Monday, January 20, 2025
ಸುದ್ದಿ

ಶ್ರೀ ಲಕ್ಷ್ಮಣಾನಂದ ವಿವಿಧೋದ್ದೇಶ ಸಹಕಾರ ಸಂಘ (ನಿ) ರಜತ ಮಹೋತ್ಸವ ಸಂಭ್ರಮ : ನೂತನ ಕಟ್ಟಡ ಲೋಕಾರ್ಪಣೆ –ಕಹಳೆ ನ್ಯೂಸ್

ಮಂಗಳೂರು: ಶ್ರೀ ಲಕ್ಷ್ಮಣಾನಂದ ವಿವಿಧೋದ್ದೇಶ ಸಹಕಾರ ಸಂಘ (ನಿ) ರಜತ ಮಹೋತ್ಸವ ಸಂಭ್ರಮ ಆಚರಣೆಯಲ್ಲಿದೆ.
ಲಕ್ಷ್ಮಣಾನಂದ ವಿವಿಧೋದ್ದೇಶ ಸಹಕಾರ ಸಂಘ (ನಿ) ಇದರ ಬೆಳ್ಳಿಹಬ್ಬ ಸಂಭ್ರಮಾಚರಣೆ ಅಂಗವಾಗಿ ನಿರ್ಮಿಸಿದ ಸಂಘದ ನೂತನ ಕಟ್ಟಡದ ಉದ್ಘಾಟನಾ ಸಮಾರಂಭ ಜೆಪ್ಪುವಿನಲ್ಲಿ ನಡೆದಿದೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸನ್ಮಾನ್ಯ ಡಾ| ಎಂ. ಎನ್, ರಾಜೇಂದ್ರ ಕುಮಾರ್ ವಹಿಸಿದ್ದು, ಸೇಫ್ ಲಾಕರ್ ಅನ್ನು ಡಾ.ಶಾಂತಾರಾಮ ಶೆಟ್ಟಿ ಉದ್ಘಾಟಿಸಿದ್ರು. ಸಮಾರಂಭವನ್ನು ಮೇಯರ್ ಜಯಾನಂದ ಅಂಚನ ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿ, ಬಳಿಕ ಮಾತನಾಡಿ ಮಂಗಳೂರಿನ ಇತಿಹಾಸದಲ್ಲೇ ಸಂಸ್ಥೆ ದಾಖಲೆ ನಿರ್ಮಿಸಿದ್ದು, ಸಾಕಷ್ಟು ಬಡ ಕುಟುಂಬಗಳಿಗೆ, ಸಾಲ ನೀಡುವುದರ ಜೊತೆಗೆ ಉತ್ತಮ ಸೇವೆ ನೀಡಿದೆ. ಇನ್ನೂ ಮುಂದೆ ಸಂಸ್ಥೆ ಉತ್ತಮ ಸಂಸ್ಥೆಯಾಗಿ ರಾಜ್ಯ ಮಟ್ಟದಲ್ಲಿ ಬೆಳಗಲಿ ಎಂದು ಹಾರೈಸಿದ್ರು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಕಾರ್ಯಕ್ರಮದಲ್ಲಿ ಕೃಷ್ಣ ಜೆ. ಪಾಲೆಮಾರ ಮಾತನಾಡಿ, ಸಂಘದ ನೂತನ ಕಟ್ಟಡ ಆಗಬೇಕೆಂದು ಸರ್ವ ಸದಸ್ಯರ ಆಶಯವಾಗಿತ್ತು ಅಲ್ಲದೆ ಸ್ಮರಣೀಯ ರೀತಿಯ ಕಟ್ಟಡವಾಗಿರಬೇಕು ಎಂಬ ನಿಟ್ಟಿನಲಿ ಸಂಘದ ಎಲ್ಲಾ ಸದಸ್ಯರು ಸಹಕಾರ ನೀಡಿದ್ದಾರೆ ಅನ್ನುವುದು ಸಂತೋಷದ ವಿಷಯವಾಗಿದ್ದು, ಸದಸ್ಯರು 20% ಡಿವಿಡೆಂಡ್‌ನ್ನು ನೀಡಿದ್ದು ವಿಶೇಷವಾಗಿದೆ ಎಂದ್ರು.
ಇನ್ನೂ ದುಡಿಯುವ ಮನಸ್ಸು ಮತ್ತು ಸಾಧಿಸುವ ಛಲ ಇರುವ ಸಾವಿರಾರು ಕಿರು ಕಸುಬುದಾರರಿಗೆ ನೆರವಿನ ಹಸ್ತಚಾಚುವ ಮೂಲಕ ಜನಸಾಮಾನ್ಯರಿಗೂ ಬದುಕು ಕಟ್ಟುವ ಭರವಸೆ ನೀಡಿದ ಶ್ರೀ ಲಕ್ಷ್ಮಣಾನಂದ ವಿವಿಧೋದ್ದೇಶ ಸಹಕಾರ ಸಂಘ (ನಿ) ಇದೀಗ ರಜತ ಮಹೋತ್ಸವ ಸಂಭ್ರಮದಲ್ಲಿದೆ. ಸಮಾಜದ ಉನ್ನತಿ ಮತ್ತು ಸಾಮಾನ್ಯ ಜನರಿಗೆ ಆರ್ಥಿಕ ನೆರವು ನೀಡುವ ಮಹತ್ತರ ಉದ್ದೇಶದಿಂದ ಮಾಜಿ ಸಚಿವ ಜೆ. ಕೃಷ್ಣ ಪಾಲೆಮಾರ್ ಅವರ ಮಾರ್ಗದರ್ಶನದಲ್ಲಿ 1997ರ ಡಿಸೆಂಬರ್ 7ರಂದು ಶ್ರೀ ಲಕ್ಷ್ಮಣಾನಂದ ವಿವಿಧೋದ್ದೇಶ ಸಹಕಾರ ಸಂಘ (ನಿ)ವನ್ನು ಸ್ಥಾಪಿಸಲಾಯಿತು. 1997ರಲ್ಲಿ ಕೇವಲ 3 ಲಕ್ಷ ರೂ. ಮೂಲ ಬಂಡವಾಳದೊಂದಿಗೆ 9 ಜನ ನಿರ್ದೇಶಕರು ಮತ್ತು 800 ಶೇರುದಾರರೊಂದಿಗೆ ಆರಂಭಗೊಂಡ ಶ್ರೀ ಲಕ್ಷ್ಮಣಾನಂದ ವಿವಿಧೋದ್ದೇಶ ಸಹಕಾರ ಸಂಘ (ನಿ) ಇಂದು 2.8 ರೂ. ಕೋಟಿ ಬಂಡವಾಳದೊಂದಿಗೆ ಸುಮಾರು 5500ಕ್ಕೂ ಹೆಚ್ಚು ಶೇರುದಾರರನ್ನು ಹೊಂದಿದ್ದು, ವಾರ್ಷಿಕವಾಗಿ ಸುಮಾರು ರೂ. 400 ಕೋಟಿಗೂ ಮಿಕ್ಕಿ ವ್ಯವಹಾರವನ್ನು ನಡೆಸುವ ಮೂಲಕ ಸಮಾಜಕ್ಕೆ ಹಲವು ಉತ್ತಮ ಸೇವಾ ಸೌಲಭ್ಯಗಳು ಮತ್ತು ಆರ್ಥಿಕ ಸಂಕಷ್ಟದಲ್ಲಿರುವ ಬಡವರ್ಗದವರಿಗೆ ಸಹಾಯ ಹಸ್ತ ಚಾಚುವ ಮೂಲಕ ಸಂಘವು ಉನ್ನತ ಮಟ್ಟಕ್ಕೇರಲು ಸಾಧ್ಯವಾಗಿದೆ. ಸಂಘವು 2022ರ ಸಾಲಿನಲ್ಲಿ 1 ಕೋಟಿಗೂ ಮಿಕ್ಕಿ ಲಾಭ ಪಡೆದಿದ್ದು, ಗ್ರಾಹಕರಿಗೆ ಶೇ. 20 ಡಿವಿಡೆಂಡ್ ನೀಡಿದೆ. ಸಂಘ ಸ್ಥಾಪನೆಯಾದ ವರ್ಷದಿಂದ ಈ ವರೆಗೆ ಎ ಗ್ರೇಡ್ ಮಾನ್ಯತೆ ಪಡೆದಿದೆ.

ವೃತ್ತಿ ಬದುಕಿನ ಆಸರೆ ಅರಸುವ ಶ್ರೀಸಾಮಾನ್ಯರಿಗೆ ಸಂಘವು ದಾರಿದೀಪವಾಗಿದೆ. 2500ಕ್ಕೂ ಮಿಕ್ಕಿ ರಿಕ್ಷಾ ಚಾಲಕರಿಗೆ ಸಾಲ ಸೌಲಭ್ಯವನ್ನು ಒದಗಿಸಿ ಮಾಲಕರನ್ನಾಗಿ ರೂಪಿಸಿದ ಸಂಘವು ಬೀದಿ ವ್ಯಾಪಾರಿಗಳು, ತರಕಾರಿ ಮಾರಾಟಗಾರರು ಮುಂತಾದ ಸಾವಿರಾರು ಸಣ್ಣಪುಟ್ಟ ವೃತ್ತಿಬಾಂಧವರಿಗೆ ಮೂಲ ಬಂಡವಾಳಕ್ಕಾಗಿ ಸಾಲ ನೀಡುವ ಮೂಲಕ ಸ್ವಾವಲಂಬಿ ಬದುಕಿಗೆ ಪ್ರೇರಣೆ ನೀಡಿದೆ. ಸಾಲ ಸಹಕಾರದೊಂದಿಗೆ ಗ್ರಾಹಕರಿಗೆ ಸೂಕ್ತ ವೃತ್ತಿ ಮಾರ್ಗದರ್ಶನ ಕೂಡಾ ಕಾಲಕಾಲಕ್ಕೆ ನೀಡಲಾಗುತ್ತಿದೆ. ಸಂಘವು ಉಚಿತ ಕಣ್ಣು ತಪಾಸಣೆ ಶಿಬಿರ, ರಕ್ತದಾನ ಶಿಬಿರ, ಸದಸ್ಯರ ಮಕ್ಕಳಿಗೆ ಶಿಕ್ಷಣಕ್ಕೆ ಸಹಾಯ ಮತ್ತು ಹಲವು ಸಂಘ ಸಂಸ್ಥೆಗಳಿಗೆ ಸಹಾಯಧನ ನೀಡುವುದರ ಮೂಲಕ ಸಮಾಜ ಸೇವೆಗೂ ಬದ್ಧವಾಗಿದೆ.

ಶ್ರೀ ಲಕ್ಷ್ಮಣಾನಂದ ವಿವಿಧೋದ್ದೇಶ ಸಹಕಾರ ಸಂಘ (ನಿ) ಮೋರ್ಗನ್ಸ್ ಗೇಟ್‌ನಲ್ಲಿ ಪ್ರಧಾನ ಕಚೇರಿ ಮತ್ತು ಶಾಖೆಯನ್ನು ಹೊಂದಿದ್ದು, ಹಂಪನಕಟ್ಟೆ, ಕಾವೂರು, ಕಾಟಿಪಳ್ಳ-ಕೈಕಂಬ ಮತ್ತು ಉಳ್ಳಾಲ ಮುಂತಾದೆಡೆ 5 ಶಾಖಾ ಕಚೇರಿಗಳನ್ನು ಹೊಂದಿದೆ.

ಸಮಾರಂಭದಲ್ಲಿ ಸ್ಥಾಪಕ ಪ್ರವರ್ತಕರನ್ನು, ಠೇವಣಿದಾರರನ್ನು, ಕಟ್ಟಡ ನಿರ್ಮಾಣ ಕರ ಪ್ರವೀಣ್ ರನ್ನು, ಸಂಘದ ನಿರ್ದೇಶಕರನ್ನು, ಮತ್ತು ಎಂ.ಎನ್.ರಾಜೇಂದ್ರ ಕುಮಾರ್ ರವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಡಿ. ವೇದವ್ಯಾಸ ಕಾಮತ್, ಮಹಾಬಲೇಶ್ವರ ಎಂ. ಎಸ್. ಆಡಳಿತ ನಿರ್ದೇಶಕರು, ಕರ್ನಾಟಕ ಬ್ಯಾಂಕ್, ಜೆ. ಆರ್. ಲೋಬೊ, ಮಾಜಿ ಶಾಸಕರು, ಡಾ| ಶಾಂತರಾಮ ಶೆಟ್ಟಿ, ರಾಮಚಂದ್ರ ಕೆ.ಎಸ್, ಜೆ.ಕೆ. ರಾವ್, ಪಿ. ಬಾಬು, ಬ್ಯಾಂಕಿನ ಸಿಇಒ, ಶಿವ ಪ್ರಸಾದ್, ಡಾ| ಜೆ. ರವೀಂದ್ರ, ಕೆ.ಎಸ್, ರಂಜನ್, ಶ್ರೀಮತಿ ವಾರಿಜಿ ಕೆ., ಡಾ| ಹೆಚ್. ಪ್ರಭಾಕರ್, ಡಾ. ಮಂಜುಳ ಎ. ರಾವ್, ಕೆ. ರವೀಂದ್ರ, ಜೈರಾಜ್ ಕೆ., ಸಂಧ್ಯಾ ದಿನೇಶ್ , ದಿನೇಶ್ ರಾವ್, ಮನೋಹರ್ ಪ್ರಸಾದ್, ಜೆ. ಕೆ.ರಾವ್, ಮತ್ತು ಸಿಬ್ಬಂದಿ ವರ್ಗ ಸೇರಿದಂತೆ ಹಲವರು ಉಪಸ್ಥಿತರಿದ್ದರು.