Recent Posts

Monday, January 20, 2025
ಬೆಳ್ತಂಗಡಿಸುದ್ದಿ

ಜನಜಾಗೃತಿ ವೇದಿಕೆ ಕಣಿಯೂರು ವಲಯದ ನೂತನ ವಲಯ ಅಧ್ಯಕ್ಷರಾಗಿ ಪ್ರಪುಲ್ಲಚಂದ್ರ ಅಡ್ಯoತಾಯ ಆಯ್ಕೆ –ಕಹಳೆ ನ್ಯೂಸ್

ಕರಾಯ:ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ. ಸಿ ಟ್ರಸ್ಟ್ ಗುರುವಾಯನಕೆರೆ ಮತ್ತು ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಬೆಳ್ತಂಗಡಿ ಇವುಗಳ ಸಂಯುಕ್ತ ಆಶ್ರಯದಲ್ಲಿ ಜನಜಾಗೃತಿ ವೇದಿಕೆ ಕಣಿಯೂರು ವಲಯದ ನೂತನ ವಲಯ ಅಧ್ಯಕ್ಷರ ಆಯ್ಕೆ ಸಭೆಯು ಕರಾಯ ಶ್ರೀ ಕೃಷ್ಣ ಭಜನಾ ಮಂದಿರದಲ್ಲಿ ನಡೆಯಿತು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಗುರುವಾಯನಕೆರೆ ಯೋಜನಾಧಿಕಾರಿ ಯಶವಂತ್ ರವರು ಜನಜಾಗೃತಿ ವೇದಿಕೆಯ ಹುಟ್ಟು ಬೆಳವಣಿಗೆ ನಡೆದು ಬಂದ ದಾರಿ ಬಗ್ಗೆ ಪ್ರಾಸ್ತವಿಕವಾಗಿ ಮಾತನಾಡಿದರು. ದ. ಕ ಜಿಲ್ಲಾ ನಿರ್ದೇಶಕರಾದ ಸತೀಶ್ ಶೆಟ್ಟಿ ರವರು ಜನ ಜಾಗೃತಿ ಗ್ರಾಮ ಸಮಿತಿಯ ಉದ್ದೇಶ, ನವಜೀವನ ಸಮಿತಿಯ ಬಲವರ್ಧನೆಯ ಬಗ್ಗೆ ಮಾಹಿತಿ ನೀಡಿದರು.

ಕಣಿಯೂರು ವಲಯ ಜನಜಾಗೃತಿ ವೇದಿಕೆಯ ನೂತನ ಅಧ್ಯಕ್ಷರಾಗಿ ಪ್ರಪುಲ್ಲಚಂದ್ರ ಅಡ್ಯoತಾಯರವರನ್ನು ಆಯ್ಕೆ ಮಾಡಿ ಅಧಿಕಾರ ಹಸ್ತಾಂತರ ಮಾಡಲಾಯಿತು.

ಈ ಸಭೆಯಲ್ಲಿ ವಲಯಾಧ್ಯಕ್ಷರಾದ ರುಕ್ಮಯ್ಯ ಪೂಜಾರಿ,ತಾಲ್ಲೂಕು ಜನಜಾಗೃತಿ ವೇದಿಕೆಯ ಅಧ್ಯಕ್ಷ ರಾದ ಶಾರದಾ ಆರ್ ರೈ,ಮತ್ತು ಸದಸ್ಯರು, ವಲಯ ಒಕ್ಕೂಟ ದ ಅಧ್ಯಕ್ಷರಾದ ರಮಾನಂದ ಪೂಜಾರಿ, ವಲಯ ಮೇಲ್ವಿಚಾರಕರಾದ ಶ್ರೀಮತಿ ಪ್ರೇಮಾ ಗ್ರಾಮ ಸಮಿತಿ ನವಜೀವನ ಸಮಿತಿ ಅಧ್ಯಕ್ಷರು ಹಾಗೂ ಒಕ್ಕೂಟದ ಅಧ್ಯಕ್ಷರು, ವಲಯದ ಸೇವಾಪ್ರತಿನಿಧಿಗಳು ಉಪಸ್ಥಿತರಿದ್ದರು. ಸೇವಾಪ್ರತಿನಿಧಿ ಸೀತಾರಾಮ ಆಳ್ವ ರವರು ಸ್ವಾಗತಿಸಿ, ಮೇಲ್ವಿಚಾರಕರಾದ ಪ್ರೇಮ ವಂದಿಸಿದರು.