Monday, November 25, 2024
ಸುದ್ದಿ

ಕಬಕ ಗ್ರಾಮದಲ್ಲಿ ಸಾಹಿತ್ಯ ಸಂಭ್ರಮ ಸ್ಥಳೀಯ ಪ್ರತಿಭೆಗಳಿಗೆ ಮತ್ತು ಸಾಧಕರಿಗೆ ಅವಕಾಶ – ಕಹಳೆ ನ್ಯೂಸ್

ಪುತ್ತೂರು : ವರ್ಷದಲ್ಲಿ ಒಂದು ಬಾರಿ ನಡೆಯುವ ಸಾಹಿತ್ಯ ಸಮ್ಮೇಳನದಲ್ಲಿ ತಾಲೂಕಿನಲ್ಲಿರುವ ಎಲ್ಲಾ ಸಾಹಿತಿಗಳಿಗೆ ಮತ್ತು ಕಲಾವಿದರಿಗೆ ವೇದಿಕೆ ನೀಡಲು ಹಾಗೂ ಸಾಧಕರನ್ನು ಸನ್ಮಾನಿಸಲು ಕಷ್ಟ ಸಾಧ್ಯ. ಈ ನಿಟ್ಟಿನಲ್ಲಿ ಪುತ್ತೂರು ತಾಲೂಕಿನ 32 ಗ್ರಾಮದಲ್ಲೂ ತಿಂಗಳಿಗೆ ಒಂದರಂತೆ ಗ್ರಾಮ ಸಾಹಿತ್ಯ ಸಂಭ್ರಮ ಸರಣಿ ಕಾರ್ಯಕ್ರಮವನ್ನು ಏರ್ಪಡಿಸಿ ಸ್ಥಳೀಯ ಪ್ರತಿಭೆಗಳಿಗೆ ವೇದಿಕೆ ಹಾಗೂ ಸಾಧಕರನ್ನ ಗುರುತಿಸುವ ಕಾರ್ಯವನ್ನು ಹಮ್ಮಿಕೊಂಡಿದ್ದೇವೆ. ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದು ಸಭಾಧ್ಯಕ್ಷತೆ ವಹಿಸಿದ ಪುತ್ತೂರು ಕಸಾಪ ಅಧ್ಯಕ್ಷರಾದ ಪುತ್ತೂರು ಉಮೇಶ್ ನಾಯಕ್ ಅವರು ತಿಳಿಸಿದರು.
ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ನೇತೃತ್ವದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಪುತ್ತೂರು, ಕಬಕ ಗ್ರಾಮ ಪಂಚಾಯತ್ ಸಹಕಾರದೊಂದಿಗೆ ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಪುತ್ತೂರು ಘಟಕ ಇವರ ಸಂಯೋಜನೆಯಲ್ಲಿ ಹಾಗೂ ಮಿತ್ರಂಪಾಡಿ ಜಯರಾಮ್ ರೈ ಅವರ ಮಹಾಪೋಷಕತ್ವದಲ್ಲಿ ಸಾಹಿತ್ಯದ ನಡಿಗೆ ಗ್ರಾಮದ ಕಡೆಗೆ ಎಂಬ ಘೋಷವಾಕ್ಯದಲ್ಲಿ ನಡೆಯುವ ಗ್ರಾಮ ಗ್ರಾಮದಲ್ಲೂ ಸಾಹಿತ್ಯ ಸಂಭ್ರಮದ ಐದನೇ ಸರಣಿ ಕಾರ್ಯಕ್ರಮವು ಕಬಕ ಗ್ರಾಮದ ಗೌಡ ಸಮುದಾಯಭವನ ಮುರದಲ್ಲಿ ಮಾರ್ಚ್ 30,ರಂದು ನಡೆಯಿತು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನಿಂದ ನಡೆಯುವ ಈ ಕಾರ್ಯಕ್ರಮ ಕಬಕ ಗ್ರಾಮದಲ್ಲಿ ನಡೆಯುವುದು ಅತ್ಯಂತ ಸಂತೋಷದ ಸಂಗತಿ ಇದರಿಂದ ಸ್ಥಳೀಯ ವಿದ್ಯಾರ್ಥಿಗಳು ಸಾಹಿತ್ಯದಲ್ಲಿ ತೊಡಗಿಸಲು ಅವಕಾಶ ಕಲ್ಪಿಸಿದಂತಾಗುತ್ತದೆ ಎಂದು ಕಬಕ ಗ್ರಾಮಪಂಚಾಯತ್ ಪಿ ಡಿ ಓ ಶ್ರೀಮತಿ ಆಶಾ.ಇ. ಅವರು ಶುಭ ಹಾರೈಸಿದರು.
ಸ್ಥಳೀಯ ಸಾಧಕರಿಗೆ ಸನ್ಮಾನ ಸಾಧಕರ ಅಭಿನಂದನಾ ಕಾರ್ಯಕ್ರಮದಲ್ಲಿ ಶಾಸನ ಅಧ್ಯಯನಕಾರರಾದ ಶ್ರೀ ಉಮಾನಾಥ್ ಶೆಣೈ, ಸಾಹಿತಿ ಶಿಕ್ಷಕಿ ಶಾಂತಾ ಪುತ್ತೂರು, ಸಂಗೀತ ಕಲಾವಿದರಾದ ಮಿಥುನ್ ರಾಜ್ ವಿದ್ಯಾಪುರ, ಡಾ.ಶ್ರೀಶಭಟ್ ಸ್ಥಾಪಕಾಧ್ಯಕ್ಷರು ಆಕಾಂಕ್ಷಾ ಚಾರಿಟೇಬಲ್ ಟ್ರಸ್ಟ್ (ರಿ), ಶಿಕ್ಷಣ ಕ್ಷೇತ್ರದ ಸಾಧನೆಗಾಗಿ ಶ್ರೀಮತಿ ಪ್ರೇಮಲತಾ ಎಂ,ಶ್ರೀಮತಿ ಸುಲೋಚನಾ ಕೆ ರವರನ್ನು ಸ್ಥಳೀಯ ಸಾಧಕರ ನೆಲೆಯಲ್ಲಿ ಸನ್ಮಾನಿಸಿ ಗೌರವಿಸಲಾಯಿತು.

ಶಿಕ್ಷಣ ಇಲಾಖೆಯಲ್ಲಿ ದಕ್ಷ ಪ್ರಾಮಾಣಿಕವಾಗಿ ಸೇವೆಯನ್ನು ನೀಡುತ್ತಿರುವ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀ ಲೋಕೇಶ್ ಅವರಿಗೆ ಗಡಿನಾಡಭೂಷಣ ರಾಜ್ಯ ಪ್ರಶಸ್ತಿಯನ್ನು ಗಡಿನಾಡ ಶ್ರೇಯೋಭಿವೃದ್ಧಿ ಟ್ರಸ್ಟ್ ಅಧ್ಯಕ್ಷರಾದ ಡಾ ಅಬೂಬ್ಬಕರ್ ಆರ್ಲಪದವು ನೀಡಿ ಗೌರವಿಸಿದರು. ಈ ಸಂದರ್ಭದಲ್ಲಿ ಶಿಕ್ಷಣ ಸಂಯೋಜಕರಾದ ಶ್ರೀ ಹರಿಪ್ರಸಾದ್ ಉಪಸ್ಥಿತರಿದ್ದರು
ಕಾರ್ಯಕ್ರಮದಲ್ಲಿ ಕಾದಂಬರಿಕಾರರಾದ ಡಾ. ಎಚ್ ಜಿ ಶ್ರೀಧರ್ ಅವರ ಅಧ್ಯಕ್ಷತೆಯಲ್ಲಿ ಸಾಹಿತ್ಯಕ್ಕೆ ಕಬಕ ಗ್ರಾಮದ ಕೊಡುಗೆ ಎಂಬ ವಿಚಾರದಲ್ಲಿ ಹಿರಿಯ ಪತ್ರಕರ್ತರಾದ ಶ್ರೀ ಜಯಾನಂದ ಪೆರಾಜೆ ಅವರು ಉಪನ್ಯಾಸ ನೀಡಿದರು.
ಮನರಂಜಿಸಿದ ವಿವಿಧ ಗೋಷ್ಠಿಗಳು.
ಕವಿಗೋಷ್ಠಿಯಲ್ಲಿ ಹಿರಿಯ ಉದ್ಯಮಿ ಮಾಸ್ಟರ್ ಪ್ಲಾನರಿ ಮಾಲಕರಾದ ಶ್ರೀ ಆನಂದ ಎಸ್ ಕೆ ಅವರ ಕವನ ವಾಚನ ವಿಶೇಷವಾಗಿ ಸಭಿಕರ ಗಮನ ಸೆಳೆಯಿತು.
ಹಿರಿಯ ಸಾಹಿತಿಗಳಾದ ಶ್ರೀ ಗಣೇಶ್ ಪ್ರಸಾದ್ ಪಾಂಡೆಲು ಅವರ ಅಧ್ಯಕ್ಷತೆಯಲ್ಲಿ ನಡೆದ ಬಾಲ ಕವಿ ಗೋಷ್ಠಿಯಲ್ಲಿ
ಮುಫೀದ,ಫಾತಿಮಾಜಿ,ಅಪೂರ್ವ,ಪ್ರಥ್ವಿಕಾ,ಗಹನವರ್ಣಿಕ,ನಿಕ್ಷಿತಾ,ಸ.ಹಿ.ಪ್ರಾ.ಶಾಲೆ ಕಬಕ.ಭವ್ಯ,ಫಜಿಲ್,ಮನ್ವಿತ್, ಶ್ರಾವ್ಯ,ಫಾತಿಮತ್ ಶೈಮಾ ಸ.ಹಿ.ಪ್ರಾ.ಶಾಲೆ.ಮುರ,
ಮನ್ವಿತ್,ಮಿರ್ ಬಫರತ್,ಫಾತಿಮತ್ ಅಹಶಾನ,ಅಲೀಮತ್ ಹಝಮ,ಡಿ.ಕೆ.ಫಾತಿಮತ್ ಹಸ್ನ,ಎಂ.ಪಿ.ಎಂ.ವಿದ್ಯಾಲಯ ಮುರ,ಶೈದ,ಮನಸ್ವಿಎನ್,ರೆಹಮತುಲ್ ಶಿಫಾ, ಫಾತಿಮತ್ ಸೆಬೀನ,ಆಯಿಷತ್ ವಫ ಸರಕಾರಿ ಪ್ರೌಢಶಾಲೆ ಕಬಕ. ಭಾಗವಹಿಸಿದ್ದರು.

ಡಾ ಪೀಟರ್ ವಿಲ್ಸನ್ ಪ್ರಭಾಕರ್ ಅವರ ಅಧ್ಯಕ್ಷತೆಯಲ್ಲಿ ನಡೆದ ಯುವಕವಿಗೋಷ್ಠಿಯಲ್ಲಿ
ಶ್ರೀಮತಿ ಗೀತಾಕೊಂಕೋಡಿ, ಎಂ.ಎ.ಮುಸ್ತಫ ಬೆಳ್ಳಾರೆ, ಮಹಮ್ಮದ್ ಅನ್ಸಾದ್ ಕಬಕ,ಜಯರಾಮಪಡ್ರೆ,ಕೆ.ಶಶಿಕಲಾ ಭಾಸ್ಕರ್ ದೈಲಾ ಬಾಕ್ರಬೈಲ್, ಸೌಜನ್ಯ ಬಿ.ಎಂ ಕೆಯ್ಯೂರು,ಜೀವನ್ ಕೆ,ಶೇಖರ ಎಂ,ಶ್ರೀಮತಿ ರೇಖಾಸುದೇಶ್ ರಾವ್,ಕವಿತಾ.ಎಂ.ಎಲ್,ಭಾಸ್ಕರ್ ಎ. ವರ್ಕಾಡಿ,ಸುಜಿತ್ ಕುಮಾರ್,ಪ್ರಿಯಾಬಾಯಾರು,ಪ್ರಭಾಕರಭಟ್ ಪೋಳ್ಯ,ಶ್ರೇಯಾ ಸಿ.ಪಿ,ಕೀರ್ತನ ಒಕ್ಕಲಿಗ ಬೆಂಬಳೂರು,ಶಶಿಕಲಾ.ಬಿ,ಸುಜಯಾ ಎಸ್ ಸಜಂಗದ್ದೆ,ಬ್ರಂದಾ ಪಿ ಮುಕ್ಕೂರು ಭಾಗವಹಿಸಿದ್ದರು.
ಕ ಸಾ ಪಾ ಕಾರ್ಯಕಾರಿ ಸಮಿತಿಯ ಸದಸ್ಯರಾದ ಶ್ರೀಮತಿ ಶಂಕರಿ ಶರ್ಮಾ ಅವರ ಅಧ್ಯಕ್ಷತೆಯಲ್ಲಿ ಸುಬೋಧ ಶಾಲೆಯ ಮುಖ್ಯ ಉಪಾಧ್ಯಾಯರಾದ ಶ್ರೀಪತಿ ಭಟ್ ಅವರ ಉಪಸ್ಥಿತಿಯಲ್ಲಿ ನಡೆದ ಬಾಲ ಕಥಾ ವಾಚನದಲ್ಲಿ
ಅಪೂರ್ವ,ಪ್ರಜ್ವಲ್,ನಿಕ್ಷಿತಾ,ಯಾಸ್ಮಿನ್,ಹರ್ಷಿತ,ನೆಬಿಸತ್ ತಶ್ಮಿಯ,ಪಾತಿಮತ್ ಶೈಮಾ,ಹರ್ಷ,ಹರ್ಷಿತಾ ಮುರ,ಪಾತಿಮಾ ಸಫಾ,ಪಾತಿಮತ್ ತಹರಿಫ,ವೈಷ್ಣವಿ,ನೆಸೀರ ಯಾಸ್ಮಿನ್ ಭಾಗವಹಿಸಿದ್ದರು.

ಕೃತಿ ಬಿಡುಗಡೆ ಎಂ.ಪಿ.ಎಂ.ವಿದ್ಯಾಲಯ ಸಂಚಾಲಕರಾದ ಎಂ ಪಿ ಅಬೂಬಕ್ಕರ್ ಅವರ ನೆನಪಿರಲಿ ಎಂಬ ಕೃತಿಯನ್ನು ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀ ಲೋಕೇಶ್ ಅವರು ಬಿಡುಗಡೆಗೊಳಿಸಿದರು.

ಸಾಂಸ್ಕೃತಿಕ ಕಾರ್ಯಕ್ರಮ ಸ್ಥಳೀಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಬಕ, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮುರ, ಸರಕಾರಿ ಪದವಿಪೂರ್ವ ಕಾಲೇಜು ಕಬಕ, ಎಂ.ಪಿ.ಎಂ.ವಿದ್ಯಾಲಯ ವಿದ್ಯಾನಗರ ಮುರ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ಕಥೆ ಮತ್ತು ಕವನ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಗೌಡ ಸಮುದಾಯ ಭವನದ ಕಾರ್ಯಕಾರಿ ಸಮಿತಿ ಸದಸ್ಯರಾದ ಶ್ರೀನಾರಾಯಣ ಗೌಡರವರು ಕಾರ್ಯಕ್ರಮ ವನ್ನು ದೀಪ ಬೆಳಗಿಸಿ ಉದ್ಘಾಟಿಸಿದರು,ಡಾ.ಹರ್ಷ ಕುಮಾರ್ ರೈ ಮಾಡಾವು ಕೋಶಾಧ್ಯಕ್ಷ ರು ಕನ್ನಡ ಸಾಹಿತ್ಯ ಪರಿಷತ್ ಪುತ್ತೂರು,ರೋಟರಿ ಯುವ ಅಧ್ಯಕ್ಷೆ ರಾಜೇಶ್ವರಿ ಆಚಾರ್ಯ,ಡಾ.ಸುರೇಶ್ ನೆಗಳಗುಳಿ ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷರು, ಗ್ರಾಮ ಸಾಹಿತ್ಯ ಸಂಭ್ರಮದ ಸಂಚಾಲಕರಾದ ಶ್ರೀ ನಾರಾಯಣ ಕುಂಬ್ರ ಉಪಸ್ಥಿತರಿದ್ದರು

ನಾಡಗೀತೆಯೊಂದಿಗೆ ಕಾರ್ಯಕ್ರಮ ಆರಂಭವಾಗಿ ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು .ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಪುತ್ತೂರು ಘಟಕದ ಅಧ್ಯಕ್ಷೆ ಶಾಂತಾ ಪುತ್ತೂರು ಸ್ವಾಗತಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿದರು.ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಕಾರ್ಯದರ್ಶಿ ಆನಂದ ರೈ ಅಡ್ಕಸ್ಥಳ ಧನ್ಯವಾದವಿತ್ತರು. ಕು.ಅಪೂರ್ವ ಕಾರಂತ್, ಕುಮಾರಿ ಸೌಜನ್ಯ ಬಿಎಂ, ಶ್ರೀಯುತ ಜಯರಾಮ್ ಪಡ್ರೆ ವಿವಿಧ ಗೋಷ್ಠಿಗ