024
ದಕ್ಷಿಣ ಕನ್ನಡಬೆಳ್ತಂಗಡಿರಾಜಕೀಯರಾಜ್ಯಸುದ್ದಿ

ಬೆಳಕು ಯೋಜನೆಯಡಿ ಮಲವಂತಿಗೆ ಗ್ರಾಮದ ಎಳನೀರಿನ 33 ಕುಟುಂಬಗಳಲ್ಲಿ ಬೆಳಕು ಚೆಲ್ಲುವಂಥ ಕಾರ್ಯ ಮಾಡಿದ ಶಾಸಕ ಹರೀಶ್‌ ಪೂಂಜ ; ಎಳನೀರು ಒಂದೇ ವಾರ್ಡ್‌ಗೆ ಸುಮಾರು 12 ಕೋ.ರೂ. ಅನುದಾನ – ಕಹಳೆ ನ್ಯೂಸ್

ಬೆಳ್ತಂಗಡಿ: ಅರಣ್ಯದಂಚಿನ ಮಲವಂತಿಗೆ ಗ್ರಾಮದ ಎಳನೀರು ಭಾಗದಲ್ಲಿ ವಾಸವಾಗಿದ್ದು, ವಿದ್ಯುತ್‌ ಸಂಪರ್ಕಕ್ಕಾಗಿ ಪರದಾಡಿ ಕೊನೆಗೆ ಊರು ತೊರೆಯಬೇಕಾದ ಸ್ಥಿತಿ ತಲುಪಿದ್ದ 33 ಕುಟುಂಬಗಳ ಮಂದಿಗೆ ಸರಕಾರವು ಬೆಳಕು ಯೋಜನೆಯಡಿ ಈಗ ವಿದ್ಯುತ್‌ ಸಂಪರ್ಕ ಕಲ್ಪಿಸಿದ್ದು, ನಿವಾಸಿಗಳು ಹಬ್ಬ ಆಚರಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ವಿದ್ಯುತ್‌ ಸಂಪರ್ಕದ ಹಿನ್ನೆಲೆಯಲ್ಲಿ ಮಾ. 29ರಂದು ಊರವರ ಸಂಭ್ರಮದಲ್ಲಿ ಶಾಸಕ ಹರೀಶ್‌ ಪೂಂಜ ಭಾಗಿಯಾದರು. ಈ ವೇಳೆ ಮಾಧ್ಯಮದೊಂದಿಗೆ ಮಾತನಾಡಿ, ಎಳನೀರಿಗೆ 120 ಕಿ.ಮೀ. ಸುತ್ತಿ ಬಳಸಿ ಬರಬೇಕಿತ್ತು. ಇಲ್ಲಿಗೆ ವಿದ್ಯುತ್‌ ಸಂಪರ್ಕ ಸಾಧ್ಯವಾಗಿ ರಲಿಲ್ಲ. ಈಗ ಪ್ರಧಾನಿ ಮೋದಿ ಅವರ ಬೆಳಕು ಯೋಜನೆ ಯಡಿ ಬೆಳಕು ಕಾಣುವಂತಾಗಿದೆ ಎಂದರು.

ಎಳನೀರು ಒಂದೇ ವಾರ್ಡ್‌ಗೆ ಸುಮಾರು 12 ಕೋ.ರೂ. ಅನುದಾನ ಒದಗಿಸಲಾಗಿದೆ. ಪ್ರಮುಖವಾಗಿ ದಿಡುಪೆ -ಸಂಸೆ ರಸ್ತೆಗೆ 5 ಕೋ.ರೂ. ಒದಗಿಸಿದ್ದು, ಬಂಗಾರ ಪಲ್ಕೆಯಲ್ಲಿ 5 ಕೋ.ರೂ. ವೆಚ್ಚದಲ್ಲಿ ಸೇತುವೆ ಸಹಿತ ಕಿಂಡಿ ಅಣೆಕಟ್ಟು ನಿರ್ಮಾಣ ನಡೆಯುತ್ತಿದೆ ಎಂದರು.

ಪ್ರಕಾಶ್‌ ಕುಮಾರ್‌ ಮಾತನಾಡಿ, ಇಂದು ಬೆಳಕು ಯೋಜನೆಯ ಮೂಲಕ ಎಳನೀರಿನ 33 ಕುಟುಂಬಗಳಲ್ಲಿ ಬೆಳಕು ಚೆಲ್ಲುವಂಥ ಕಾರ್ಯ ಶಾಸಕ ಹರೀಶ್‌ ಪೂಂಜ ಅವರಿಂದ ಆಗಿದೆ ಎಂದರು.

ಊರಿನ ಹಿರಿಯರಾದ ಡಿ.ಕೆ. ಜೈನ್‌ ಮಾತನಾಡಿದರು. ಮಲವಂತಿಗೆ ಗ್ರಾ.ಪಂ. ಅಧ್ಯಕ್ಷೆ ಅನಿತಾ, ಉಪಾಧ್ಯಕ್ಷ ದಿನೇಶ್‌ ಗೌಡ, ಬೂತ್‌ ಸಮಿತಿ ಕಾರ್ಯದರ್ಶಿ ವಿಜಯ ಕುಮಾರ್‌ ಬಡಾಮನೆ, ತಾಲೂಕು ಎಸ್‌.ಟಿ. ಮೋರ್ಚಾ ಅಧ್ಯಕ್ಷ ಹಾಗೂ ಜಿಲ್ಲಾ ಮಲೆಕುಡಿಯ ಸಂಘದ ಅಧ್ಯಕ್ಷ ಹರೀಶ್‌ ಎಳನೀರು ಸಹಿತ ಊರಿನ ಹಿರಿಯರು, ಫಲಾನುಭವಿಗಳು ಉಪಸ್ಥಿತರಿದ್ದರು. ಊರಿನವರು ಹರೀಶ್‌ ಪೂಂಜರನ್ನು ಗೌರವಿಸಿದರು.