Recent Posts

Monday, January 20, 2025
ದಕ್ಷಿಣ ಕನ್ನಡಸುದ್ದಿ

ಮನೆ, ಶಾಲೆ ಸಂಸ್ಕೃತಿಯ ಕೇಂದ್ರಗಳಾಗಬೇಕು : ಕಾಳಹಸ್ತೇಂದ್ರ ಸರಸ್ವತೀ ಸ್ವಾಮೀಜಿ – ಕಹಳೆ ನ್ಯೂಸ್

ಮಂಗಳೂರು: ಮನೆ, ಶಾಲೆ ಸಂಸ್ಕೃತಿಯ ಕೇಂದ್ರಗಳಾಗಬೇಕು. ಮಕ್ಕಳಲ್ಲಿ ಸಾಧನೆ ಮಾಡುವ ಛಲ ಮೂಡಿಸುವ ಶಿಕ್ಷಣ, ಬದಲಾವಣೆಯ ಜತೆಗೆ ತಾವೂ ಬದಲಾಗುವವರು ಸಾಧಕರಾಗುತ್ತಾರೆ ಎಂದು ಅನಂತಶ್ರೀ ವಿಭೂಷಿತ ಕಾಳಹಸ್ತೇಂದ್ರ ಸರಸ್ವತೀ ಸ್ವಾಮೀಜಿ ಹೇಳಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಶ್ರೀ ಕಾಳಿಕಾಂಬಾ ವಿನಾಯಕ ದೇವಸ್ಥಾನದ ಯುಗಾದಿ ಮಹೋತ್ಸವದ ಅಂಗವಾಗಿ ಶ್ರೀ ಕಾಳಿಕಾಂಬಾ ರಂಗ ಮಂಟಪದಲ್ಲಿ ಗುರುವಾರ ನಡೆದ ಧಾರ್ಮಿಕ ಸಭೆಯಲ್ಲಿ ಅವರು ಆಶೀರ್ವಚನ ನೀಡಿದರು. ಶೋಭಕೃತ್‌ ಸಂವತ್ಸರ ಎಲ್ಲರಿಗೂ ಸುಖ, ಶಾಂತಿ, ಸಮೃದ್ಧಿ ತರಲಿ. ಶ್ರೀ ಕಾಳಿಕಾಂಬಾ ವಿನಾಯಕ ಕ್ಷೇತ್ರದ ಬ್ರಹ್ಮರಥವು ಜಗನ್ಮಾತೆ ಶ್ರೀ ಕಾಳಿಕಾಂಬೆಯ ಪರಮಾನುಗ್ರಹದಿಂದ ಶೀಘ್ರದಲ್ಲಿ ನಿರ್ಮಾಣವಾಗಲಿ ಎಂದರು.

ಮುಖ್ಯ ಅತಿಥಿಯಾಗಿದ್ದ ಕುಟುಂಬ ಪ್ರಬೋಧನ, ಮಂಗಳೂರು ವಿಭಾಗ ಸಂಯೋಜಕ ಗಜಾನನ ಪೈ ತೋನ್ಸೆ ಮಾತನಾಡಿ, ಸನಾತನ ಹಿಂದೂ ಧರ್ಮ, ಸಂಸ್ಕೃತಿ, ನಮ್ಮದೇ ಆದ ವೇಷಭೂಷಣ, ದೇವಸ್ಥಾನ, ಮಠಮಂದಿರ, ಗುರುಗಳ ಜತೆ ಭಕ್ತಿ, ಶ್ರದ್ಧೆ, ಗೌರವದಿಂದ ಇರಬೇಕು ಎಂದರು.

ಕ್ಷೇತ್ರದ ಜೀರ್ಣೋದ್ಧಾರ ಹಾಗೂ ಬ್ರಹ್ಮಕಲಶೋತ್ಸವದ ಸವಿನೆನಪಿಗಾಗಿ ಪ್ರಕಟಿಸಿದ “ಪ್ರಪತ್ತಿ’ ಸ್ಮರಣಸಂಚಿಕೆಯನ್ನು ಸ್ವಾಮೀಜಿಗಳು ಅನಾವರಣಗೊಳಿಸಿದರು.
ಕ್ಷೇತ್ರದ ಆಡಳಿತ ಮೊಕ್ತೇಸರ ಕೆ. ಕೇಶವ ಆಚಾರ್ಯ ಅಧ್ಯಕ್ಷತೆ ವಹಿಸಿದ್ದರು.

ಕ್ಷೇತ್ರಕ್ಕೊಳಪಟ್ಟ ಕೂಡುವಳಿಕೆ ಮೊಕ್ತೇಸರರಾದ ವಿಟuಲ ಆಚಾರ್ಯ ಕುಂಬ್ಳೆ ಕೂಡುವಳಿಕೆ, ಕೃಷ್ಣಯ್ಯ ಆಚಾರ್ಯ ಕೈಂತಿಲ ಕೂಡುವಳಿಕೆ, ಶ್ರೀಧರ ಆಚಾರ್ಯ ಭಾಗಮಂಡಲ ಕೂಡುವಳಿಕೆ, ಜನಾರ್ದನ ಆಚಾರ್ಯ ಕಿನ್ಯ ತಚ್ಚಣಿ ಕೂಡುವಳಿಕೆ, ಕೆ. ರಮೇಶ್‌ ಆಚಾರ್ಯ ಮದ್ದಡ್ಕ, ಪಡಂಗಡಿ ಕೂಡುವಳಿಕೆ, ಪರಮೇಶ್ವರ ಆಚಾರ್ಯ ಜಯಂಪಾಡಿ, ಎಸ್‌.ಬಿ. ಲೀಲಾರಾಂ, ಸೋಮವಾರಪೇಟೆ ಕೂಡುವಳಿಕೆ ಹಾಗೂ ಸಮಾಜ ಸೇವೆಯಲ್ಲಿ ಬಿ. ಅಶೋಕ್‌ ಅವರನ್ನು ಅಭಿನಂದಿಸಲಾಯಿತು.

ಮಂಗಳೂರು ವಿ.ವಿ.ಯಿಂದ ಗೌರವ ಡಾಕ್ಟರೆಟ್‌ ಪದವಿ ಪಡೆದಿರುವ ಡಾ| ಜಿ. ರಾಮಕೃಷ್ಣ ಆಚಾರ್ಯ ಹಾಗೂ ಮುಖ್ಯಮಂತ್ರಿಗಳ ಚಿನ್ನದ ಪದಕ ಪಡೆದಿರುವ ಪುಟ್ಟಣ್ಣ ಆಚಾರ್ಯರನ್ನು ಅಭಿನಂದಿಸಲಾಯಿತು.

ಕ್ಷೇತ್ರದ ಎರಡನೇ ಮೊಕ್ತೇಸರ ಸುಂದರ ಆಚಾರ್ಯ ಬೆಳುವಾಯಿ ಸ್ವಾಗತಿಸಿದರು. ಮೂರನೇ ಮೊಕ್ತೇಸರ ಎ. ಲೊಕೇಶ ಆಚಾರ್ಯ ವಂದಿಸಿದರು. ಆಡಳಿತ ಮಂಡಳಿಯ ವಿಶೇಷ ಆಹ್ವಾನಿತ ಸದಸ್ಯ ಸುಜೀರ್‌ ವಿನೋದ್‌ ನಿರೂಪಿಸಿದರು.