Monday, January 20, 2025
ಸುದ್ದಿ

ಆಕಸ್ಮಿಕವಾಗಿ ತಾಳೆ ಮರದಿಂದ ಬಿದ್ದು ಮೃತಪಟ್ಟ ವ್ಯಕ್ತಿ –ಕಹಳೆ ನ್ಯೂಸ್

ತಾಳೆ ಮರದಿಂದ ಆಕಸ್ಮಿಕವಾಗಿ ಬಿದ್ದು ವ್ಯಕ್ತಿ ಮೃತ ಪಟ್ಟ ಘಟನೆ ಶಂಭೂರು ಗ್ರಾಮದಲ್ಲಿ ನಡೆದಿದೆ. ಶಂಭೂರು ಗ್ರಾಮದ ಕುಂದಾಯಗೋಳಿ0 ನಿವಾಸಿ ಲೊಕಯ್ಯ ಪೂಜಾರಿ ಅವರು ಮೇಸ್ತ್ರಿ ಕೆಲಸ ಮಾಡಿಕೊಂಡಿದ್ದು, ತಾಳೆ ಮರದಿಂದ ಶೇಂದಿ ತೆಗೆಯುವ ಕೆಲಸ ಮಾಡಿಕೊಂಡಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಮಾ.31ರಂದು ಶಂಭೂರು ಗ್ರಾಮದ ಕೊಂಕನರ ಕೋಡಿ ಎಂಬಲ್ಲಿ ತಾಳೆ ಮರದಿಂದ ಶೇಂದಿ ತೆಗೆಯುವ ವೇಳೆ ಆಕಸ್ಮಿಕವಾಗಿ ಕಾಲು ಜಾರಿ ಕೆಳಗೆ ಬಿದ್ದು, ಗಂಭೀರ ಗಾಯಗೊಂಡಿದ್ದರು. ಕೂಡಲೇ ಅವರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೆ ಚಿಕಿತ್ಸೆ ಫಲಕಾರಿಯಾಗದೆ ಅವರು ರಾತ್ರಿ ಮೃತ ಪಟ್ಟಿದ್ದಾರೆ ಎಂದು ತಿಳಿದುಬಂದಿದೆ.