Monday, January 20, 2025
ಸುದ್ದಿ

‘ಮುಂದಿನ ಶೋನಲ್ಲಿ ಮುದ್ದು ಅಜ್ಜಿಯರಿಗಾಗಿ ಕನ್ನಡ ಮಾತಾಡ್ತೀನಿ’: ಮತ್ತೆ ಟ್ರೋಲಿಗರ ಕೆಂಗಣ್ಣೀಗೆ ಗುರಿಯಾದ ಮೋಹಕತಾರೆ -ಕಹಳೆ ನ್ಯೂಸ್

ವೀಕೆಂಡ್ ವಿತ್ ರಮೇಶ್ ಸೀಸನ್ 5ರ ಮೊದಲ ಅತಿಥಿಯಾಗಿ ನಟಿ ಆಗಮಿಸಿ ತಮ್ಮ ಜೀವನದ ಸಾಕಷ್ಟು ಘಟನೆಗಳ ಕುರಿತು ಮೆಲುಕು ಹಾಕಿದ್ದಾರೆ. ಶೋಗೆ ಬಂದಿದ್ದ ರಮ್ಯಾ ಬಹುತೇಕ ಇಂಗ್ಲಿಷ್​ನಲ್ಲೇ ಮಾತನಾಡಿ ಟೀಕೆಗೆ ಒಳಗಾಗಿದ್ದಾರೆ. ಇದೀಗ ಟೀಕೆ ಮಾಡಿದವರಿಗೆ ರಮ್ಯಾ ತಿರುಗೇಟು ನೀಡಿದ್ದು, ತಾವು ಇಂಗ್ಲಿಷ್ ಮಾತನಾಡಿದ್ದು ಏಕೆ? ಎಂಬ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

‘ವೀಕೆಂಡ್ ವಿತ್ ರಮೇಶ್​’ ಸೀಸನ್ 5ರ ಮೊದಲ ಅತಿಥಿಯಾಗಿ ನಟಿ ರಮ್ಯಾ ಆಗಮಿಸಿದ್ದು ವೀಕ್ಷಕರಿಗೆ ಖುಷಿ ಇತ್ತು. ಆದರೆ ರಮ್ಯಾ ಕನ್ನಡದಲ್ಲಿ ಮಾತನಾಡದೆ ಇಂಗ್ಲಿಷ್​ನಲ್ಲಿ ಮಾತನಾಡಿದ್ದು ಅನೇಕರಿಗೆ ಬೇಸರ ಮೂಡಿಸಿತ್ತು. ಈ ವಿಚಾರದಲ್ಲಿ ರಮ್ಯಾ ಅವರನ್ನು ಟ್ರೋಲ್ ಮಾಡಲಾಗಿತ್ತು. ಈಗ ಆ ಬಗ್ಗೆ ರಮ್ಯಾ ಪ್ರತಿಕ್ರಿಯೆ ನೀಡಿದ್ದಾರೆ.

ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ಮೀಮ್ ಒಂದಕ್ಕೆ ಕಮೆಂಟ್ ಮಾಡಿರುವ ರಮ್ಯಾ ‘ಶೋನ ಹೆಸರು ವೀಕೆಂಡ್ ವಿತ್ ರಮೇಶ್. ಶೋಗೆ ಬಂದ ಅತಿಥಿಗಳು ಕನ್ನಡದವರು ಆಗಿರಲಿಲ್ಲ. ಮುದ್ದು ಅಜ್ಜಿಯರಿಗಾಗಿ ಮುಂದಿನ ಶೋನಲ್ಲಿ ಕನ್ನಡ ಮಾತಾಡ್ತೀನಿ’ ಎಂದು ಹೇಳಿದ್ದಾರೆ.

‘ಇದು ಕೇವಲ ಶೋ. ಇದನ್ನು ಶೋ ರೀತಿಯಲ್ಲೇ ನೋಡಿ. ಇಂಗ್ಲಿಷ್​​ನಲ್ಲಿ ಮಾತಾನಾಡಿದರು ಎಂದ ಮಾತ್ರಕ್ಕೆ ಅವರ ವಿರುದ್ಧ ದ್ವೇಷ ಕಾರೋದು ಸರಿ ಅಲ್ಲ’ ಎಂದು ರಮ್ಯಾ ಹೇಳಿದ್ದಾರೆ. ಇನ್ನೂ ಕೆಲವರು ರಮ್ಯಾ ವಿರುದ್ಧ ಕಿಡಿಕಾರಿದ್ದಾರೆ. ‘ತಪ್ಪಿದ್ದಾಗ ಒಪ್ಪಿಕೊಳ್ಳಿ. ಅದರ ಬದಲು ಈ ರೀತಿ ಹೇಳೋದು ಸರಿ ಅಲ್ಲ ‘ ಎಂದಿದ್ದಾರೆ.