ದುಷ್ಕರ್ಮಿಗಳಿದ ಹತ್ಯೆಗೀಡಾದ ಹಿಂದೂ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಅವರ ಕನಸಿನ ಮನೆ ಗೃಹಪ್ರವೇಶಕ್ಕೆ ಸಜ್ಜಾಗಿ ನಿಂತಿದೆ.
ಸುಳ್ಯ ತಾಲೂಕಿನ ಬೆಳ್ಳಾರೆ ಗ್ರಾಮದ ನೆಟ್ಟಾರು ಎಂಬಲ್ಲಿ ನೂತನವಾಗಿ ನಿರ್ಮಿಸಿರುವ ಮನೆಗೆ ‘ಪ್ರವೀಣ್’ ಎಂದು ಹೆಸರಿಟ್ಟಿದ್ದು, ಮನೆಯ ಗೃಹಪ್ರವೇಶ ಎಪ್ರಿಲ್ 27 ರಂದು ನಡೆಯಲಿದೆ.
ಗೃಹಪ್ರವೇಶೋತ್ಸವನ್ನು ಗಣಪತಿ ಹೋಮ ಹಾಗೂ ಸತ್ಯನಾರಾಯಣ ಪೂಜೆಯೊಂದಿಗೆ ನೆರವೇರಿವುದಾಗಿ ಪ್ರವೀಣ್ ಮನೆಯವರು ನಿರ್ಧರಿಸಿದ್ದಾರೆ. ಇದರ ಜೊತೆ ಪುತ್ತೂರು ಜಗದೀಶ ಅಚಾರ್ಯ ಮತ್ತು ಅವರ ಬಳಗದವರಿಂದ ಭಜನಾ ಸಂಕೀರ್ತನೆ ನಡೆಯಲಿದ್ದು, ಬಳಿಕ ರಾತ್ರಿ ಶ್ರೀ ಕಲ್ಲುರ್ಟಿ ದೈವದ ನೇಮೋತ್ಸವ ನಡೆಯಲಿದೆ.
ರಾಜ್ಯ ಬಿಜೆಪಿ ಮತ್ತು ನಳಿನ್ ಕುಮಾರ್ ಕಟೀಲ್ ನೇತೃತ್ವದಲ್ಲಿ ಮನೆಯ ಶಂಕು ಸ್ಥಾಪನೆ ನೆರವೇರಿತ್ತು. ಪ್ರವೀಣ್ ಸಮಾಧಿ ಬಳಿಯ ಜಾಗದಲ್ಲೇ ಹೊಸ ಮನೆ ನಿರ್ಮಾಣವಾಗಿದ್ದು, ಮೊಗರೋಡಿ ಕನ್‌ಸ್ಟçಕ್ಷನ್ ಕಂಪನಿ ಪ್ರವೀಣ್ ನೆಟ್ಟಾರಿನ ಕನಸ್ಸಿನ ಮನೆಯನ್ನ ಚೆನ್ನಾಗಿ ನಿರ್ಮಿಸಿ ಕೊಟ್ಟಿದೆ.