Friday, September 20, 2024
ರಾಜಕೀಯ

ಯಡಿಯೂರಪ್ಪ ಮತ್ತೆ ಕರ್ನಾಟಕ ಸಿಎಂ ; ಗಣಿ ದೊರೆ ಜನಾರ್ದನ ರೆಡ್ಡಿ ಪ್ಲ್ಯಾನ್ – ಕಹಳೆ ನ್ಯೂಸ್

ಬೆಂಗಳೂರು, ಸೆ 14 : ರಾಜ್ಯದ ಸಮ್ಮಿಶ್ರ ಸರಕಾರದಲ್ಲಿ ದಿನಕ್ಕೊಂದು ಬೆಳವಣಿಗೆಗಳು ನಡೆಯುತ್ತಿದೆ. ಪಕ್ಷದೊಳಗಿನ ನಾಯಕರೇ ಹಲವು ಬಾರಿ ಮುನಿಸಿಕೊಂಡಿದ್ದಾರೆ. ಇದನ್ನೇ ಪ್ರತಿಪಕ್ಷ ರಾಜಕೀಯ ಬೇಳೆ ಬೆಯಿಸಲು ಬಳಸಿಕೊಳ್ಳುತ್ತಿವೆ. ಮೈತ್ರಿ ಸರ್ಕಾರ ಉರುಳಿಸಿ ಯಡಿಯೂರಪ್ಪ ಸಿಎಂ, ಶ್ರೀರಾಮುಲು ಉಪಮುಖ್ಯಮಂತ್ರಿ ಮಾಡಲು ಗಣಿ ದೊರೆ ಜನಾರ್ದನ ರೆಡ್ಡಿ ಪ್ಲ್ಯಾನ್ ಮಾದಿದ್ದಾರೆ ಎನ್ನಲಾಗಿದೆ. ಮೈತ್ರಿ ಸರ್ಕಾರ ಉರುಳಿಸಲು ಅವರೇ ಬಂಡವಾಳ ಹೂಡಿದ್ದಾರೆ ಎನ್ನಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ತಮ್ಮ ಶಿಷ್ಯ ಶ್ರೀರಾಮುಲು ಅವರನ್ನು ಉಪಮುಖ್ಯಮಂತ್ರಿ ಮಾಡಲೇ ಬೇಕೆಂಬ ಹಠಕ್ಕೆ ಜನಾರ್ದನ ರೆಡ್ಡಿ ಬಿದ್ದಿದ್ದಾರೆ. ಯಡಿಯೂರಪ್ಪ ಅವರ ಜೊತೆ ಸೇರಿಕೊಂಡು ಮೈತ್ರಿ ಸರ್ಕಾರ ಉರುಳಿಸಲು ಎಲ್ಲ ರೀತಿಯ ತಯಾರಿಗಳನ್ನು ನಡೆಸಲಾಗುತ್ತಿದೆ ಎಂದು ಕೆಲವು ಮೂಲಗಳು ತಿಳಿಸಿವೆ.
ಮೈತ್ರಿ ಸರ್ಕಾರವನ್ನು ಉರುಳಿಸಲು ಯಡಿಯೂರಪ್ಪ ಮಾಡುತ್ತಿರುವ ಯತ್ನಗಳ ಹಿಂದೆ ಜನಾರ್ದನ ರೆಡ್ಡಿ ಭಾಗಿಯಾಗಿದ್ದಾರೆ ಎನ್ನಲಾಗಿದೆ. ಯಡಿಯೂರಪ್ಪ ಅವರನ್ನು ಹಿಂದೆ ನಿಂತು ಮುನ್ನಡೆಸುತ್ತಿರುವುದೇ ಜನಾರ್ದನ ರೆಡ್ಡಿ ಎಂಬ ಮಾತುಗಳು ರಾಜ್ಯ ರಾಜಕೀಯದಲ್ಲಿ ಮತ್ತೆ ಚರ್ಚೆಗೆ ಗ್ರಾಸವಾಗಿದೆ.
ಕಳೆದ ಬಾರಿ ಬಿಜೆಪಿ ಆಪರೇಷನ್ ಕಮಲ ಹೆಸರಿನಲ್ಲಿ ಕಾಂಗ್ರೆಸ್, ಜೆಡಿಎಸ್ ಪಕ್ಷದ ಶಾಸಕರನ್ನು ಬಿಜೆಪಿಗೆ ಸೆಳೆದಾಗಲೂ ಸಹ ಇದೇ ಜನಾರ್ಧನ ರೆಡ್ಡಿ ಅವರು ಬಿಜೆಪಿಯ ಬೆನ್ನಿಗೆ ನಿಂತಿದ್ದರು. ಬಿಜೆಪಿಯ ಬಹುತೇಕ ರಾಜಕೀಯ ಸಾಹಸಗಳಿಗೆ ರೆಡ್ಡಿ ಸಯೋದರರು ಬೆನ್ನೆಲುಬಾಗಿ ನಿಂತಿದ್ದರು. ಆದರೆ ಸಿಬಿಐ ದಾಳಿ ಬಳಿಕ ಜನಾರ್ಧನ ರೆಡ್ಡಿ ಅವರನ್ನು ರಾಜಕೀಯದಿಂದ ದೂರ ಇಡಲಾಗಿದೆ.

ಜಾಹೀರಾತು