Recent Posts

Monday, January 20, 2025
ಸುದ್ದಿ

ಸಮಾಜದ ಏಳಿಗೆಗೆ ಶ್ರಮಿಸಿದವರನ್ನು ಗುರುತಿಸುವುದು ಅಗತ್ಯ : ಪೇಜಾವರ ಶ್ರೀ –ಕಹಳೆ ನ್ಯೂಸ್

ಉಡುಪಿ : ಸಮಾಜದ ಅಭಿವೃದ್ಧಿ ಜೊತೆಗೆ ತಮ್ಮ ಏಳಿಗೆ ಕಂಡ ಸಾಧಕರನ್ನು ಗುರುತಿಸಿ ಗೌರವಿಸುವುದು ಅಭಿನಂದನೀಯ ಕಾರ್ಯ ಎಂದು ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಸಗ್ರಿ ವಾಸುಕೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ದೇವರ ಪ್ರತಿಷ್ಠಾ ವರ್ಧಂತಿ ಅಂಗವಾಗಿ ನಡೆದ ಧಾರ್ಮಿಕ ಸಭೆಯಲ್ಲಿ ಸಾಧಕರನ್ನು ಸನ್ಮಾನಿಸಿದ ಬಳಿಕ ಮಾತನಾಡಿ, ಇಹದಲ್ಲಿ ಬದುಕನ್ನು ತಪ್ಪಸ್ಸಿನ ರೀತಿ ಪರಿಗಣಿಸಬೇಕು. ಇದರಿಂದ ದೇಹಾಂತ್ಯದ ಬಳಿಕವೂ ಶ್ರೇಯಸ್ಸು ಲಭಿಸುತ್ತದೆ. ಯಾರ ಬದುಕಿನಿಂದ ಇನ್ನಷ್ಟು ಮಂದಿ ಜೀವನ ಕಟ್ಟಿಕೊಳ್ಳಲು ಸಾಧ್ಯವಾಗುತ್ತದೋ ಅಂಥವರ ಬಾಳು ಶ್ರೇಷ್ಠವಾಗಿರುತ್ತದೆ ಎಂದ್ರು.

ಇನ್ನೂ ಇದೇ ವೇಳೆ ಸೋದೆ ಶ್ರೀ ವಿಶ್ವವಲ್ಲಭ ತೀರ್ಥ ಸ್ವಾಮೀಜಿ ಆಶೀರ್ವಚನ ನೀಡಿ, ತಮ್ಮ ಕರ್ತವ್ಯಗಳನ್ನು ಕಡೆಗಣಿಸಿ ಇನ್ನೊಬ್ಬರ ಕೆಲಸದಲ್ಲಿ ಕೈ ಹಾಕಿದಾಗ ಸಮಸ್ಯೆಗಳು ತಲೆದೋರುತ್ತವೆ. ಹೀಗಾಗಿ ಕೃಷ್ಣ ದೇವರು ಗೀತೆಯಲ್ಲಿ ತಿಳಿಸಿದಂತೆ ಪ್ರತಿಯೊಬ್ಬರೂ ಅವರವರ ವರ್ಣಾಶ್ರಮಕ್ಕೆ ತಕ್ಕ ಕರ್ತವ್ಯಗಳನ್ನು ನಿಷ್ಠೆಯಿಂದ ಮಾಡಿದರೆ ಉತ್ತಮ ಸಮಾಜ ನಿರ್ಮಾಣವಾಗುತ್ತದೆ ಎಂದು ಹೇಳಿದ್ರು.

ಈ ಸಂದರ್ಭದಲ್ಲಿ ಕರ್ಣಾಟಕ ಬ್ಯಾಂಕ್ ಅಧ್ಯಕ್ಷ ಮಹಾಬಲೇಶ್ವರ ಎಂ.ಎಸ್., ಕಲ್ಕೂರ ಪ್ರತಿಷ್ಠಾನ ಪ್ರವರ್ತಕ ಪ್ರದೀಪ್ ಕುಮಾರ್ ಕಲ್ಕೂರ , ಪ್ರಸಿದ್ಧ ಜ್ಯೋತಿಷಿ ಪಾವಂಜೆ ಕೃಷ್ಣ ಭಟ್, ಆಲಂಗಾರು ಮಹಾಲಿಂಗೇಶ್ವರ ದೇವಸ್ಥಾನ ಆಡಳಿತ ಧರ್ಮದರ್ಶಿ ಈಶ್ವರ ಭಟ್, ಶಾರದಾ ವಿದ್ಯಾಲಯ ಸಂಚಾಲಕ ಡಾ.ಎಂ.ಬಿ. ಪುರಾಣಿಕ್, ಪಾಜಕ ಕ್ಷೇತ್ರದ ಅರ್ಚಕ ಮಾಧವ ಉಪಾಧ್ಯಾಯ, ಹಾದಿಗಲ್ಲು ಲಕ್ಷ್ಮೀನಾರಾಯಣ ಭಟ್ ಅವರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಶ್ರೀಕ್ಷೇತ್ರದ ಆಡಳಿತ ಮೊಕ್ತೇಸರ ಗೋಪಾಲಕೃಷ್ಣ ಸಾಮಗ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಕಟೀಲು ಕ್ಷೇತ್ರದ ಆನುವಂಶಿಕ ಅರ್ಚಕ ಲಕ್ಷ್ಮೀನಾರಾಯಣ ಆಸ್ರಣ್ಣ, ಆನಂದತೀರ್ಥ ಸಗ್ರಿ, ಹರಿದಾಸ ಭಟ್. ಪೆರಂಪಳ್ಳಿ ವಾಸುದೇವ ಭಟ್, ಹಾಗೂ ಮತ್ತಿತರರು ಉಪಸ್ಥಿತರಿದ್ದರು.
ಕಡಿಯಾಳಿ, ಕರಂಬಳ್ಳಿ, ಶೀಂಬ್ರ ವಿವಿಧ ಭಜನಾಮಂಡಳಿಗಳಿAದ ಭಜನೆ ಸಂಕೀರ್ತನೆ ನಡೆದಿದೆ.