Monday, January 20, 2025
ಕ್ರೈಮ್ದಕ್ಷಿಣ ಕನ್ನಡಸುದ್ದಿ

‘ ಅವ್ ಅಸ ತುಕ ಬಿಯೊನಕ ತುಕ ಅವ್ ಖಝರ್ ಝತ ‘ ಎಂದು ಮಹಿಳೆಯನ್ನು ನಯಾವಗಿ ವಂಚಿಸಿ ಆಕೆ ಜೊತೆ ಮಂಚ ಹತ್ತಿ, ಕೈಕೊಟ್ಟ ಸೈಂಟ್ ಪಾಲ್ ಚರ್ಚ್‌ನ ಧರ್ಮಗುರು ನೋಯಲ್ ಕರ್ಕಡ..!!! ; ಮಹಿಳೆಯಿಂದ ಗಂಭೀರ ಆರೋಪ – ಲಂಪಟ ಪಾದ್ರಿ ವಿರುದ್ಧ ಮತ್ತೊಂದು ದೂರು ದಾಖಲು – ಕಹಳೆ ನ್ಯೂಸ್

ಮಂಗಳೂರು : ನಗರದ ಸೈಂಟ್ ಪಾಲ್ ಚರ್ಚ್‌ನ ಧರ್ಮಗುರು ನೋಯಲ್ ಕರ್ಕಡ ವಿರುದ್ಧ ಮಹಿಳೆಯೊಬ್ಬರು ನಂಬಿಕೆ ದ್ರೋಹ, ಲೈಂಗಿಕ ಕಿರುಕುಳದ ಆರೋಪ ಹೊರಿಸಿದ್ದಾರೆ. ತನ್ನನ್ನು ಮದುವೆಯಾಗುವುದಾಗಿ ನಂಬಿಸಿ ದೈಹಿಕ ಸಂಬಂಧ ಬೆಳೆಸಿ, ಆನಂತರ ಅರ್ಧದಲ್ಲಿ ಕೈಬಿಟ್ಟು ವಂಚಿಸಿದ್ದಾನೆ ಎಂದು ಉಡುಪಿ ಮೂಲದ ಮಹಿಳೆಯೊಬ್ಬರು ಆರೋಪಿಸಿ ಮಂಗಳೂರಿನ ಬಲ್ಮಠದ ಶಾಂತಿ ಕೆಥಡ್ರಲ್ ಚರ್ಚ್ ಮುಂದೆ ಪ್ರತಿಭಟನೆ ನಡೆಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

2021ರ ಆಗಸ್ಟ್‌ನಲ್ಲಿ ಧರ್ಮಗುರು ನೋಯಲ್ ಕರ್ಕಡ ಅವರ ಪರಿಚಯವಾಗಿದೆ. ಬಳಿಕ ಮದುವೆಯಾಗುವುದಾಗಿ ನಂಬಿಸಿ ದೈಹಿಕವಾಗಿ ಬಳಸಿಕೊಂಡಿದ್ದಾರೆ. ಕಳಸ, ಕಾಸರಗೋಡಿಗೆ ಸುತ್ತಾಡಿಸಿದ್ದಾರೆ. ಕೊಟ್ಟಾರದಲ್ಲಿರುವ ಕ್ವಾಟ್ರಸ್ ನಲ್ಲಿ ಇರಿಸಿಕೊಂಡು ದೈಹಿಕ ಸಂಪರ್ಕ ಮಾಡಿದ್ದ. 2022ರ ಫೆಬ್ರವರಿ ನಂತರ ದೂರ ಮಾಡಿದ್ದು, ಸಂಪರ್ಕ ಕಡಿದುಕೊಳ್ಳಲು ಪ್ರಯತ್ನಿಸಿದ್ದಾನೆ. ಸೈಂಟ್ ಪಾಲ್ ಚರ್ಚ್ ನಲ್ಲಿ ಭೇಟಿಯಾಗಲು ಯತ್ನಿಸಿದಾಗ, ಹಲ್ಲೆ ನಡೆಸಿದ್ದಾರೆ. ಈ ಬಗ್ಗೆ ಪೊಲೀಸ್ ದೂರು ಕೊಟ್ಟರೆ ಸಾಯಿಸ್ತೀನಿ ಎಂದು ಬೆದರಿಸಿದ್ದಾಗಿ ಮಹಿಳೆ ಆರೋಪಿಸಿದ್ದಾರೆ.

ಇದನ್ನೂ ಓದಿ: ಮಂಗಳೂರಿನ ಬಲ್ಮಠದ ಬಿಷಪ್ ಹೌಸ್​ನಲ್ಲಿ ಮಹಿಳೆಗೆ ಲೈಂಗಿಕ ಕಿರುಕುಳ ; ಆರು ಮಂದಿಯ ವಿರುದ್ಧ ದಾಖಲಾಯ್ತು ಎಫ್‌ಐಆರ್..! ಅಶ್ಲೀಲ ವೀಡಿಯೋ ತೋರಿಸಿ ಮಹಿಳಾ ಸೆಕ್ರೆಟರಿಗೆ ಲೈಂಗಿಕ ಕ್ರಿಯೆಗೆ ಒತ್ತಾಯಿಸುತ್ತಿದ್ದ ಕಾಮುಕ ಪಾದ್ರಿ ನೋಯಲ್ ಕರ್ಕಡ

ನ್ಯಾಯ ಕೇಳಿದಾಗ ತನಗೆ ಜೀವ ಬೆದರಿಕೆ ಹಾಕಿದ್ದಲ್ಲದೆ ಹಲ್ಲೆಯನ್ನೂ ಮಾಡಿದ್ದಾರೆ. ಪೊಲೀಸರಿಗೆ ದೂರು ಕೊಟ್ಟರೆ ಕೊಲ್ಲುತ್ತೇನೆ ಎಂದು ಬೆದರಿಸಿದ್ದಾರೆ ಎಂದು ಮಹಿಳೆ ದೂರಿದ್ದಾರೆ. ವಾಟ್ಸ್‌ಆ್ಯಪ್ ಚಾಟ್‌ಗಳಲ್ಲದೆ ನಾವು ಜೊತೆಗಿದ್ದ ವಿಡಿಯೋಗಳನ್ನು ದಾಖಲೆಯಾಗಿಟ್ಟುಕೊಂಡು ಒಡನಾಡಿ ಸಂಸ್ಥೆಯ ನೆರವು ಪಡೆದು ಪೊಲೀಸರಿಗೆ ದೂರು ನೀಡುವೆ ಎಂದಿದ್ದಾರೆ. ಇತ್ತೀಚೆಗೆ ಬಲ್ಮಠ ಸಿಎಸ್ಐ ಬಿಷಪ್ ಹೌಸ್ ಸೆಕ್ರಟರಿಯಾಗಿದ್ದ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದ ಬಗ್ಗೆ ಪಾಂಡೇಶ್ವರ ಮಹಿಳಾ ಠಾಣೆಯಲ್ಲಿ ದೂರು ದಾಖಲಾಗಿತ್ತು. ಅತ್ಯಾಚಾರ ಸೇರಿ ಕಿರುಕುಳದ ಬಗ್ಗೆ ಎಫ್ಐಆರ್ ಆಗಿದೆ.