Sunday, November 24, 2024
ಸುದ್ದಿ

ಧರ್ಮಸ್ಥಳ, ಹೊರನಾಡು ಪ್ರವಾಸಕ್ಕೆ ತೆರಳಿದ್ದ 4 ಬಸ್‌ಗಳನ್ನ ವಶಕ್ಕೆ ಪಡೆದ ಚುನಾವಣಾ ಜಾಗೃತ ದಳ – ಕಹಳೆ ನ್ಯೂಸ್

ಮಧುಗಿರಿ: ಧರ್ಮಸ್ಥಳ, ಹೊರನಾಡು ಸೇರಿದಂತೆ ಸುತ್ತಮುತ್ತಲಿನ ಕ್ಷೇತ್ರಗಳಿಗೆ ಪ್ರವಾಸಕ್ಕೆ ತೆರಳಿ ವಾಪಸಾಗುತ್ತಿದ್ದ ನಾಲ್ಕು ಖಾಸಗಿ ಬಸ್‌ಗಳನ್ನು ತಾಲ್ಲೂಕಿನ ಗಿಡದಾಗಲಹಳ್ಳಿ ಗ್ರಾಮದ ಸಮೀಪ ಚುನಾವಣಾ ಜಾಗೃತ ದಳದ ತಂಡ ಮಂಗಳವಾರ ವಶಕ್ಕೆ ಪಡೆದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಜೆಡಿಎಸ್‌ನಿಂದ ಈ ಪ್ರವಾಸ ಏರ್ಪಡಿಸಲಾಗಿತ್ತು ಎನ್ನಲಾಗಿದೆ. ಬಡವನಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ. ಬಸ್‌ನಲ್ಲಿದ್ದ ಯಾತ್ರಿಕರನ್ನು ಸುರಕ್ಷಿತವಾಗಿ ಗ್ರಾಮಕ್ಕೆ ತಲುಪಿಸಿದ್ದಾರೆ.

‘ವಿಧಾನಸಭೆ ಚುನಾವಣೆ ನೀತಿ ಸಂಹಿತೆ ಜಾರಿಯಾಗಿದ್ದು, ಮತದಾರರಿಗೆ ಆಮಿಷ ಒಡ್ಡುವ ಸಲುವಾಗಿ ಹಳ್ಳಿಗಳ ಜನರನ್ನು ಪ್ರವಾಸಕ್ಕೆ ಕಳುಹಿಸಲಾಗಿದೆ. ಬಸ್‌ಗಳನ್ನು ವಶಕ್ಕೆ ಪಡೆದು, ಜನರಿಂದ ಮಾಹಿತಿ ಪಡೆದುಕೊಳ್ಳಲಾಗಿದೆ. ಜೆಡಿಎಸ್‌ ಮುಖಂಡರು ಹಾಗೂ ಶಾಸಕ ಎಂ.ವಿ.ವೀರಭದ್ರಯ್ಯ ಕಡೆಯವರು ಪ್ರವಾಸದ ವ್ಯವಸ್ಥೆ ಮಾಡಿದ್ದರು ಎಂದು ಜನರು ತಿಳಿಸಿದ್ದಾರೆ. ಹಾಗಾಗಿ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ಜಾಗೃತ ದಳದ ಅಧಿಕಾರಿ ಹನುಮಂತರಾಯಪ್ಪ ದೂರು ನೀಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ತಾಲ್ಲೂಕಿನ ಐ.ಡಿ.ಹಳ್ಳಿ ಹೋಬಳಿಯ ಯರ್ರಮ್ಮನಹಳ್ಳಿ, ಕಸಬಾ ವ್ಯಾಪ್ತಿಯ ಶೆಟ್ಟಿಹಳ್ಳಿ, ಮರಬನಹಳ್ಳಿ ಗ್ರಾಮಸ್ಥರು ಪ್ರವಾಸಕ್ಕೆ ಹೋಗಿದ್ದರು. ಒಂದು ಬಸ್‌ನಲ್ಲಿ 50ರಿಂದ 60 ಮಂದಿ ಇದ್ದರು