Monday, January 20, 2025
ದಕ್ಷಿಣ ಕನ್ನಡಪುತ್ತೂರುರಾಜಕೀಯರಾಜ್ಯಸುದ್ದಿಸುಳ್ಯ

ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಹಾಲಿ ಶಾಸಕರುಗಳಿಗೆ ಕೈ ತಪ್ಪಲಿದೆ ಬಿಜೆಪಿ ಟಿಕೆಟ್..! ಪುತ್ತೂರು, ಸುಳ್ಯದಲ್ಲಿ ಹೊಸಮುಖಕ್ಕೆ ಅವಕಾಶ ನೀಡಲು ಬಿಜೆಪಿ ಮಾಸ್ಟರ್ ಪ್ಲಾನ್ ; ವಿಭಾಗ, ಪ್ರಾಂತದ ಆರ್.ಎಸ್.ಎಸ್. ಪ್ರಮುಖರ ಹೈ ವೋಲ್ಟೇಜ್ ಬೈಠಕ್ – ಕಹಳೆ ನ್ಯೂಸ್

ದಕ್ಷಿಣ ಕನ್ನಡ : ರಾಜ್ಯದಲ್ಲಿ ಚುನಾವಣಾ ಕಣ ರಂಗೇರುತ್ತಿದ್ದು, ಗುಜರಾತ್ ಮಾದರಿಯಲ್ಲೇ ಬುಹುತೇಕ ಹಾಲಿ ಶಾಸಕರುಗಳಿಗೆ ಬಿಜೆಪಿ ಟಿಕೆಟ್ ಕೈ ತಪ್ಪಲಿದೆ ಎಂಬ ಮಾಹಿತಿ ಬಿಜೆಪಿ ಆಂತರಿಕ ಮೂಲಗಳಿಂದ ಹೊರಬಿದಿದೆ. ಅದರಲ್ಲೂ ಕೆಸರಿ ಪಡೆಗಳ ಭದ್ರಕೋಟೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸುಳ್ಯ ಮತ್ತು ಪುತ್ತೂರು ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಬದಲಾವಣೆ ಕುರಿತು ವಿಶೇಷ ಸಭೆಯೇ ನಡೆದಿದೆ. ಮಂಗಳೂರು ವಿಭಾಗ ಹಾಗೂ ದಕ್ಷಿಣ ಪ್ರಾಂತದ ಆರ್.ಎಸ್.ಎಸ್. ಪ್ರಮುಖರ ಉಪಸ್ಥಿತಿಯಲ್ಲಿ ಬೈಠಕ್ ನಡೆದಿದ್ದು, ಹಾಲಿ ಶಾಸಕರಾದ ಎಸ್.ಅಂಗಾರ ಹಾಗೂ ಸಂಜೀವ ಮಠಂದೂರು ಅವರನ್ನು ಬದಲಾವಣೆ ಮಾಡುವ ಕುರಿತು ಬಿಸಿ ಬಿಸಿ ಚರ್ಚೆ ನಡೆದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಎಸ್. ಅಂಗಾರ :

ಸುಳ್ಯ ವಿಧಾನ ಸಭಾ(ಮೀಸಲು) ಕ್ಷೇತ್ರದಿಂದ ಅಂಗಾರ ಎಸ್ ಅವರು ೧೯೯೪ರಿಂದ ಸತತವಾಗಿ ಆರು ಬಾರಿ ಬಿಜೆಪಿ ಪಕ್ಷದಿಂದ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಸತತ ಆರು ಅವಧಿಗಳಿಗೆ ಶಾಸಕರಾಗಿ ಸುಳ್ಯ ಕ್ಷೇತ್ರವನ್ನು ಪ್ರತಿನಿಧಿಸಬರುತ್ತಿದ್ದು ಇವರದ್ದು. ಬಿ.ಎಸ್. ಯಡಿಯೂರಪ್ಪ ಮಂತ್ರಿ ಮಂಡಲದಲ್ಲಿ ಬಂದರು ಮತ್ತು ಮೀನುಗಾರಿಕಾ ಹಾಗೂ ಚಿಕ್ಕಮಗಳೂರು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದಾರೆ. ಬಸವರಾಜ ಬೊಮ್ಮಾಯಿ ಮಂತ್ರಿ ಮಂಡಲಕ್ಕೆ ಸಚಿವರಾಗಿ ಪ್ರಮಾಣ ವಚನ ಸ್ವೀಕಾರ ಹಾಗೂ ದಕ್ಷಿಣ ಕನ್ನಡ ಜಿಲ್ಲೆ ಉಸ್ತುವಾರಿ ಸಚಿವರಾಗಿದ್ದಾರೆ. ಆದರೆ, ಈ ಭಾರಿ ಹೊಸ ಮುಖಕ್ಕೆ ಅವಕಾಶ ನೀಡಬೇಕು ಎಂಬುದು ಕ್ಷೇತ್ರದ ಜನರ ಅಭಿಪ್ರಾಯ. ಜೊತೆಗೆ ಸಂಘ ಪರಿವಾರದ ಕಟ್ಟಾಳು ಆಗಿರುವ ಅಂಗಾರ, ಪಕ್ಷದ ಹಿರಿಯರ ಸೂಚನೆಯನ್ನು ಇಂದಿನವರೆಗೂ ಮೀರಿದ ಅಥವಾ ಉಲ್ಲಂಘಿಸಿದ ಉದಾಹರಣೆಯೇ ಇಲ್ಲ, ಹೀಗಾಗಿ ಈ ಬಾರಿಯೂ ಪಕ್ಷ ಬದಲಾವಣೆ ಸೂಚಿಸಿದರೆ ಹೊಸ ಅಭ್ಯರ್ಥಿಯನ್ನು ಅಂಗಾರ ಗೆಲ್ಲಿಸುವುದು ಸ್ಪಷ್ಟವಾಗಿದೆ. ಅನೇಕ ಹೊಸಬರ ಹೆಸರು ಕೇಳಿ ಬರುತ್ತಿದ್ದು, ಸಂಘಪರಿವಾದ ಮಾತು ಕೇಳುವ ಕಟ್ಟರ್ ಹಿಂದುತ್ವವಾದಿಗೇ ಅಳೆದು ತೂಗಿ ಟಿಕೆಟ್ ನೀಡಲಿದ್ದಾರೆ ಎಂಬ ಮಾಹಿತಿ ಲಭ್ಯವಿದೆ.

ಸಂಜೀವ ಮಠಂದೂರು :

ಪದವಿ ವಿದ್ಯಾರ್ಥಿಯಾಗಿರುವಾಗ ಸಂಜೀವ ಮಠಂದೂರು, ಆರ್. ಎಸ್. ಎಸ್. ಸ್ವಯಂ ಸೇವಕರಾಗಿ ಸಂಘ ಪರಿವಾರದ ವಿವಿಧ ವಿಭಾಗಗಳಲ್ಲಿ ದುಡಿದು ನಾಯಕತ್ವವನ್ನು ಮೈಗೂಡಿಸಿಕೊಂಡರು. ಹಿರೇಬಂಡಾಡಿ ಗ್ರಾಮ ಪಂಚಾಯತಿ ಸದಸ್ಯರಾಗಿ ಆಯ್ಕೆಯಾದರು. ಪುತ್ತೂರು ತಾಲೂಕು ಪಂಚಾಯತ ಸದಸ್ಯರಾಗಿ ಆಯ್ಕೆಯಾಗಿದ್ದರು, 2018ರಲ್ಲಿ 206ನೇ ವಿಧಾನ ಸಭಾ ಕ್ಷೇತ್ರವಾದ ಪುತ್ತೂರಿನಲ್ಲಿ ಬಿಜೆಪಿ ಎಂ.ಎಲ್.ಎ. ಆಗಿ ಆಯ್ಕೆಯಾಗಿದ್ದಾರೆ. ಹಿರೇಬಂಡಾಡಿ ಹಾಲುತ್ಪಾದಕರ ಸಂಘದ ಸ್ಥಾಪಕ ಅಧ್ಯಕ್ಷರಾಗಿ, ಉಪ್ಪಿನಂಗಡಿ ಸೇವಾ ಸಹಕಾರಿ ಬ್ಯಾಂಕು, ದ.ಕ.ಜಿಲ್ಲಾ ಕೃಷಿಕರ ಮಾರಾಟ ಸಂಘ ಮಂಗಳೂರು, ಜನತಾ ಬಜಾರ್‌ ಮಂಗಳೂರು, ಕೃಷಿಕರ ಬಹುರಾಜ್ಯ ಸಹಕಾರಿ ಸಂಸ್ಥೆ ಕ್ಯಾಂಪ್ಕೋ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದಾರೆ. ಪುತ್ತೂರು ಎ.ಪಿ.ಎಂ.ಸಿ. ಸದಸ್ಯರಾಗಿ ಕಾರ್ಯನಿರ್ವಹಿಸಿದ್ದಾರೆ. ಶಾಸಕರದ ನಂತರ ಅನೇಕ ಅಭಿವೃದ್ಧಿ ಕಾರ್ಯಗಳು ಮಾಡಿ ಜನಮನ್ನಣೆ ಪಡೆದುಕೊಂಡಿದ್ದಾರೆ. ಅದರೆ, ಹಿಂದುತ್ವದ ಭದ್ರಕೋಟೆಯಾದ ಪುತ್ತೂರಿನಲ್ಲಿ ಹಿಂದೂಪರ ಸಂಘಟನೆಗಳ ಕಾರ್ಯಕರ್ತರ ವಿರೋಧಕ್ಕೆ ಗುರಿಯಾಗಿದ್ದು, ಸ್ವಜಾತಿ ಕಡೆಗೆ ಹೆಚ್ಚಿನ ಒಲವು ಮತ್ತಷ್ಟು ಹಿಂದೂ ಸಂಘಟನೆಗಳನ್ನು ಕೆರಳಿಸಿದೆ. ಅನೇಕ ಕಠಿಣ ಸಂದರ್ಭದಲ್ಲಿ ಶಾಸಕರ ನಿರುತ್ಸಾಹವೂ ಇದಕ್ಕೆ ಒಂದು ಕಾರಣ. ಅನೇಕ ಆರೋಪಗಳು ಇವರ ಮೇಲೆ ಇದ್ದು, ಸಂಘದ ಪ್ರಮುಖರೂ ಇವರ ಈ ಭಾರಿಯ ಸ್ಪರ್ಧೆಗೆ ವ್ಯಾಪಕ ವಿರೋಧ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಇವರನ್ನು ಕೈ ಬಿಡುವುದು ಬಹುತೇಕ ಖಚಿವಾಗಿದೆ. ಸಿಡಿ ಕುರಿತು ಗುಸು ಗುಸು ಚರ್ಚೆಗಳಾಗುತ್ತಿದ್ದು, ಸಾಮಾನ್ಯ ಕಾರ್ಯಕರ್ತರು ಶಾಸಕರ ಅನೇಕ ನಡೆಗಳನ್ನು ವಿರೋಧಿಸುತ್ತಿದ್ದಾರೆ. ಪುತ್ತೂರಿನಿಂದ ಪ್ರಭಲ ಹಿಂದುತ್ವವಾಗಿ, ಒಕ್ಕಲಿಗ ನಾಯಕನಿಗೆ ಟಿಕೆಟ್ ನೀಡುವ ಕುರಿತೂ ಚರ್ಚೆಗಳು ನಡೆದಿದೆ. ಅದರ ಜೊತೆಗೆ ಜಾತೀಯನ್ನು ಬದಿಗಿಟ್ಟು ಕೇವಲ ಹಿಂದುತ್ವ ಮತ್ತು ಅಭಿವೃದ್ಧಿ ಮಾತನದಂಡದಲ್ಲೂ ಹೊಸಮುಖದ ಆಯ್ಕೆಯಾದರೂ ಅಚ್ಚರಿಯಿಲ್ಲ. ಅಲ್ಲದರೆ, ಸಂಜೀವ ಮಠಂದೂರು ಅವರನ್ನು ಎರಡು ದಿನದ ಹಿಂದೆಯಷ್ಟೆ ಪಕ್ಷದ ಹಿರಿಯರು ಬೆಂಗಳೂರಿಗೆ ಕರೆಸಿ, ಟಿಕೆಟ್ ನಿರಾಕರಣೆ ಬಗ್ಗೆ ಚರ್ಚೆ ನಡೆಸಿದ್ದಾರೆ ಎನ್ನಲಾಗುತ್ತಿದೆ.

ಒಟ್ಟಿನಲ್ಲಿ ಸುಳ್ಯ ಮತ್ತು ಪುತ್ತೂರಿನಲ್ಲಿ ಹಾಲಿ ಶಾಸಕರುಗಳಿ ಟಿಕೆಟ್ ಕೈ ತಪ್ಪುವುದು ಬಹುತೇಕ ಖಚಿತವಾಗಿದೆ.