Recent Posts

Monday, January 20, 2025
ದಕ್ಷಿಣ ಕನ್ನಡಪುತ್ತೂರುರಾಜಕೀಯಸುದ್ದಿ

ಅಶೋಕ್ ರೈ ಗೆ ಜೈ ಎಂದ ಕೈ ; ಪುತ್ತೂರು ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಅಶೋಕ್ ಕುಮಾರ್ ರೈ ಕಣಕ್ಕೆ – ಅಧಿಕೃತ ಘೋಷಣೆ ಒಂದೇ ಬಾಕಿ..! – ಕಹಳೆ ನ್ಯೂಸ್

ಪುತ್ತೂರು : ಬಿಜೆಪಿಯ ಭದ್ರಕೋಟೆ ಪುತ್ತೂರಿನ ವಿಧಾನಸಭಾ ಚುನಾವಣೆ ಬಹಳಷ್ಟು ಕುತೂಹಲ ಮೂಡಿಸಿದೆ, ಹಾಲಿ ಶಾಸಕರ ಅಭಿವೃದ್ಧಿ ಮತ್ತು ಅಪಪ್ರಚಾರದ ನಡುವೆ, ಬಿಜೆಪಿಯಲ್ಲೂ ಅಸಮಧಾನದ ಹೊಗೆ ಆಡುತ್ತಿರುವಾಗಲೇ ಅಶೋಕ್ ಕುಮಾರ್ ರೈ, ಕೈ ಹಿಡಿದು ಬಿಜೆಪಿಗೆ ಶಾಕ್ ನೀಡಿದ್ದರು. ಇದೀಗ ಅವರೇ ಪುತ್ತೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸುವುದು ಬಹುತೇಕ ಖಚಿತವಾಗಿದ್ದು, ಅಧಿಕೃತ ಘೋಷಣೆ ಒಂದೇ ಬಾಕಿ ಇದೆ ಎನ್ನಲಾಗುತ್ತಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ನಿನ್ನೆ ದೆಹಲಿಯಲ್ಲಿ ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆಯವರ ನೇತೃತ್ವದಲ್ಲಿ ನಡೆದ ಮಹತ್ವದ ಸಭೆಯಲ್ಲಿ ತೀರ್ಮಾನ ಮಾಡಲಾಗಿದ್ದು, ಇಂದು ನಾಳೆಯಲ್ಲಿ ಘೋಷಣೆಯಾಗಲಿದೆ.