Monday, January 20, 2025
ಸುದ್ದಿ

ಇತಿಹಾಸ ಪ್ರಸಿದ್ಧ ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವರ ಜಾತ್ರೆಗೆ ಗೊನೆ ಮಹೂರ್ತ –ಕಹಳೆ ನ್ಯೂಸ್

ಪುತ್ತೂರು: ಇತಿಹಾಸ ಪ್ರಸಿದ್ಧ ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವರ ಜಾತ್ರೋತ್ಸವದ ಸಲುವಾಗಿ ಏ.1ರಂದು ಗೊನೆ ಮುಹೂರ್ತ ನಡೆಯಿತು. ಈ ಬಾರಿ ದೇವಳದ ತೋಟದಿಂದಲೇ ಗೊನೆ ಮುಹೂರ್ತ ನಡೆಸಲಾಯಿತು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ದೇವಳದ ವ್ಯವಸ್ಥಾಪನಾ ಸಮಿತಿ ಸದಸ್ಯರೂ ಆಗಿರುವ ಪ್ರಧಾನ ಅರ್ಚಕ ವಿ.ಎಸ್.ಭಟ್ ಅವರು ಗೊನೆ ಮುಹೂರ್ತ ನೆರವೇರಿಸಿದರು. ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವಪ್ರಸಾದ್ ಮುಳಿಯ ಹಾಗೂ ಸದಸ್ಯರು, ಭಕ್ತರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಬೆಳಿಗ್ಗೆ ಪೂರ್ವ ಶಿಷ್ಟ ಸಂಪ್ರದಾಯದಂತೆ ದೇವಳದ ಸತ್ಯಧರ್ಮ ನಡೆಯಲ್ಲಿ ಪ್ರಾರ್ಥನೆ ಮಾಡಿ ಬಳಿಕ ವಾದ್ಯದೊಂದಿಗೆ ದೇವಳದ ರಥ ಬೀದಿಯ ಮೂಲಕ ದೇವಳದ ಶ್ರೀ ಅಯ್ಯಪ್ಪ ಗುಡಿಯ ಬಳಿಯಲ್ಲಿರುವ ದೇವಳದ ತೋಟದಿಂದಲೇ ಗೊನೆ ಮುಹೂರ್ತ ನೆರವೇರಿಸಲಾಯಿತು. ಪ್ರಧಾನ ಅರ್ಚಕ ವೇ.ಮೂ.ವಿ.ಎಸ್.ಭಟ್‌ರವರು ಗೊನೆ ಮುಹೂರ್ತ ನಡೆಸಿಕೊಟ್ಟರು. ಇನ್ನೋರ್ವ ಪ್ರಧಾನ ಅರ್ಚಕ ವಸಂತ ಕೆದಿಲಾಯ ಸಹಕರಿಸಿದರು.

ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮುಳಿಯ ಕೇಶವ ಪ್ರಸಾದ್, ಸಮಿತಿ ಸದಸ್ಯರಾದ ಶೇಖರ್ ನಾರಾವಿ, ರಾಮ್‌ದಾಸ್ ಗೌಡ, ರವೀಂದ್ರನಾಥ ರೈ ಬಳ್ಳಮಜಲು, ವೀಣಾ ಬಿ.ಕೆ, ಡಾ.ಸುಧಾ ಎಸ್ ರಾವ್, ಬಿ.ಐತ್ತಪ್ಪ ನಾಯ್ಕ, ರಾಮಚಂದ್ರ ಕಾಮತ್, ಕಾರ್ಯನಿರ್ವಹಣಾಧಿಕಾರಿ ನವೀನ್ ಕುಮಾರ್ ಭಂಡಾರಿ ಎಚ್, ಕಚೇರಿ ವ್ಯವಸ್ಥಾಪಕ ಹರೀಶ್ ಶೆಟ್ಟಿ, ದೇವಳದ ವಾಸ್ತು ಇಂಜಿನಿಯರ್ ಪಿ.ಜಿ.ಜಗನ್ನಿವಾಸ ರಾವ್, ಮಾಜಿ ಆಡಳಿತ ಮೊಕ್ತೇಸರ ಎನ್ ಕೆ ಜಗನ್ನಿವಾಸ ರಾವ್, ಮಾಜಿ ಮೊಕ್ತೇಸರರಾದ ಚಿದಾನಂದ ಬೈಲಾಡಿ, ರಮೇಶ್ ಬಾಬು, ವ್ಯವಸ್ಥಾಪನಾ ಸಮಿತಿ ಮಾಜಿ ಸದಸ್ಯೆ ನಯನಾ ರೈ, ರತ್ನಾಕರ ನಾೖಕ್‌ , ಕಿಟ್ಟಣ್ಣ ಗೌಡ, ರಾಧಾಕೃಷ್ಣ ಗೌಡ, ಅರುಣ್ ಕುಮಾರ್ ಪುತ್ತಿಲ, ಶ್ರೀಧರ್ ಪಟ್ಲ, ಪದ್ಮನಾಭ ಶೆಟ್ಟಿ, ರಾಜೇಶ್ ಬನ್ನೂರು, ಗಣೇಶ್ ಕೆದಿಲಾಯ, ಹೆಚ್.ಉದಯ, ಯು.ಲೋಕೇಶ್ ಹೆಗ್ಡೆ, ಭಾಸ್ಕರ್ ಬಾರ್ಯ, ಜಯರಾಜ್ ಭಂಡಾರಿ, ಮಾಧವ ಪೂಜಾರಿ, ನಗರಸಭೆ ಅಧ್ಯಕ್ಷ ಕೆ ಜೀವಂದರ್ ಜೈನ್, ಉಪಾಧ್ಯಕ್ಷೆ ವಿದ್ಯಾ ಗೌರಿ, ದೇವಳದ ನಿತ್ಯ ಚಾಕ್ರಿಯವರು ಮತ್ತು ಕರಸೇವಕರು, ಭಕ್ತರು ಈ ಸಂದರ್ಭ ಉಪಸ್ಥಿತರಿದ್ದರು.