Recent Posts

Monday, January 20, 2025
ಕ್ರೈಮ್ಸಿನಿಮಾಸುದ್ದಿ

ಆತ ನನ್ನ ಬೆತ್ತಲೆ ಫೋಟೋ ಕಳುಹಿಸಿ ದೈಹಿಕ ಕಿರುಕುಳ ; ನಿರ್ಮಾಪಕರ ವಿರುದ್ಧ ನಟಿ ಸ್ವಸ್ತಿಕಾ ಮುಖರ್ಜಿ ಗಂಭೀರ ಆರೋಪ – ಕಹಳೆ ನ್ಯೂಸ್

ಕೋಲ್ಕತಾ: ಬೆಂಗಾಲಿ ಸಿನಿಮಾ ರಂಗದ ಜನಪ್ರಿಯ ನಟಿಯರಲ್ಲಿ ಒಬ್ಬರಾಗಿರುವ ಸ್ವಸ್ತಿಕಾ ಮುಖರ್ಜಿ ಅವರು ದೈಹಿಕ ಕಿರುಕುಳ ನೀಡಿದ ಆರೋಪವನ್ನು ನಿರ್ಮಾಪಕರೊಬ್ಬರ ವಿರುದ್ಧ ಮಾಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಇತ್ತೀಚೆಗಷ್ಟೇ ಹಿಂದಿಯಲ್ಲಿ ʼಕಾಲʼ(Qala) ಸಿನಿಮಾದ ಮೂಲಕ ಗಮನ ಸೆಳೆದಿದ್ದ ನಟಿ, ತಮ್ಮ ಮುಂಬರುವ ಸಿನಿಮಾದ ನಿರ್ಮಾಪಕರ ವಿರುದ್ದ ಕಿರುಕುಳ ನೀಡಿದ ಆರೋಪವನ್ನು ಮಾಡಿದ್ದಾರೆ.

ನಟಿ ಸ್ವಸ್ತಿಕಾ ನಟಿಸಿರುವ ಮುಂದಿನ ‘ಶಿಬ್ಪುರ್’ ಚಿತ್ರದ ಸಹ ನಿರ್ಮಾಪಕರಾಗಿರುವ ಸಂದೀಪ್ ಸರ್ಕಾರ್ ಹಾಗೂ ಆತನ ಸ್ನೇಹಿತರ ವಿರುದ್ಧ ದೂರು ನೀಡಿದ್ದಾರೆ.

ಈ ಬಗ್ಗೆʼ ಓಟಟಿ ಪ್ಲೇʼ ಜೊತೆ ಮಾತನಾಡಿರುವ ಅವರು, ‘ಶಿಬ್ಪುರ್’ ಚಿತ್ರೀಕರಣ ಹಾಗೂ ಡಬ್ಬಿಂಗ್‌ ನಡೆಯುತ್ತಿತ್ತು. ಆ ವೇಳೆ ನಾನು ಸಂದೀಪ್ ಸರ್ಕಾರ್ ಅವರನ್ನು ನೋಡೇ ಇಲ್ಲ. ಅವರ ಪರಿಚಯವನ್ನು ಮತ್ತೊಬ್ಬ ಸಹ ನಿರ್ಮಾಪಕರಾಗಿರುವ ಅಜಂತಾ ಸಿನ್ಹಾ ರಾಯ್ ಅವರು ಮಾಡಿಕೊಟ್ಟರು. ಇದ್ದಕ್ಕಿದ್ದಂತೆ, ಸಂದೀಪ್ ಸರ್ಕಾರ್ ನನಗೆ ಬೆದರಿಕೆ ಇಮೇಲ್‌ಗಳನ್ನು ಕಳುಹಿಸಲು ಪ್ರಾರಂಭಿಸಿದರು. ತಾನು ಅಮೇರಿಕನ್ ಪ್ರಜೆ ಮತ್ತು ನಾನು ಅವರೊಂದಿಗೆ ಸಹಕರಿಸದಿದ್ದರೆ ಅವರು ಯುಎಸ್ ವೀಸಾವನ್ನು ಪಡೆದುಕೊಳ್ಳಲು ಆಗಲ್ಲ ಪೊಲೀಸ್ ಕಮಿಷನರ್, ಮುಖ್ಯಮಂತ್ರಿ, ಮುಂತಾದವರ ಬಳಿ ನನ್ನನ್ನು ಎಳೆದು ತರುವುದಾಗಿಯೂ ಬೆದರಿಕೆ ಹಾಕಿದ್ದಾರೆ. ನಾನು ಸರಿಯಾಗಿ ಸಮಯಕ್ಕೆ ಶೂಟಿಂಗ್‌ ಗೆ ತೆರಳಿದ್ದೇನೆ. ಪ್ರಚಾರದಲ್ಲೂ ತೊಡಗಿಕೊಂಡಿದ್ದೇನೆ. ನಾನು ಯಾವಾಗ ಫ್ರೀ ಇದ್ದೇನೆ ಎನ್ನುವುದರ ಡೇಟ್ ಗಳನ್ನು ಚಿತ್ರ ತಂಡಕ್ಕೆ ಇಮೇಲ್‌ ಮಾಡಿದ್ದೇನೆ ಇಷ್ಟೆಲ್ಲಾ ಮಾಡಿದರೂ ಯಾಕೆ ಅವರು ಈ ರೀತಿ ಹೇಳುತ್ತಿದ್ದಾರೆ ಎನ್ನುವುದು ಮಾತ್ರ ನನಗೆ ಗೊತ್ತೇ ಆಗಿಲ್ಲ ಎಂದಿದ್ದಾರೆ.

ಇದಾದ ಕೆಲ ದಿನಗಳ ಬಳಿಕ ನನಗೆ ಸಂದೀಪ್‌ ಸರ್ಕಾರ್‌ ಅವರ ಸ್ನೇಹಿತನೆಂದು ಹೇಳಿ ರವೀಶ್‌ ಶರ್ಮಾ ಎಂಬ ವ್ಯಕ್ತಿಯಿಂದ ಇಮೇಲ್‌ ಗಳು ಬಂದಿದೆ. ನಾನು ಒಬ್ಬ ಅದ್ಭುತ ಕಂಪ್ಯೂಟರ್‌ ಹ್ಯಾಕರ್. ನಾನು ನಿಮ್ಮ ಫೋಟೋವನ್ನು ಮಾರ್ಫ್‌ ಮಾಡಿ ಅದನ್ನು ಆಶ್ಲೀಲ ವೆಬ್‌ ಸೈಟ್‌ ಹಾಕುತ್ತೇನೆ ಎಂದು ಎರಡು ಮಾರ್ಫ್‌ ಮಾಡಿದ ನ್ಯೂಡ್‌ ಪೋಟೋಗಳನ್ನು ಇಮೇಲ್‌ ನಲ್ಲಿ ಕಳುಹಿಸಿದ್ದಾನೆ. ಸಂದೀಪ್‌ ಸರ್ಕಾರ್‌ ರವೀಶ್‌ ಶರ್ಮಾ ತನ್ನ ಸ್ನೇಹಿತ ಎಂದು ಒಪ್ಪಿಕೊಂಡಿದ್ದಾರೆ.

ಈ ಬೆದರಿಕೆ ಇಮೇಲ್‌ಗಳ ಸ್ಕ್ಯಾನ್ ಮಾಡಿದ ಪ್ರತಿಗಳೊಂದಿಗೆ ಈಸ್ಟರ್ನ್ ಇಂಡಿಯಾ ಮೋಷನ್ ಪಿಕ್ಚರ್ಸ್ ಅಸೋಸಿಯೇಷನ್‌ಗೆ ನಟಿ ತಲುಪಿಸಿದ್ದಾರೆ. ಹಾಗೂ ಲೈಂಗಿಕ ಕಿರುಕುಳ ನೀಡಿದ ಕುರಿತು ನಿರ್ಮಾಪಕ ಹಾಗೂ ಆತನ ಸ್ನೇಹಿತನ ವಿರುದ್ಧ ಕೋಲ್ಕತ್ತಾದ ಗಾಲ್ಫ್ ಗ್ರೀನ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

ಆದರೆ ನಿರ್ಮಾಪಕರು ಈ ಆರೋಪವನ್ನು ಅಲ್ಲಗೆಲ್ಲದಿದ್ದಾರೆ. ನಿರ್ದೇಶಕರ ಪ್ರಚೋದನೆಯಿಂದ ನಟಿ ಈ ರೀತಿಯ ಆರೋಪವನ್ನು ಮಾಡಿದ್ದಾರೆ ಎಂದು ನಿರ್ಮಾಪಕ ಹೇಳಿದ್ದಾರೆ.

ಪರಂಬ್ರತ ಚಟರ್ಜಿ, ರಜತವ ದತ್ತಾ, ಮಮತಾ ಶಂಕರ್, ಖರಾಜ್ ಮುಖೋಪಾಧ್ಯಾಯ, ಸುಸ್ಮಿತಾ ಮುಖರ್ಜಿ ಮುಂತಾದವರು ನಟಿಸಿರುವ ಶಿಬ್ಪುರ್’ ಮೇ. 5 ರಂದು ರಿಲೀಸ್‌ ಆಗಲಿದೆ.