Monday, November 25, 2024
ಸುದ್ದಿ

ಎ.4ರಿಂದ ಎ.8ರವರೆಗೆ ಅಂಬಿಲಡ್ಕ ಶ್ರೀ ಪೂಮಾಣಿ ಕಿನ್ನಿಮಾಣಿ ರಾಜನ್ ದೈವಸ್ಥಾನದ ವರ್ಷಾವಧಿ ಜಾತ್ರಾಮಹೋತ್ಸವ – ಕಹಳೆ ನ್ಯೂಸ್

ಇತಿಹಾಸ ಪ್ರಸಿದ್ಧ ಅಂಬಿಲಡ್ಕ ಶ್ರೀ ಪೂಮಾಣಿ ಕಿನ್ನಿಮಾಣಿ ರಾಜನ್ ದೈವಸ್ಥಾನದ ವರ್ಷಾವಧಿ ಜಾತ್ರಾಮಹೋತ್ಸವವು ಎ.4ರಿಂದ ಎ.8ರವರೆಗೆ ಅದ್ಧೂರಿಯಿಂದ ನಡೆಯಲಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಅಂಬಿಲಡ್ಕ ಶ್ರೀ ಪೂಮಾಣಿ ಕಿನ್ನಿಮಾಣಿ ರಾಜನ್ ದೈವಾನುಗ್ರಹದಿಂದ ಬಂಬ್ರಾಣದ ಯಜಮಾನರಾದ ಶ್ರೀಮಾನ್ ಬಿ. ಮೋಹನ್‌ದಾಸ್ ರೈಯವರ ಮುಂದಾಳತ್ವದಲ್ಲಿ ನಡೆಯಲಿದೆ.

ಬ್ರಹ್ಮಶ್ರೀ ವೇದಮೂರ್ತಿ ಶಂಕರನಾರಾಯಣ ಕಡಮಣ್ಣಾಯ, ಕರ್ಕುಳಬೂಡು ಇವರ ಆಚಾರ್ಯತ್ವದಲ್ಲಿ ಪ್ರತಿಷ್ಠಿತ ಮನೆಯವರ, ಪರಿಚಾರಕರ, ಮಾಗಣೆಯವರ ಎಲ್ಲಾ ಕುಟುಂಬಸ್ಥರ, ಸ್ಥಳೀಯ ಸಂಘ-ಸAಸ್ಥೆಗಳ ಹಾಗೂ ಊರ ಸಮಸ್ತರ ಪೂರ್ಣ ಸಹಕಾರದೊಂದಿಗೆ ವಿವಿಧ ಧಾರ್ಮಿಕ, ವೈದಿಕ ವಿಧಿ-ವಿಧಾನಗಳೊಂದಿಗೆ ಮಹೋತ್ಸವವು ಸಂಭ್ರಮದಿAದ ನಡೆಯಲಿದೆ.

ಕಾರ್ಯಕ್ರಮಗಳು :
ಎ.4ರಂದು ಸಂಜೆ ಬಂಬ್ರಾಣ ಬೈಲು ಶ್ರೀ ಗೋಪಾಲ ಕೃಷ್ಣ ಭಜನಾ ಸಂಘದ ವತಿಯಿಂದ ಭಜನಾಮೃತ ನಡೆಯಲಿದ್ದು, ತದನಂತರ ಬಂಬ್ರಾಣ ದೊಡ್ಡ ಮನೆಯಿಂದ ಭಂಡಾರ ಆಗಮನದ ಬಳಿಕ ಬೆಜಪ್ಪೆ ಭಂಡಾರ ಮನೆಯಿಂದ ಹಾಗೂ ಕಿದೂರು ಶ್ರೀ ಮಹಾದೇವ ದೇವಸ್ಥಾನದಿಂದ ಭಂಡಾರ (ಕೀರೋಳು) ಆಗಮಿಸಲಿದೆ.

ಅಂಬಿಲಡ್ಕ ನವಸೇವಾ ಮಹಿಳಾ ವೃಂದ (ರಿ.) ಪ್ರಾಯೋಜಕತ್ವದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.

ಮಹೋತ್ಸವದ ಪ್ರಯುಕ್ತ ಸಭಾ ಕಾರ್ಯಕ್ರಮ ಆಯೋಜನೆಗೊಂಡಿದ್ದು, ದೈವಸ್ಥಾನದ ಅನುವಂಶಿಕ ಮೊಕ್ತೇಸರರಾದ ಬಿ. ಮೋಹನ್ ದಾಸ್ ರೈ ಅವರ ಅಧ್ಯಕ್ಷತೆ ವಹಿಸಲಿದ್ದಾರೆ.
ಇದೇ ವೇಳೆ ನವಸೇವಾ ವೃಂದ (ರಿ), ಅಂಬಿಲಡ್ಕ ಇದರ ವಾರ್ಷಿಕೋತ್ಸವದ ಸಂಭ್ರಮ ನಡೆಯಲಿದೆ.

ಕಾರ್ಯಕ್ರಮದಲ್ಲಿ ಕಾಸರಗೋಡು ಸಂಸ್ಕೃತ ಭಾರತಿ ಇದರ ಜಿಲ್ಲಾ ಸಂಯೋಜಕರಾದ ಎಸ್. ಎಂ. ಉಡುಪ ಕುಂಟಾರು, ಕಾಸರಗೋಡಿನ ನಿವೃತ ಹವಲ್ದಾರ್ ರಾದ ಕರುಣಾಕರ್, ಅಂಬಿಲಡ್ಕ ನವಸೇವಾ ವೃಂದ (ರಿ.)ನ ಅಧ್ಯಕ್ಷರಾದ ಬಾಬು ಯು. ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಸಭೆಯ ಬಳಿಕ ದೈವಗಳಿಗೆ ತಂಬಿಲ ಸೇವೆ ನಡೆದು, ಅನ್ನಸಂತರ್ಪಣೆ ನಡೆಯಲಿದೆ.

ಎ.5ರಂದು ಕಳತ್ತೂರು ಶ್ರೀ ಮಹಾದೇವಿ ಮಹಿಳಾ ಭಜನಾ ಮಂಡಳಿಯವರಿAದ ಭಜನಾಮೃತ ನಡೆಯಲಿದ್ದು, ಬಳಿಕ ಶ್ರೀ ಕಿನ್ನಿಮಾಣಿ ದೈವದ ನೇಮ, ಪ್ರಸಾದ ವಿತರಣೆ ಹಾಗೂ ದೈವಗಳಿಗೆ ತಂಬಿಲ ಸೇವೆ ನಡೆಯಲಿದೆ.

ಉಜಾರು ಫ್ರೆಂಡ್ಸ್ ಪ್ರಾಯೋಜಕತ್ವದಲ್ಲಿ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ಕೃಪಾಪೋಷಿತ ದಶಾವತಾರ ಯಕ್ಷಗಾನ ಮಂಡಳಿ, ಮುಲ್ಕಿ, ಇವರಿಂದ “ಭಂಡಾರ ಚಾವಡಿ” ತುಳು ಯಕ್ಷಗಾನ ಬಯಲಾಟ ಪ್ರದರ್ಶನಗೊಳ್ಳಲಿದೆ.

ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರಿಗೆ ಅಭಿನಂದನಾ ಪುರಸ್ಕಾರ – ಪ್ರಶಸ್ತಿ ಸಮಾರಂಭ ನಡೆಯಲಿದೆ.

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಕರ್ನಾಟಕ ತುಳು ಜೈನ ರಾಜಮನೆತನದ ಅಲುಪಾ ಕುಟುಂಬದ ವಂಶಸ್ಥರು, ದಂತವೈದ್ಯರು, ಸಾಹಿತ್ಯ ಅಕಾಡೆಮಿ ಸಿಂಡಿಕೇಟ್ ಸದಸ್ಯರು ಹಾಗು ತುಳು, ಕನ್ನಡ ಬರಹಗಾರರಾದ ಡಾ. ಆಕಾಶ್ ರಾಜ್, ವಿಶ್ವ ಹಿಂದು ಪರಿಷತ್ ಮಾಜಿ ಉಪಾಧ್ಯಕ್ಷೆಯಾದ ಶ್ರೀಮತಿ ಮೀರಾ ಆಳ್ವ ಭಾಗವಹಿಸಲಿದ್ದಾರೆ.

5ದಿನಗಳ ಕಾಲ ನಡೆಯಯುವ ಜಾತ್ರಾ ಮಹೋತ್ಸವದಲ್ಲಿ ವಿವಿಧ ಧಾರ್ಮಿಕ ಸಾಂಸ್ಕೃತಿಕ ಕಾರ್ಯಕ್ರಮಗಳು ಮೇಳೈಸಲಿದೆ.