Monday, January 20, 2025
ಸುದ್ದಿ

ಡಾಲಿ ಧನಂಜಯ್ ಗೆ ಕೋಟಿ ರೂ. ಮೌಲ್ಯದ ಕಾರು ನೀಡಿದ ನಿರ್ಮಾಪಕರು..! – ಕಹಳೆ ನ್ಯೂಸ್

ಡಾಲಿ ಧನಂಜಯ್ ಕನ್ನಡ ಚಿತ್ರರಂಗದಲ್ಲಿ ಗಟ್ಟಿಯಾಗಿ ಕಾಲೂರಿದ್ದಾರೆ. ತಮ್ಮ ಸರಳ ಸಜ್ಜನಿಕೆಯಿಂದಾಗಿ ಎಲ್ಲರ ಮೆಚ್ಚಿನವರಾಗಿರುವ ಧನಂಜಯ್ ಅವರ ‘ಗುರುದೇವ್ ಹೊಯ್ಸಳ’ ಚಿತ್ರಕ್ಕೆ ಅಪಾರ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಚಿತ್ರಕ್ಕೆ ಲಭಿಸುತ್ತಿರುವ ಪ್ರತಿಕ್ರಿಯೆಯಿಂದ ಸಂತಸಗೊಂಡಿರುವ ನಿರ್ಮಾಪಕರಾದ ಕಾರ್ತಿಕ್ ಗೌಡ ಹಾಗೂ ಯೋಗಿ ಜಿ ರಾಜ್, ಧನಂಜಯ್ ಅವರಿಗೆ 1 ಕೋಟಿ 35 ಲಕ್ಷ ರೂಪಾಯಿ ಬೆಲೆಬಾಳುವ ಕಾರನ್ನು ಉಡುಗೊರೆಯಾಗಿ ನೀಡಿದ್ದಾರೆ.

ಟೊಯೋಟಾ ವೆಲ್ ಫೈರ್ ಕಾರು ಉಡುಗೊರೆಯಾಗಿ ಲಭಿಸಿದ್ದು, ಇದರ ಎಕ್ಸ್ ಶೋರೂಮ್ ಬೆಲೆ 94 ಲಕ್ಷದ 95 ಸಾವಿರ ರೂಪಾಯಿ ಆಗಿದೆ. ಈ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಧನಂಜಯ್, ಇದು ನನ್ನ ನಿರ್ಮಾಪಕರು ಮತ್ತು ಅಭಿಮಾನಿಗಳ ಕೊಡುಗೆ ಎಂದು ಹೇಳಿದ್ದಾರೆ.