Monday, January 20, 2025
ಸುದ್ದಿ

ಚೇತನ್ ಪುತ್ತೂರು ಅರ್ಪಿಸುವ “ಮುತ್ತಿನ ಒಡೆಯ ಶ್ರೀ ಮಹಾಲಿಂಗೇಶ್ವರ” ಕನ್ನಡ ಭಕ್ತಿ ಗೀತೆಯ ಪೋಸ್ಟರ್ ಬಿಡುಗಡೆ – ಕಹಳೆ ನ್ಯೂಸ್

ಪುತ್ತೂರು : ಚೇತನ್ ಪುತ್ತೂರು ಅರ್ಪಿಸುವ “ಮುತ್ತಿನ ಒಡೆಯ ಶ್ರೀಮಹಾಲಿಂಗೇಶ್ವರ” ಕನ್ನಡ ಭಕ್ತಿ ಗೀತೆಯ ಪೋಸ್ಟರ್ ಬಿಡುಗಡೆ ಕಾರ್ಯಕ್ರಮ ಇಂದು (03-4-2023) ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ನಡೆಯಿತು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಮಣಿ ಆಚಾರ್ಯ ಪುತ್ತೂರು ಅವರ ಸಾಹಿತ್ಯದಲ್ಲಿ ಮೂಡಿ ಬರಲಿರುವ ಈ ಭಕ್ತಿಗೀತೆಗೆ ಅಶ್ವಿನ್ ಪುತ್ತೂರು ಸಂಗೀತ ನೀಡಿದ್ದು, ಚೇತನ್ ಪುತ್ತೂರು ಹಾಗೂ ಚೈತ್ರ ಕಲ್ಲಡ್ಕ ಕಂಠದಾನ ಮಾಡಿದ್ದಾರೆ. ಪ್ರದೀಪ್ ಭಕ್ತಿ ಗೀತೆಯ ಪ್ರಚಾರ ಕಾರ್ಯವನ್ನ ಮಾಡಿದ್ದಾರೆ. “ಮುತ್ತಿನ ಒಡೆಯ ಶ್ರೀಮಹಾಲಿಂಗೇಶ್ವರ” ಕನ್ನಡ ಭಕ್ತಿ ಗೀತೆಯ ಪೋಸ್ಟರ್ ಬಿಡುಗಡೆಯಾಗಿದ್ದು ಶೀಘ್ರದಲ್ಲೆ ಭಕ್ತಿಗೀತೆಯೂ ಚೇತನ್ ಪುತ್ತೂರು ಯೂಟ್ಯೂಬ್ ಚಾನಲ್‌ನಲ್ಲಿ ಬಿಡುಗಡೆಗೊಳ್ಳಲಿದೆ.

ಇನ್ನು ಪೋಸ್ಟರ್ ಬಿಡುಗಡೆ ಸಂದರ್ಭದಲ್ಲಿ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರಾದ ಕೇಶವ ಪ್ರಸಾದ್ ಮುಳಿಯ, ರವೀಂದ್ರನಾಥ ರೈ, ಶೇಖರ ನಾರವಿ, ಶಿವಂ ಕಂಪ್ಯೂಟರ್ಸ್ಸ್ ನ ಚಿನ್ಮಯ್, ಚೇತನ್ ಪುತ್ತೂರು, ಮಣಿ ಆಚಾರ್ಯ ಪುತ್ತೂರು, ಲಕ್ಷ್ಮಣ ಆಚಾರ್ಯ, ಚಂದ್ರಾವತಿ ಹಾಗೂ ಮತ್ತಿತರರು ಉಪಸ್ಥಿತರಿದ್ದರು.