Tuesday, January 21, 2025
ದಕ್ಷಿಣ ಕನ್ನಡಪುತ್ತೂರುರಾಜಕೀಯರಾಜ್ಯಸುದ್ದಿ

ದೆಹಲಿಯಲ್ಲಿ ಪುತ್ತೂರು ವಿಧಾನಸಭಾ ಕ್ಷೇತ್ರದ ಕೈ ಟಿಕೆಟ್ ಲಾಭಿ ; ಅಶೋಕ್ ರೈ, ದಿವ್ಯಾಪ್ರಭಾ ಗೌಡ, ಕಾವು ಹೇಮನಾಥ್ ಶೆಟ್ಟಿ ದೆಹಲಿಯಲ್ಲೇ ವಾಸ್ತವ್ಯ..! ಯಾರಿಗೆ ಕೈ ಬಿ’ಫಾರಂ..!?? – ಕಹಳೆ ನ್ಯೂಸ್

ಪುತ್ತೂರು : ವಿಧಾನಸಭಾ ಚುನಾವಣಾ ಕಾವು ರಂಗೇರುತ್ತಿದ್ದು, ಪುತ್ತೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೇಟ್ ಗೆ ಭಾರಿ ಲಾಭಿ ನಡೆಯುತ್ತಿದೆ. ಕೈ ಟಿಕೇಟ್ ಆಕಾಂಕ್ಷಿ ನಾಯಕರು ದೆಹಲಿಯಲ್ಲೇ ಬೀಡು ಬಿಟ್ಟಿದ್ದು, ಯಾರತ್ತ ಹೈಕಮಾಂಡ್ ಚಿತ್ತ ಎಂಬುದು ಯಕ್ಷಪ್ರಶ್ನೆಯಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಅಶೋಕ್ ಕುಮಾರ್ ರೈ :

ಪುತ್ತೂರಿನ ‌ಉದ್ಯಮಿ, ಧಾರ್ಮಿಕ ಸಾಮಾಜಿಕ ಮುಂದಾಳು, ಕರ್ಣ ಎಂದೇ ಕರೆಯಲ್ಪಡುವ ರೈ, ಈ ಭಾರಿ ಬಿಜೆಪಿ ತೊರೆದು ಕಾಂಗ್ರೆಸ್ ಕೈ ಹಿಡಿದಿದ್ದು, ಟಿಕೆಟ್ ಗಾಗಿ ಲಾಭಿ ನಡೆಸುತ್ತಿದ್ದಾರೆ. ಕ್ಷೇತ್ರದಲ್ಲಿ ಬಡವರ ಕಣ್ಣೀರು ಒರೆಸುವ ಮುಖೇನ ಜನ ಮನ್ನಣೆ ಪಡೆದಿರುವುದೇ ಇವರ ಮಾನದಂಡವಾದರೆ, ಉನ್ನತಮಟ್ಟದ ಸಂಪರ್ಕ ಕೂಡಾ ಇವರಿಗಿದೆ. ದೇವಸ್ಥಾನಗಳ ಬ್ರಹ್ಮಕಲಶೋತ್ಸವ ಹಾಗೂ ಕಂಬಳ ಇವರ ಸಾಮಾಜಿಕ ಧಾರ್ಮಿಕ ಬದುಕಿನ ಬಹುಮುಖ್ಯ ಕಾರ್ಯಗಳು. ಯಶಸ್ವಿ ರಾಜಕೀಯ ಮುಂದಾಳು ಆಗುವ ಅವರ ಕನಸು ನನಸಾಗುತ್ತಾ ಎಂಬುದನ್ನು ಕಾದು ನೋಡಬೇಕಾಗಿದೆ.

ದಿವ್ಯಾಪ್ರಭಾ ಗೌಡ ಚಿಲ್ತಡ್ಕ :

ಪಕ್ಕಾ, ಕೈ ಕಾರ್ಯಕರ್ತೆ, ಡಿ.ಕೆ. ಶಿವಕುಮಾರ್ ಶಿಷ್ಯ ವರ್ಗದಲ್ಲಿ ಗುರುತಿಸಿಕೊಂಡ ನಾಯಕಿ. ಸಾಕಷ್ಟು ಸಾಮಾಜಿಕ ಚಟುವಟಿಕೆಗಳನ್ನು ಮಾಡುವ ಮೂಲಕ ಭಾರಿ ಯುವಕರ ಪಡೆಯನ್ನು ಹೊಂದಿರುವ ಕಾಂಗ್ರೆಸ್ ನ ಏಕೈಕ ಒಕ್ಕಲಿಗ ಮಹಿಳೆ. ಬಿಜೆಪಿಯ ಕಾರ್ಯಕರ್ತರು ಇವರ ಜೊತೆ ಗುರುತಿಸಿಕೊಂಡಿರುವುದ ಗಮನಾರ್ಹ ಅಂತ. ಇವರಿಗೆ ಟಿಕೇಟ್ ನೀಡಿದ್ರೆ, ಬಿಜೆಪಿಗೂ ಸ್ವಲ್ಪಮಟ್ಟಿಗೆ ಒಕ್ಕಲಿಗ ಮತ ಬ್ಯಾಂಕ್ ಗೆ ಪೆಟ್ಟು ಬೀಳಬಹುದು ಎಂಬುದು ಕಾಂಗ್ರೆಸ್ ಹಿರಿಯರ ಚಿಂತನೆ, ಅಶೋಕ್ ಕುಮಾರ್ ರೈ ಕಾಂಗ್ರೆಸ್ ಸೇರ್ಪಡೆ ಯಾಗದಿದ್ದಿದ್ರೆ ಪಕ್ಕಾ ದಿವ್ಯಕ್ಕನೇ ಪುತ್ತೂರಿನ ಕೈ ಅಭ್ಯರ್ಥಿ ಆಗ್ತಿದ್ರು ಅಂತಾರೆ ಅವರ ಅಭಿಮಾನಿಗಳು.

ಕಾವು ಹೇಮನಾಥ್ ಶೆಟ್ಟಿ :

ಪುತ್ತೂರು ಕಾಂಗ್ರೆಸ್ ನ ಅಭ್ಯರ್ಥಿಯಾಗಿ ಯಾವತ್ತೂ ಕಣಕ್ಕಿಳಿಬೇಕೇಬಾದ ನಾಯಕ. ಪ್ರತಿ ಚುನಾವಣೆಯಲ್ಲೂ ಇವರಿಗೆ ಟಿಕೆಟ್ ಜಸ್ಟ್ ಮಿಸ್. ಬಹುಶಃ ಈ ಬಾರಿಯೂ ಟಿಕೆಟ್ ಸಿಗುವುದು ಕಷ್ಟವೇ. ಅಕ್ಕ ಮತ್ತು ಅಣ್ಣನ ಲಾಭಿ ಮಧ್ಯೆ ಶೆಟ್ರು ಈ ಭಾರಿಯೂ ಟಿಕೆಟ್ ವಂಚಿತರಾಗ್ತಾರ ಅನ್ನುದು ಕಾವು ಅಭಿಮಾನಿಗಳಿಗೆ ಆತಂಕ ಉಂಟುಮಾಡಿದೆ.

ಶಕುಂತಲಾ ಶೆಟ್ಟಿಯವರು ಬಹುತೇಕ ಈ ಭಾರಿ ಚುನಾವಣಾ ರಾಜಕೀಯದಿಂದ ಹಿಂದೆ ಸರಿದಂತೆ ಕಾಣುತ್ತಿದ್ದು, ಅವರ ನಡೆ ಕುತೂಹಲ ಮೂಡಿಸಿದೆ. ಎಲ್ಲೂ ಟಿಕೇಟ್ ಗಾಗಿ ಲಾಭಿ ನಡೆಸಿರುವುದು ಮೇಲ್ನೋಟಕ್ಕೆ ಕಂಡಬರದಿವುದು ಮತ್ತು ಅಶೋಕ್ ರೈ ಪರ ಇದ್ದಾರೆ ಎಂತ ಕೈ ಕಾರ್ಯಕರ್ತರೇ ಮಾತನಾಡಿಕೊಳ್ತಾ ಇದ್ದಾರಂತೆ. ಒಟ್ಟಿನಲ್ಲಿ ಅಶೋಕ್ ಕುಮಾರ್ ರೈ ಅಥವಾ ದಿವ್ಯಾಪ್ರಭಾ ಗೌಡ ಎಂಬುವ ಚರ್ಚೆ ನಡೆಯುತ್ತಿದ್ದು, ದೆಹಲಿಯಲ್ಲಿ ಎಲ್ಲಾ ನಾಯಕರು ಬೀಡು ಬಿಟ್ಟಿದ್ದಾರೆ.