Sunday, November 24, 2024
ಸುದ್ದಿ

ಶ್ರೀಮತಿ ಗಂಗಾ ಪಾದೆಕಲ್ಲು ಅವರಿಗೆ ನಿರಂಜನ ಪ್ರಶಸ್ತಿ – ಕಹಳೆ ನ್ಯೂಸ್

ವಿವೇಕಾನಂದ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯ (ಸ್ವಾಯತ್ತ), ಪುತ್ತೂರುಇದರ ಶಿವರಾಮಕಾರಂತ ಅಧ್ಯಯನಕೇಂದ್ರದಿAದಕೊಡಮಾಡುವ ನಿರಂಜನ ಪ್ರಶಸ್ತಿಯನ್ನು ಈ ವರ್ಷ ಕತೆಗಾರರು, ಕಾದಂಬರಿಕಾರರಾದ ಶ್ರೀಮತಿ ಗಂಗಾಪಾದೇಕಲ್‌ಅವರಿಗೆ ನೀಡುವುದೆಂದು ನಿರ್ಧರಿಸಲಾಗಿದೆ.ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷರಾದ ಡಾ. ಶ್ರೀಪತಿ ಕಲ್ಲೂರಾಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ನಿರಂಜನ ಪ್ರಶಸ್ತಿಯು ಮೊತ್ತರೂಪಾಯಿ 15,000.00, ಪ್ರಶಸ್ತಿ ಪತ್ರ ಮತ್ತು ಸ್ಮರಣಿಕೆಯನ್ನು ಒಳಗೊಂಡಿರುತ್ತದೆ.
ಗಂಗಾ ಪಾದೇಕಲ್ಲು ಅವರು ಸೆಪ್ಟಂಬರ್ 01, 1948 ರಂದು ದಕ್ಷಿಣಕನ್ನಡಜಿಲ್ಲೆಯ ಪುತ್ತೂರಿನಲ್ಲಿ ಜನಿಸಿದರು. ಅವರ ಮೂಲ ಹೆಸರುಗಂಗಾರತ್ನ. ಮುಳಿಯ ಕೇಶವ ಭಟ್ಟ ಹಾಗೂ ಸರಸ್ವತಿ ಅಮ್ಮ ಇವರ ತಂದೆ ತಾಯಿ. ಏಳನೆಯ ತರಗತಿಯವರೆಗೆ ವಿದ್ಯಾಭ್ಯಾಸ ಮಾಡಿದ ಗಂಗಾರತ್ನ ಅವರು ಹದಿನಾರನೆ ವಯಸ್ಸಿನಲ್ಲಿ ಪಾದೇಕಲ್ಲುಗೋವಿಂದ ಭಟ್ಟರನ್ನು ವಿವಾಹವಾದರು. ಇಬ್ಬರು ಹೆಣ್ಣುಮಕ್ಕಳನ್ನು ಹೊಂದಿದ್ದಾರೆ. ತಮ್ಮ ೩೪ನೆಯ ವಯಸ್ಸಿನಲ್ಲಿ ಪತಿಯನ್ನು ಕಳೆದುಕೊಂಡರು. ತಮ್ಮ ಸಾಹಿತ್ಯಕ ಕೊಡುಗೆಗಳ ಮೂಲಕ ನಾಡಿನಾದ್ಯಂತ ಹೆಸರನ್ನು ಗಳಿಸಿದರು. ಪುಲಪೇಡಿ ಮತ್ತು ಇತರ ಕತೆಗಳು, ಹೆಜ್ಜೆ ಮೂಡದ ಹಾದಿಯಲ್ಲಿ, ಹೊಸಹೆಜ್ಜೆ, ವಾಸ್ತವ, ಕ್ಷಮಯಾಧರಿತಿ, ನೆಲೆ ತಪ್ಪಿದ ಹಕ್ಕಿ, ಮನ್ನಣೆಯದಾಹ, ಈ ಪ್ರಜಾರಾಜ್ಯದಲ್ಲಿ, ಸಂಕ್ರಮಣ, ಚಿನ್ನದ ಸೂಜಿ ಇವರ ಕಥಾಸಂಕಲನಗಳು. ಹೊನ್ನಳ್ಳಿಯಲ್ಲೊಮ್ಮೆ, ಸೆರೆಯಿಂದ ಹೊರಗೆ, ಪಯಣದ ಹಾದಿಯಲ್ಲಿ, ಮೌನರಾಗಗಳು, ಅದೃಷ್ಟರೇಖೆ, ಕನಕಾಂಬರಿ, ಸೆರಗಿನಕೆಂಡ, ಇನ್ನೊಂದು ಅಧ್ಯಾಯ, ಬಂಗಾರದಜಿAಕೆ ಹಿಂದೆ, ಇವರ ಕಾದಂಬರಿಗಳು. ಆಯ್ದ ಕತೆಗಳು, ಪ್ರತಿಬಿಂಬ, ಮುಳಿಯ ಮೂಕಾಂಬಿಕೆ, ಏರ್ಯಚಂದ್ರಭಾಗಿರೈ, ಇವರ ಸಂಪಾದಿತ ಕೃತಿಗಳು. ಪ್ರಶಸ್ತಿ : ಸೆರೆಯಿಂದ ಹೊರಗೆ ಕಾದಂಬರಿಗೆ ಕನ್ನಡಸಾಹಿತ್ಯ ಪರಿಷತ್ತಿನ ಮಲ್ಲಿಕಾ ಪ್ರಶಸ್ತಿ ಇನ್ನೊಂದು ಅಧ್ಯಾಯ ಕಾದಂಬರಿಗೆ ವನಿತಾಕಾದಂಬರಿ ಸ್ಪರ್ಧೆಯಲ್ಲಿ ಬಹುಮಾನ, ಶ್ರೀಮತಿ ಕೃಷ್ಣಬಾಯಿ ದತ್ತಿನಿಧಿ ಪ್ರಶಸ್ತಿ, ನೀರ್ಪಾಜೆ ಭೀಮ ಭಟ್ಟ ಪ್ರಶಸ್ತಿ, ಅನುಪಮಾ ಪ್ರಶಸ್ತಿ, ಪುಲಪೇಡಿಕತೆಯಾಧಾರಿತರೇಡಿಯೋ ನಾಟಕಕ್ಕೆ ರಾಷ್ಟಿçÃಯ ನಾಟಕೋತ್ಸವದಲ್ಲಿ ಮೊದಲ ಬಹುಮಾನದೊರಕಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು