Recent Posts

Monday, January 20, 2025
ಕ್ರೈಮ್ಸಿನಿಮಾಸುದ್ದಿ

ಕಿಸ್‌ ಪ್ರಕರಣ : ಬಾಲಿವುಡ್‌ ನಟಿ ಶಿಲ್ಪಾ ಶೆಟ್ಟಿ ಖುಲಾಸೆ – ಕಹಳೆ ನ್ಯೂಸ್

ಮುಂಬಯಿ : ಚುಂಬನ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಿವುಡ್‌ ನಟಿ ಶಿಲ್ಪಾ ಶೆಟ್ಟಿ ಅವರನ್ನು ಖುಲಾಸೆಗೊಳಿಸಿದ ಪ್ರಕರಣದಲ್ಲಿ ಮ್ಯಾಜಿಸ್ಟ್ರೇಟ್‌ ಕೋರ್ಟ್‌ ಆದೇಶವನ್ನು ಮುಂಬಯಿಯ ಸೆಷನ್ಸ್‌ ಕೋರ್ಟ್‌ ಎತ್ತಿಹಿಡಿದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ರಾಜಸ್ಥಾನದಲ್ಲಿ 2007ರಲ್ಲಿ ನಡೆದಿದ್ದ ಕಾರ್ಯಕ್ರಮದಲ್ಲಿ ಹಾಲಿವುಡ್‌ ನಟ ರಿಚರ್ಡ್‌ ಗಿಯರ್‌ ಬಾಲಿವುಡ್‌ ನಟಿ ಶಿಲ್ಪಾ ಶೆಟ್ಟಿಗೆ ಸಾರ್ವಜನಿಕವಾಗಿ ಚುಂಬಿಸಿದ್ದಕ್ಕೆ ಕೇಸು ದಾಖಲಾಗಿತ್ತು.

ಇಂಥ ವರ್ತನೆ ದೇಶದ ಸಂಸ್ಕೃತಿಗೆ ಅವಮಾನಿಸುವ ಕೃತ್ಯವೆಂದು ಆರೋಪಿಸಿ ಪ್ರಕರಣ ದಾಖಲಿಸಲಾಗಿತ್ತು.

2022ರಲ್ಲಿ ಮ್ಯಾಜಿಸ್ಟ್ರೇಟ್‌ ಕೋರ್ಟ್‌, ಶಿಲ್ಪಾ ನಿರ್ದೋಷಿ. ಅವರು ಕೃತ್ಯದ ಬಲಿಪಶು ಎಂದು ತೀರ್ಪು ನೀಡಲಾಗಿತ್ತು. ಅದನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಲಾಗಿತ್ತು.