Recent Posts

Saturday, September 21, 2024
ಸುದ್ದಿ

ಗಣೇಶ ಚತುರ್ಥಿ ಆಚರಣೆಯ ಆಧ್ಯಾತ್ಮಿಕ ಮಹತ್ವ ; ಗಣೇಶ ಚತುರ್ಥಿಯಂದು ನೂತನ ಶ್ರೀ ಗಣೇಶ ಮೂರ್ತಿಯನ್ನು ತರುವ ಹಿಂದಿನ ಉದ್ದೇಶವೇನು? – ಕಹಳೆ ನ್ಯೂಸ್

ಷಾಢ ಹುಣ್ಣಿಮೆಯಿಂದ ಕಾರ್ತಿಕ ಹುಣ್ಣಿಮೆಯವರೆಗಿನ ೧೨೦ ದಿನಗಳ ಕಾಲದಲ್ಲಿ ವಿನಾಶಕಾರಿ, ತಮಪ್ರಧಾನ ಯಮಲಹರಿಗಳು ಪೃಥ್ವಿಯ ಮೇಲೆ ಹೆಚ್ಚು ಪ್ರಮಾಣದಲ್ಲಿ ಬರುತ್ತವೆ. ಈ ಸಮಯದಲ್ಲಿ ಅವುಗಳ ತೀವ್ರತೆಯೂ ಹೆಚ್ಚಿಗೆ ಇರುತ್ತದೆ. ಈ ಕಾಲಾವಧಿಯಲ್ಲಿ, ಅಂದರೆ ಭಾದ್ರಪದ ಶುಕ್ಲ ಚತುರ್ಥಿಯಿಂದ ಅನಂತ ಚತುರ್ದಶಿಯ ವರೆಗೆ ಗಣೇಶ ಲಹರಿಗಳು ಪೃಥ್ವಿಯ ಮೇಲೆ ಹೆಚ್ಚಿನ ಪ್ರಮಾಣದಲ್ಲಿ ಬರುವುದರಿಂದ ಯಮಲಹರಿಗಳ ತೀವ್ರತೆ ಕಡಿಮೆಯಾಗಲು ಸಹಾಯವಾಗುತ್ತದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಶುಭಕಾರ್ಯಗಳಲ್ಲಿ ಗಣೇಶನನ್ನು ಏಕೆ ಪ್ರಥಮ ಪೂಜೆಯನ್ನು ಸಲ್ಲಿಸುತ್ತಾರೆ?

ಜಾಹೀರಾತು

ಗಣಪತಿಯು ದಿಕ್ಕುಗಳ ಅಧಿಪತಿ. ಗಣಪತಿಯ ಅನುಮತಿಯಿಲ್ಲದೇ ಯಾವುದೇ ದಿಕ್ಕಿನಿಂದ ಇತರ ದೇವತೆಗಳು ಪೂಜಾಸ್ಥಳಕ್ಕೆ ಬರಲಾರರು; ಗಣೇಶ ಪೂಜೆಯಿಂದ, ನಾವು ಆಹ್ವಾನಿಸುವ ದೇವತೆಯು ಪೂಜೆಯ ಸ್ಥಳಕ್ಕೆ ಆಗಮಿಸಲು ಆಯಾ ದಿಕ್ಕು ಮುಕ್ತವಾಗುತ್ತದೆ.ಇದನ್ನೇ ಮಹಾದ್ವಾರದ ಅಥವಾ ಮಹಾಗಣಪತಿಯ ಪೂಜೆ ಎನ್ನುತ್ತಾರೆ. ಅಲ್ಲದೆ, ಮನುಷ್ಯರು ಮಾತನಾಡುವ (ನಾದ) ಭಾಷೆಯನ್ನು ದೇವತೆಗಳ (ಪ್ರಕಾಶ) ಭಾಷೆಗೆ ರೂಪಾಂತರಿಸಿ, ಗಣಪತಿಯು ನಮ್ಮ ಪ್ರಾರ್ಥನೆಯನ್ನು ಅವರಿಗೆ ತಲುಪಿಸುತ್ತಾನೆ. ಗಣಪತಿಯನ್ನು ವಿಘ್ನಹರ್ತಾ ಎಂದು ಕೂಡ ಕರೆಯುತ್ತಾರೆ.

ಶ್ರೀ ಗಣೇಶನ ಪೂಜೆಯಲ್ಲಿ ಉಪಯೋಗಿಸುವ ವಿಶಿಷ್ಟ ವಸ್ತು ದೂರ್ವೆ :

ಗಣೇಶನ ಪೂಜೆಯಲ್ಲಿ ದೂರ್ವೆಗೆ (ಗರಿಕೆ) ವಿಶೇಷ ಮಹತ್ವವಿದೆ.

 ವ್ಯುತ್ಪತ್ತಿ ಮತ್ತು ಅರ್ಥ:

ದೂಃಅವಮ್ ಹೀಗೆ ದೂರ್ವೆ ಈ ಶಬ್ದವು ನಿರ್ಮಾಣವಾಗಿದೆ. ‘ದೂಃ’ ಅಂದರೆ ದೂರದಲ್ಲಿ ಇರುವುದು ಮತ್ತು ‘ಅವಮ್’ ಅಂದರೆ ಯಾವುದು ಹತ್ತಿರ ತರುತ್ತದೆಯೋ ಅದು. ದೂರದಲ್ಲಿರುವ ಶ್ರೀ ಗಣೇಶನ ಪವಿತ್ರಕಗಳನ್ನು ಯಾವುದು ಹತ್ತಿರ ತರುತ್ತದೆಯೋ, ಅದುವೇ ದೂರ್ವೆ ಆಗಿದೆ.

 ಶ್ರೀ ಗಣಪತಿಗೆ ದೂರ್ವೆಯನ್ನು ಅರ್ಪಿಸುವುದರ ಕಾರಣಗಳು:

ಪೌರಾಣಿಕ ಕಾರಣ: ಗಣಪತಿಯು ತನ್ನನ್ನು ಮದುವೆಯಾಗಬೇಕೆಂದು ಓರ್ವ ಅಪ್ಸರೆಯು ಧ್ಯಾನಮಗ್ನನಾಗಿದ್ದ ಗಣಪತಿಯ ಧ್ಯಾನಭಂಗ ಮಾಡಿದಳು. ಗಣಪತಿಯು ವಿವಾಹಕ್ಕೆ ನಿರಾಕರಿಸಿದ್ದರಿಂದ ಅಪ್ಸರೆಯು ಗಣಪತಿಗೆ ಶಾಪ ಕೊಟ್ಟಳು. ಇದರಿಂದ ಗಣಪತಿಯ ತಲೆಗೆ ದಾಹವಾಗತೊಡಗಿತು. ಈ ದಾಹವನ್ನು ಕಡಿಮೆ ಮಾಡಿಕೊಳ್ಳಲು ಗಣಪತಿಯು ತಲೆಯ ಮೇಲೆ ದೂರ್ವೆಗಳನ್ನು ಧರಿಸಿದನು. ಈ ಕಾರಣಕ್ಕಾಗಿ ಗಣಪತಿಗೆ ದೂರ್ವೆಗಳನ್ನು ಅರ್ಪಿಸುತ್ತಾರೆ.’

ಆಯುರ್ವೇದಕ್ಕನುಸಾರ ಕಾರಣ: ಆಯುರ್ವೇದವು ಸಹ ‘ದೂರ್ವೆಯ ರಸದಿಂದ ಶರೀರದ ಉಷ್ಣತೆಯು ಕಡಿಮೆಯಾಗುತ್ತದೆ’ ಎಂದು ಹೇಳುತ್ತದೆ.

ಆಧ್ಯಾತ್ಮಿಕ ಕಾರಣ: ನಾವು ಪೂಜಿಸುವ ಮೂರ್ತಿಯಲ್ಲಿ ದೇವತ್ವವು ಹೆಚ್ಚಿಗೆ ಬಂದು ನಮಗೆ ಚೈತನ್ಯದ ಲಾಭವಾಗಬೇಕು ಎಂಬುದು ಪೂಜೆಯ ಒಂದು ಉದ್ದೇಶವಾಗಿರುತ್ತದೆ. ಆದುದರಿಂದ ಆಯಾಯ ದೇವತೆಗಳ ತತ್ತ್ವವನ್ನು ಹೆಚ್ಚೆಚ್ಚು ಆಕರ್ಷಿಸುವಂತಹ ವಸ್ತುಗಳನ್ನು ದೇವತೆಗಳಿಗೆ ಅರ್ಪಿಸುವುದು ಸೂಕ್ತವಾಗಿದೆ. ದೂರ್ವೆಯಲ್ಲಿ ಗಣೇಶತತ್ತ್ವವನ್ನು ಆಕರ್ಷಿಸುವ ಕ್ಷಮತೆಯು ಎಲ್ಲಕ್ಕಿಂತ ಹೆಚ್ಚಿಗೆ ಇರುವುದರಿಂದ ಗಣಪತಿಗೆ ದೂರ್ವೆಗಳನ್ನು ಅರ್ಪಿಸುತ್ತಾರೆ..

ದೂರ್ವೆಗಳ ಸಂಖ್ಯೆ ಎಷ್ಟಿರಬೇಕು?: ಬೆಸ ಸಂಖ್ಯೆಗಳು ಶಕ್ತಿಗೆ ಸಂಬಂಧಿಸಿರುತ್ತವೆ. ದೂರ್ವೆಗಳನ್ನು ಹೆಚ್ಚಾಗಿ ಬೆಸ ಸಂಖ್ಯೆಗಳಲ್ಲಿ (ಕನಿಷ್ಠ ೩ ಅಥವಾ ೫, ೭, ೨೧ ಇತ್ಯಾದಿ) ಅರ್ಪಿಸುತ್ತಾರೆ. ಬೆಸ ಸಂಖ್ಯೆಗಳಿಂದ ಮೂರ್ತಿಯಲ್ಲಿ ಶಕ್ತಿಯು ಹೆಚ್ಚು ಪ್ರಮಾಣದಲ್ಲಿ ಬರುತ್ತದೆ. ಗಣಪತಿಗೆ ವಿಶೇಷವಾಗಿ ೨೧ ದೂರ್ವೆಗಳನ್ನು ಅರ್ಪಿಸುತ್ತಾರೆ. ೨೧ ಈ ಸಂಖ್ಯೆಯು ಸಂಖ್ಯಾಶಾಸ್ತ್ರಕ್ಕನುಸಾರ ೨ + ೧=೩ ಹೀಗೆ ಆಗಿದೆ. ಶ್ರೀ ಗಣಪತಿಯು ‘೩’ ಈ ಸಂಖ್ಯೆಗೆ ಸಂಬಂಧಿಸಿದ್ದಾನೆ. ‘೩’ ಈ ಸಂಖ್ಯೆಯು ಕರ್ತ, ಧರ್ತದೊಂದಿಗೆ ಹರ್ತವೂ ಆಗಿರುವುದರಿಂದ ಈ ಶಕ್ತಿಯಿಂದ ೩೬೦ ಲಹರಿಗಳನ್ನು ನಾಶ ಮಾಡಲು ಸಾಧ್ಯವಾಗುತ್ತದೆ. ಸಮ ಸಂಖ್ಯೆಗಳಲ್ಲಿ ದೂರ್ವೆಗಳನ್ನು ಅರ್ಪಿಸಿದರೆ ೩೬೦ ಲಹರಿಗಳು ಹೆಚ್ಚಿಗೆ ಆಕರ್ಷಿತವಾಗುತ್ತವೆ ಮತ್ತು ನಂತರ ೧೦೮ ಲಹರಿಗಳೂ ಆಕರ್ಷಿತವಾಗುತ್ತವೆ. (ರಾವಣನು ಪ್ರತಿದಿನ ೩೬೦ + ೧೦೮ = ೪೬೮ ದೂರ್ವೆಗಳನ್ನು ಅರ್ಪಿಸುತ್ತಿದ್ದನು.)

ಶ್ರೀ ಗಣೇಶನ ಮೂರ್ತಿಯು ಯಾವ ರೀತಿಯಿರಬೇಕು:

ಇಂದು ಧರ್ಮಶಿಕ್ಷಣದ ಅಭಾವದಿಂದ ಮತ್ತು ಅಗ್ಗದ ಜನಪ್ರಿಯತೆಗಾಗಿ ಸಾರ್ವಜನಿಕ ಗಣೇಶೋತ್ಸವ ಮಂಡಳಿಗಳು ಪ್ರತಿವರ್ಷ ಚಿತ್ರವಿಚಿತ್ರ ರೂಪದಲ್ಲಿನ ಮತ್ತು ಬೃಹತ್ ಆಕಾರದ ಶ್ರೀ ಗಣೇಶಮೂರ್ತಿಯನ್ನು ಕುಳ್ಳಿರಿಸುತ್ತಾರೆ.

ಪ್ರತಿವರ್ಷ ಅದರಲ್ಲಿ ವೈವಿಧ್ಯತೆ ಬೇಕೆಂದು ಕೆಲವರು ಬೇರೆ ಬೇರೆ ಪ್ರಕಾರದ ಮೂರ್ತಿಗಳನ್ನು ಖರೀದಿಸುತ್ತಾರೆ. ಗಣೇಶನ ಮೂರ್ತಿ ಆಟದ ಸಾಮಾನಲ್ಲ, ಭಕ್ತಿಭಾವವನ್ನು ಹೆಚ್ಚಿಸುವುದು, ಈಶ್ವರೀ ಚೈತನ್ಯವನ್ನು ಗ್ರಹಿಸುವುದು ಮುಂತಾದವುಗಳಿಗಾಗಿ ಶ್ರೀ ಗಣೇಶನ ಮೂರ್ತಿಯನ್ನು ಮನೆಗೆ ತಂದು ಪೂಜಿಸಬೇಕಾಗಿರುತ್ತದೆ. ಧರ್ಮಶಾಸ್ತ್ರದಲ್ಲಿ ಹೇಳಿದ್ದನ್ನು ಎಂದಿಗೂ ಬದಲಾಯಿಸಬಾರದು.

ಮೂರ್ತಿಯು ದೇವತೆಯ ಮೂಲ ರೂಪದೊಂದಿಗೆ ಎಷ್ಟು ಹೋಲುತ್ತದೆಯೋ, ಅಷ್ಟೇ ಹೆಚ್ಚು ಪ್ರಮಾಣದಲ್ಲಿ ಆ ದೇವತೆಯ ತತ್ತ್ವವು ಮೂರ್ತಿಯ ಕಡೆಗೆ ಆಕರ್ಷಿಸುತ್ತದೆ. ಋಷಿಮುನಿಗಳು ಮತ್ತು ಸಂತರು ಶಾಸ್ತ್ರಗಳನ್ನು ಬರೆದಿದ್ದಾರೆ. ಅವರಿಗೆ ದೇವತೆಗಳ ಸಾಕ್ಷಾತ್ಕಾರವು ಹೇಗೆ ಆಗಿದೆಯೋ, ಹಾಗೇ ಅವರು ದೇವತೆಗಳನ್ನು ಶಾಸ್ತ್ರದಲ್ಲಿ ವರ್ಣಿಸಿದ್ದಾರೆ; ಆದುದರಿಂದ ಶಾಸ್ತ್ರದಲ್ಲಿ ಹೇಳಿ ದಂತೆ ಮೂರ್ತಿಯನ್ನು ತಯಾರಿಸಿದರೆ ಅದು ಸಾತ್ತ್ವಿಕವಾಗುತ್ತದೆ.

ಅಧ್ಯಾತ್ಮಶಾಸ್ತ್ರದ ದೃಷ್ಟಿಯಿಂದ ಪ್ರತಿಯೊಂದು ದೇವತೆ ಎಂದರೆ ಒಂದು ವಿಶಿಷ್ಟ ತತ್ತ್ವವಾಗಿದೆ. ‘ಶಬ್ದ, ಸ್ಪರ್ಶ, ರೂಪ, ರಸ, ಗಂಧ ಮತ್ತು ಅವುಗಳಿಗೆ ಸಂಬಂಧಿಸಿದ ಶಕ್ತಿ ಒಟ್ಟಿಗೆ ಇರುತ್ತವೆ’, ಈ ಸಿದ್ಧಾಂತಕ್ಕನುಸಾರ ಮೂರ್ತಿವಿಜ್ಞಾನದಂತೆ ಮೂರ್ತಿಯನ್ನು ತಯಾರಿಸಿದರೆ ಆ ಮೂರ್ತಿಯಲ್ಲಿ ಆ ದೇವತೆಯ ತತ್ತ್ವವು ಆಕರ್ಷಿಸುತ್ತದೆ.

‘ಶ್ರೀ ಗಣಪತಿ ಅಥರ್ವಶೀರ್ಷ’ದಲ್ಲಿ ವರ್ಣಿಸಿದ ಶ್ರೀ ಗಣೇಶನ ಮೂರ್ತಿವಿಜ್ಞಾನ :

‘ಶ್ರೀ ಗಣಪತಿ ಅಥರ್ವಶೀರ್ಷ’ದಲ್ಲಿ ಗಣೇಶನ ರೂಪ (ಮೂರ್ತಿವಿಜ್ಞಾನ) ವನ್ನು ಮುಂದಿನಂತೆ ಕೊಡಲಾಗಿದೆ. ? ‘ಏಕದಂತಂ ಚತುರ್ಹಸ್ತಂ|’ ಅಂದರೆ ‘ಏಕದಂತ, ಚತುರ್ಭುಜ, ಪಾಶ ಮತ್ತು ಅಂಕುಶವನ್ನು ಧರಿಸಿರುವವನು, ಒಂದು ಕೈಯಲ್ಲಿ (ಮುರಿದ) ದಂತವನ್ನು (ಹಲ್ಲು) ಧರಿಸುವವನು ಮತ್ತು ಇನ್ನೊಂದು ಕೈಯು ವರದಮುದ್ರೆಯಲ್ಲಿರುವವನು, ಮೂಷಕ ಚಿಹ್ನೆ ಇರುವ ಧ್ವಜವಿರುವವನು, ರಕ್ತ (ಕೆಂಪು) ವರ್ಣ, ಲಂಬೋದರ, ಮೊರದಂತೆ ಕಿವಿಗಳಿರುವವನು, ರಕ್ತ (ಕೆಂಪು) ವಸ್ತ್ರಗಳನ್ನು ಉಟ್ಟುಕೊಂಡಿರುವವನು, ಮೈಗೆ ರಕ್ತಚಂದನದ ಲೇಪನವನ್ನು ಹಚ್ಚಿಕೊಂಡವನು ಮತ್ತು ರಕ್ತ (ಕೆಂಪು) ಪುಷ್ಪಗಳಿಂದ ಪೂಜಿಸಲ್ಪಡುವವನು.’

ಅಥರ್ವಶೀರ್ಷದಲ್ಲಿ ಶ್ರೀ ಗಣೇಶನು ಒಂದು ಕೈಯಲ್ಲಿ (ಮುರಿದ) ದಂತವನ್ನು ಧರಿಸಿರುವವನಾಗಿದ್ದಾನೆ, ಎಂದು ಅವನ ರೂಪವನ್ನು ಹೇಳಲಾಗಿದೆ. ಶ್ರೀ ಗಣೇಶನು ಮುಖ್ಯವಾಗಿ ಜ್ಞಾನದ (ವಿದ್ಯೆಯ) ದೇವತೆಯಾಗಿದ್ದಾನೆ. ‘ಮೋದಕ’ವು ಜ್ಞಾನದ ಪ್ರತೀಕವಾಗಿದೆ. ಈ ಕಾರಣದಿಂದಾಗಿ ಶ್ರೀ ಗಣೇಶನ ಕೈಯಲ್ಲಿ ಮುರಿದ ಹಲ್ಲಿನ ಬದಲಿಗೆ ಮೋದಕವನ್ನು ತೋರಿಸುವ ಪದ್ಧತಿಯು ಪ್ರಚಲಿತವಾಗಿರಬೇಕು.

ಗಣೇಶ ಚತುರ್ಥಿಯಂದು ನೂತನ ಶ್ರೀ ಗಣೇಶ ಮೂರ್ತಿಯನ್ನು ತರುವ ಹಿಂದಿನ ಉದ್ದೇಶವೇನು?

ಮನೆಯಲ್ಲಿ ಪೂಜೆಗಾಗಿ ಗಣಪತಿಯನ್ನು ಇಟ್ಟಿರುವಾಗಲೂ ನೂತನ ಮೂರ್ತಿಯನ್ನು ತರುವ ಉದ್ದೇಶವು ಮುಂದಿನಂತಿದೆ. ಗಣೇಶ ಚತುರ್ಥಿಯ ಸಮಯದಲ್ಲಿ ಗಣೇಶ ಲಹರಿಗಳು ಅತಿ ಹೆಚ್ಚಿನ ಪ್ರಮಾಣದಲ್ಲಿ ಪೃಥ್ವಿಯ ಮೇಲೆ ಬರುತ್ತವೆ. ನಿತ್ಯದ ಪೂಜೆಯಲ್ಲಿರುವ ಮೂರ್ತಿಯಲ್ಲಿ ಅವುಗಳ ಆವಾಹನೆ ಮಾಡಿದರೆ ಅದರಲ್ಲಿ ಬಹಳಷ್ಟು ಶಕ್ತಿ ಬರಬಹುದು. ಇಂತಹ ಹೆಚ್ಚು ಶಕ್ತಿ ಇರುವ ಮೂರ್ತಿಯ ಎಲ್ಲ ಬಗೆಯ ಪೂಜೆ-ಅರ್ಚನೆಗಳನ್ನು ವರ್ಷಪೂರ್ತಿ ಸರಿಯಾಗಿ ಮಾಡುವುದು ಕಠಿಣವಾಗಿರುತ್ತದೆ; ಏಕೆಂದರೆ ಅದಕ್ಕೆ ಕರ್ಮಕಾಂಡದ ಬಹಳಷ್ಟು ಬಂಧನಗಳನ್ನು ಪಾಲಿಸಬೇಕಾಗುತ್ತದೆ. ಈ ಕಾರಣಕ್ಕಾಗಿಯೇ ಗಣೇಶ ಲಹರಿಗಳನ್ನು ಆವಾಹನೆ ಮಾಡಲು ನೂತನ ಮೂರ್ತಿಯನ್ನು ಉಪಯೋಗಿಸಿ ನಂತರ ಅದನ್ನು ವಿಸರ್ಜನೆ ಮಾಡುತ್ತಾರೆ. ಗಣೇಶ ಲಹರಿಗಳಲ್ಲಿನ ಸತ್ತ್ವ, ರಜ ಮತ್ತು ತಮದ ಪ್ರಮಾಣವು ೫ : ೫ : ೫ ಹೀಗಿದ್ದರೆ ಸರ್ವಸಾಧಾರಣ ವ್ಯಕ್ತಿಯಲ್ಲಿ ಅದರ ಪ್ರಮಾಣವು ೧ : ೩ : ೫ ಹೀಗೆ ಇರುತ್ತದೆ; ಆದ್ದರಿಂದ ಸರ್ವಸಾಧಾರಣ ವ್ಯಕ್ತಿಯು ಗಣೇಶ ಲಹರಿಗಳನ್ನು ಹೆಚ್ಚು ಸಮಯದ ವರೆಗೆ ಗ್ರಹಣ ಮಾಡಲಾರನು.

ಶಾಸ್ತ್ರೋಕ್ತ ವಿಧಿ ಮತ್ತು ರೂಢಿ ಇವುಗಳ ಅವಧಿ:

‘ಭಾದ್ರಪದ ಶುಕ್ಲ ಚತುರ್ಥಿಯ ದಿನ ಮಣ್ಣಿನ ಗಣಪತಿಯನ್ನು ತಯಾರಿಸಿ, ಅದನ್ನು ಎಡಗೈ ಮೇಲಿಟ್ಟು ಅಲ್ಲಿಯೇ ಸಿದ್ಧಿವಿನಾಯಕ ಹೆಸರಿನಿಂದ ಪ್ರಾಣಪ್ರತಿಷ್ಠೆ ಮತ್ತು ಪೂಜೆಯನ್ನು ಮಾಡಿ ಕೂಡಲೇ ವಿಸರ್ಜನೆ ಮಾಡಬೇಕು ಎಂಬ ಶಾಸ್ತ್ರವಿದೆ. ಆದರೆ ಮಾನವರು ಉತ್ಸವಪ್ರಿಯರಾಗಿರುವುದರಿಂದ ಇಷ್ಟರಿಂದಲೇ ಅವರಿಗೆ ಸಮಾಧಾನವಾಗಲಿಲ್ಲ. ಆದುದರಿಂದ ಒಂದೂವರೆ, ಐದು, ಏಳು ಅಥವಾ ಹತ್ತು ದಿನ ಗಣಪತಿಯ ಮೂರ್ತಿಯನ್ನು ಇಟ್ಟು ಉತ್ಸವ ಮಾಡತೊಡಗಿದರು. ಕೆಲವರು ಗಣಪತಿಯ ವಿಸರ್ಜನೆಯನ್ನು ಗೌರಿಯ ಜೊತೆಗೆ ಮಾಡುತ್ತಾರೆ. ಯಾರಾದರೊಬ್ಬರ ಕುಲದಲ್ಲಿ ಗಣಪತಿಯನ್ನು ಐದು ದಿನ ಇಡುವ ಪದ್ಧತಿ ಇದ್ದು ಅವರು ಅದನ್ನು ಒಂದೂವರೆ ಅಥವಾ ಏಳು ದಿನ ಇಡಬೇಕಾಗಿದ್ದರೆ ಅವರು ಹಾಗೆ ಮಾಡಬಹುದು. ಇದಕ್ಕೆ ಯಾವುದೇ ಅಧಿಕಾರಯುತ ವ್ಯಕ್ತಿಯನ್ನು ಕೇಳುವ ಆವಶ್ಯಕತೆಯಿಲ್ಲ. ತಮ್ಮ ತಮ್ಮ ರೂಢಿಗನುಸಾರ ಮೊದಲನೆಯ, ಎರಡನೆಯ, ಮೂರನೆಯ, ಆರನೆಯ, ಏಳನೆಯ ಅಥವಾ ಹತ್ತನೆಯ ದಿನ ಗಣೇಶಮೂರ್ತಿಯ ವಿಸರ್ಜನೆಯನ್ನು ಮಾಡಬೇಕು.

ಮೂರ್ತಿಯು ಭಗ್ನವಾದರೆ ಏನು ಮಾಡಬೇಕು?

ಮೂರ್ತಿಯ ಪ್ರಾಣಪ್ರತಿಷ್ಠೆಯನ್ನು ಮಾಡುವುದಕ್ಕಿಂತ ಮೊದಲು ಯಾವುದಾದರೊಂದು ಅವಯವಕ್ಕೆ ಏಟಾದರೆ ಅಥವಾ ಭಿನ್ನವಾದರೆ ಚಿಂತಿಸುವ ಕಾರಣವಿಲ್ಲ, ಅದರ ಬದಲು ಬೇರೆ ಮೂರ್ತಿಯನ್ನು ತಂದು ಪೂಜಿಸಬೇಕು. ವಿಸರ್ಜನೆಗಾಗಿ ಅಕ್ಷತೆ ಹಾಕಿದ ನಂತರ (ದೈವತ್ತ್ವವು ಹೋದ ನಂತರ) ಅವಯವಗಳಿಗೆ ಏಟಾದರೆ ಅಥವಾ ಭಿನ್ನವಾದರೆ ಆ ಮೂರ್ತಿಯನ್ನು ನಿತ್ಯದಂತೆ ವಿಸರ್ಜನೆ ಮಾಡಬೇಕು. ಪ್ರಾಣ ಪ್ರತಿಷ್ಠೆಯಾದ ನಂತರ ಅವಯವಕ್ಕೆ ಏಟಾದರೆ ಅಥವಾ ಮುರಿದರೆ ಆ ಮೂರ್ತಿಗೆ ಅಕ್ಷತೆಯನ್ನು ಅರ್ಪಿಸಿ ವಿಸರ್ಜಿಸಬೇಕು.

ಗಣೇಶ ಚತುರ್ಥಿಯ ದಿನ ಚಂದ್ರನ ದರ್ಶನವನ್ನು ಪಡೆದುಕೊಳ್ಳದಿರುವುದರ ಕಾರಣ:

ಮನಸ್ಸಿನ ಚಂಚಲತೆಯು ಸುಮಾರು ಒಂದು ವರ್ಷದವರೆಗೆ ಉಳಿಯುತ್ತದೆ. ಮನಸ್ಸಿನ ಚಂಚಲತೆಯ ಪ್ರಚಂಡ ಪ್ರಭಾವದಿಂದಾಗಿ ಯಾವುದಾದರೊಂದು ಘಟನೆಯು ಘಟಿಸುವ ಮೊದಲೇ ಅದು ಘಟಿಸಿ ಹೋಗಿದೆ ಎಂಬ ತಪ್ಪುತಿಳುವಳಿಕೆ ಅಥವಾ ಗಾಳಿ ಸುದ್ದಿ ಹರಡುವ ಸಾಧ್ಯತೆ ಇರುತ್ತದೆ. ಇದನ್ನೇ ಯಾವುದಾದರೊಂದು ಅಡಚಣೆಯನ್ನು ಮೈಮೇಲೆ ಎಳೆದುಕೊಳ್ಳುವುದು ಎಂದು ಹೇಳುತ್ತಾರೆ. ಈ ಕಾರಣಕ್ಕಾಗಿ ಗಣೇಶ ಚತುರ್ಥಿಯ ದಿನ ಚಂದ್ರನನ್ನು ನೋಡುವುದು ಅಶುಭವೆಂದು ತಿಳಿದುಕೊಳ್ಳುತ್ತಾರೆ.

ಜ್ಯೋತಿಷ್ಯ ಮತ್ತು ಚಂದ್ರದರ್ಶನ :

ಗಣೇಶ ಚತುರ್ಥಿಯ ದಿನದಂದು ಯಾವ ವ್ಯಕ್ತಿಯ ರಾಶಿಯಲ್ಲಿ ಯಾವುದೇ ಸ್ಥಾನದಲ್ಲಿ ಚಂದ್ರನಿದ್ದರೆ ಅವನು ಚಂದ್ರದರ್ಶನವನ್ನು ಮಾಡಲೇಬಾರದು. ಇಂತಹ ವ್ಯಕ್ತಿಯು ನೀರಿನಲ್ಲಿ ಕಾಣಿಸುವ ಚಂದ್ರನ ಪ್ರತಿಬಿಂಬವನ್ನು ಸಹ ನೋಡಬಾರದು. ಏಕೆಂದರೆ ನೀರಿನಿಂದ ನೆನೆದಿರುವ ಮಣ್ಣಿನಲ್ಲಿಯೂ ಪ್ರಜನನ ಶಕ್ತಿಯು ಹೆಚ್ಚಾಗಿರುವುದರಿಂದ ಅಲ್ಲಿಯೂ ಪ್ರಚಂಡ ಪ್ರಮಾಣದಲ್ಲಿ ರಜೋಗುಣವು ನಿರ್ಮಾಣವಾಗಿರುತ್ತದೆ.

 ಚತುರ್ಥಿ ಸಂದರ್ಭದಲ್ಲಿ ಮಾಡಬೇಕಾದ ಕೆಲವು ಆಚರಣೆಗಳು ಹಾಗೂ ಉಪಾಸನೆಗಳು:

ರಂಗೋಲಿ ಬಿಡಿಸುವುದು:

ರಂಗೋಲಿಯನ್ನು ಸ್ತ್ರೀಯರೇ ಬಿಡಿಸಬೇಕು, ಪುರುಷರು ಬಿಡಿಸಬಾರದು.

ಶ್ರೀ ಗಣೇಶ ತತ್ತ್ವ ಆಕರ್ಷಿಸುವ ದೇವತೆಯ ಪೂಜೆ ಮಾಡುವುದಿರುವುದರಿಂದ, ಆ ತತ್ತ್ವಕ್ಕೆ ಸಂಬಂಧಿಸಿದ ರಂಗೋಲಿ ಬಿಡಿಸಬೇಕು.

ದೇವತೆಗಳ ಹೆಸರಿನ ಅಥವಾ ರೂಪದ ರಂಗೋಲಿ ಯನ್ನು ಬಿಡಿಸದೇ, ಸ್ವಸ್ತಿಕ ಅಥವಾ ಬಿಂದುಗಳಿಂದ ರಂಗೋಲಿ ಯನ್ನು ಬಿಡಿಸಬೇಕು.

ರಂಗೋಲಿ ಬಿಡಿಸಿದ ನಂತರ ಅದಕ್ಕೆ ಅರಿಶಿನ ಕುಂಕುಮ ಅರ್ಪಿಸಬೇಕು.

ನಾಮಸ್ಮರಣೆ : ಗಣೇಶೋತ್ಸವದ ಸಂದರ್ಭದಲ್ಲಿ ಅಂದರೆ ಗಣೇಶ ಚತುರ್ಥಿಯಿಂದ ಅನಂತ ಚತುರ್ಥಿಯವರೆಗಿನ ಕಾಲದಲ್ಲಿ ಶ್ರೀಗಣೇಶತತ್ತ್ವ ೧೦೦೦ ಪಟ್ಟು ಹೆಚ್ಚು ಪ್ರಮಾಣದಲ್ಲಿ ಪೃಥ್ವಿಯ ಮೇಲೆ ಕಾರ್ಯನಿರವಿರುವುದರಿಂದ ಶ್ರೀ ಗಣೇಶತತ್ತ್ವದ ಲಾಭ ಪಡೆದುಕೊಳ್ಳಲು  ಓಂ ಗಂ ಗಣಪತಯೇ ನಮಃ  ಎಂದು ನಾಮಜಪವನ್ನು ಹೆಚ್ಚೆಚ್ಚು ಮಾಡಬೇಕು.

ಪ್ರಾರ್ಥನೆ : ’ಹೇ ಶ್ರೀ ಗಣೇಶಾ, ಗಣೇಶೋತ್ಸವದ ಸಮಯದಲ್ಲಿ ಎಂದಿಗಿಂತ ಸಾವಿರ ಪಟ್ಟು ಹೆಚ್ಚು ಕಾರ್ಯನಿರತವಾಗಿರುವ ನಿಮ್ಮ ತತ್ತ್ವದ ಲಾಭವು ನನಗೆ ಹೆಚ್ಚಿನ ಪ್ರಮಾಣದಲ್ಲಿ ಗ್ರಹಿಸುವಂತಾಲಿ, ನಿನ್ನ ಉಪಾಸನೆಯಿಂದ ನನ್ನ ಅತಃಕರಣದಲ್ಲಿ ನಿನ್ನ ಬಗ್ಗೆ ಭಕ್ತಿಭಾವ ನಿರ್ಮಾಣವಾಗಲಿ’.

ಸ್ತೋತ್ರಪಠಣ: ಶ್ರೀ ಗಣೇಶನಿಗೆ ಸಂಬಂಧಿಸಿದ  ಅಥರ್ವಶೀರ್ಷ, ಸಂಕಟವಿಮೋಚನ ಸ್ತೋತ್ರಗಳ ಪಠಣವನ್ನು ಮಾಡಬಹುದು.