Recent Posts

Monday, January 20, 2025
ದಕ್ಷಿಣ ಕನ್ನಡಪುತ್ತೂರುರಾಜ್ಯಸುದ್ದಿ

ಕ್ರೈಸ್ತ ಸಮುದಾಯದ ವಿರುದ್ಧ ಕೋಮುದ್ವೇಷ ಭಾಷಣ ಆರೋಪ : ಕ್ರೈಸ್ತ ಮುಖಂಡರಿಂದ ಪುತ್ತೂರು ಹಿಂದೂ ಜಾಗರಣಾ ವೇದಿಕೆ ಗೌರವಾಧ್ಯಕ್ಷ, ಜನಸ್ನೇಹಿ ವೈದ್ಯ ಡಾ ಎಂ.ಕೆ. ಪ್ರಸಾದ್ ವಿರುದ್ಧ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾಗಿಳಿಗೆ ದೂರು – ಕಹಳೆ ನ್ಯೂಸ್

ಮಂಗಳೂರು : ಬಿಷಪ್ ಮತ್ತು ಕೆಥೋಲಿಕ್ ಚರ್ಚ್ ಪರವಾಗಿ ಮಂಗಳೂರು ಧರ್ಮಪ್ರಾಂತ್ಯದ ಸಾರ್ವಜನಿಕ ಸಂಪರ್ಕ ಅಧಿಕಾರಿಗಳಾದ ಡಾ.ಜೆ.ಬಿ.ಸಲ್ಡಾನ್ಹಾ ಮತ್ತು ರಾಯ್ ಕ್ಯಾಸ್ತಲಿನೊ ಹಾಗೂ ಕೆಥೋಲಿಕ್ ಸಭಾ ಮಂಗಳೂರು ಪ್ರದೇಶ ರಿ. ಅಧ್ಯಕ್ಷರಾದ ಸ್ಟ್ಯಾನಿ ಲೋಬೋ ಅವರು ದಕ್ಷಿಣ ಕನ್ನಡ ಜಿಲ್ಲೆಯ ಎಸ್.ಪಿ. ಯವರನ್ನು ಭೇಟಿ ಮಾಡಿ ಪುತ್ತೂರಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಡಾ. ಪ್ರಸಾದ್ ಭಂಡಾರಿ ಅವರು ದ್ವೇಷಪೂರಿತ ಭಾಷಣ ಮಾಡಿರುವುದಾಗಿ ಆರೋಪಿಸಿ ಅವರ ವಿರುದ್ಧ ದೂರು ದಾಖಲಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಹಿಂದು ಜಾಗರಣ ವೇದಿಕೆಯ ಕಾರ್ಯಕ್ರಮದಲ್ಲಿ ಡಾ.ಎಂ.ಕೆ ಪ್ರಸಾದ್ ರವರು ಕ್ರೈಸ್ತ ಸಮುದಾಯದ ವಿರುದ್ಧ ನೇರವಾಗಿ ಸಮಾಜದಲ್ಲಿ ಅಶಾಂತಿಯನ್ನು ತರುವಂತ ಮಾತುಗಳನ್ನಾಡಿರುತ್ತಾರೆ. ಹಿಂದೂ ಜಾಗರಣ ವೇದಿಕೆ ಕಾರ್ಯಕ್ರಮದಲ್ಲಿ ಹಲವಾರು ಜನ ಭಾಗವಹಿಸಿರಬಹುದು. ಎಂ.ಕೆ.ಪ್ರಸಾದ್ ನೀಡಿರುವ ಭಾಷಣದಿಂದ ಹಲವಾರು ಯುವಕರ ಮನಸ್ಸಿನಲ್ಲಿ ಕ್ರೈಸ್ತರ ಮೇಲೆ ದ್ವೇಷ ಮೂಡಿರಬಹುದು. ಇದಲ್ಲದೆ ಈ ಭಾಷಣವು ಸಾಮಾಜಿಕ ಜಾಲತಾಣದಲ್ಲಿ ಹರಡಿದ್ದು, ಸಮಾಜದಲ್ಲಿ ಕ್ರೈಸ್ತರ ವಿರುದ್ಧ ದ್ವೇಷ ಹುಟ್ಟಿಸಿ ಅಶಾಂತಿ, ಅಸಮಧಾನ ತರುವಂತಾಗಿದೆ. ಸತ್ಯಕ್ಕೆ ದೂರವಾದಂತ ವಿಷಯಗಳನ್ನು ನುಡಿದು ಸಮಾಜದಲ್ಲಿ ಸೌಹಾರ್ದತೆಯಲ್ಲಿ ಜೀವಿಸಲು ಧಕ್ಕೆಯನ್ನು ಉಂಟುಮಾಡಿರುತ್ತಾರೆ.

ಮಾತ್ರವಲ್ಲದೆ ದೋಂಬಿ ನಡೆಸಲು ಪ್ರಚೋದನೆ ನೀಡಿರುತ್ತಾರೆ. ಹಿಂದೂ ಹಾಗೂ ಕ್ರೈಸ್ತ ಧರ್ಮಗಳ ನಡುವೆ ಅಸೌಹಾರ್ದತೆ, ವೈರತ್ವ, ದ್ವೇಷ, ವೈಮನಸ್ಸು ಭಾವನೆಗಳು ಉಂಟುಮಾಡಲು ಉತ್ತೇಜನ ನೀಡಿರುತ್ತಾರೆ. ಇದಲ್ಲದೆ ಸಾರ್ವಜನಿಕ ನೆಮ್ಮದಿಯನ್ನು ಕದಡಿರುತ್ತಾರೆ. ಕ್ರೈಸ್ತರ ವಿರುದ್ಧ ಅಪರಾಧಿಕ ಬಲವನ್ನು ಮತ್ತು ಹಿಂಸೆಯನ್ನು ಪ್ರಯೋಗಿಸಲು ಪ್ರಚೋದನೆ ನೀಡಿರುತ್ತಾರೆ. ಕ್ರೈಸ್ತ ಸಮುದಾಯದವರಲ್ಲಿ ಭಯವನ್ನು ಮತ್ತು ಗಾಬರಿಯನ್ನು ಉಂಟುಮಾಡಿರುತ್ತಾರೆ. ಕ್ರೈಸ್ತರನ್ನು ಅವಮಾನಿಸಿರುತ್ತಾರೆ ಮತ್ತು ಕ್ರೈಸ್ತರ ಮೇಲೆ ಸಂಶಯ ಮೂಡಿಸಿ ವೈಮನಸ್ಸನ್ನು ಉಂಟುಮಾಡಿರುತ್ತಾರೆ.

ಪ್ರಸಾದ್ ರವರು ಕ್ರೈಸ್ತರ ಧಾರ್ಮಿಕ ಭಾವನೆಗಳಿಗೆ ದಕ್ಕೆ ಉಂಟುಮಾಡಿರುತ್ತಾರೆ. ಕ್ರೈಸ್ತರ ಮೇಲೆ ದ್ವೇಷಭಾವನೆಯಿಂದ ಅಥವಾ ಉಂಟುಮಾಡುವ ಉದ್ದೇಶದಿಂದ ಭಾಷಣ ಮಾಡಿರುತ್ತಾರೆ. ಕ್ರೈಸ್ತ ಸಂಸ್ಥೆಯಲ್ಲಿ ಕಲಿತ ಇವರು ಈಗ ಕ್ರೈಸ್ತರ ವಿರುದ್ಧ ಮಾತನಾಡಿ ಜನರ ಮನಸ್ಸನ್ನು ಕೆಡಿಸುತ್ತಿದ್ದಾರೆ. ದ್ವೇಷಪೂರಿತ ಭಾಷಣದಿಂದ ಕ್ರೈಸ್ತ ಸಮುದಾಯವನ್ನು ಗುರಿಯಾಗಿಸುವ ಮತ್ತು ಬೆದರಿಸುವ ಸಮಸ್ಯೆ ಹೆಚ್ಚುತ್ತಿದ್ದು, ಇದನ್ನು ತಡೆಯಲು ತ್ವರಿತ ಕ್ರಮ ಕೈಗೊಳ್ಳಬೇಕಾಗಿದೆ. ಇದಲ್ಲದೆ ಸಮಾಜದಲ್ಲಿ ಅಶಾಂತಿಗೆ ಕಾರಣವಾಗಬಲ್ಲ ಹೇಳಿಕೆಗಳಿಗೆ ಕಡಿವಾಣ ಹಾಕಲು ಸುಪ್ರೀಂ ಕೋರ್ಟ್‌ ಆದೇಶ ನೀಡಿದೆ.

ಧಾರ್ಮಿಕವಾಗಿ ತಟಸ್ಥವಾಗಬೇಕಿರುವ ದೇಶದಲ್ಲಿ, ದ್ವೇಷ ಭಾಷಣಗಳಂತಹ ಚಟುವಟಿಕೆಗಳು ಆಘಾತಕಾರಿ ಎಂದು ಸುಪ್ರೀಂ ಕೋರ್ಟ್ ನುಡಿದಿರುತ್ತದೆ. ಹೀಗಿರುವಲ್ಲಿ ಭಾರತಿಯ ದಂಡ ಸಂಹಿತೆ, 1860ರಡಿಯಲ್ಲಿ ಡಾ. ಎಂ.ಕೆ.ಪ್ರಸಾದ್ ರವರು ವಿವಿಧ ಅಪರಾಧಗಳನ್ನು ಮಾಡಿರುತ್ತಾರೆ. ಇಂತಹ ದ್ವೇಷಪೂರಿತ ಭಾಷಣಗಳಿಗೆ ಕಡಿವಾಣ ಹಾಕಿ., ಡಾ. ಎಂ.ಕೆ.ಪ್ರಸಾದ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಹಾಗೂ ತನಿಖೆಯು ಸ್ವತಂತ್ರ, ವಿಶ್ವಾಸಾರ್ಹ ಮತ್ತು ನಿಷ್ಪಕ್ಷಪಾತವಾಗಿ ಆಗಬೇಕು., ಇದಲ್ಲದೆ ಕೋಮುಗಳ ನಡುವೆ ದ್ವೇಷ ಬಿತ್ತುವ ಈ ವೀಡಿಯೋವನ್ನು ಯೂಟ್ಯುಬ್ ಚಾನೆಲ್ ಮತ್ತಿತರ ಸಾಮಾಜಿಕ ಜಾಲತಾಣಗಳಿಂದ ಅಳಿಸಬೇಕು ಎಂದು ದೂರಿನಲ್ಲಿ ತಿಳಿಸಿದ್ದಾರೆ.

ನಿಯೋಗದಲ್ಲಿ ಕ್ಯಾಥೋಲಿಕ್ ಸಭಾ ಪದಾಧಿಕಾರಿಗಳಾದ ನೊರೀನ್ ಪಿಂಟೋ ಪ್ರಧಾನ ಕಾರ್ಯದರ್ಶಿ, ಅಲ್ಫೋನ್ಸ್ ಫೆರ್ನಾಂಡಿಸ್ ಖಜಾಂಚಿ, ವಿನೋದ್ ಪಿಂಟೊ ಉಪಾಧ್ಯಕ್ಷರು, ಫ್ರಾನ್ಸಿಸ್ ಸೆರಾರಾವ್ ಜಂಟಿ ಖಜಾಂಚಿ, ಆರ್ಥರ್ ಡಿ’ಸೋಜಾ ಬಂಟ್ವಾಳ ವಲಯದ ಅಧ್ಯಕ್ಷರು, ಲ್ಯಾನ್ಸಿ ಮಸ್ಕರೇನಸ್ ಪುತ್ತೂರು ವಲಯದ ಅಧ್ಯಕ್ಷರು, ಕಾಲಿನ್ ಮಿರಾಂದಾ ಸಿಟಿ ವಲಯದ ಅಧ್ಯಕ್ಷರು, ಸ್ಟ್ಯಾನಿ ಬಂಟ್ವಾಳ್ ಮಾಧ್ಯಮ ಸಂಯೋಜಕರು ಉಪಸ್ಥಿತರಿದ್ದರು.