Sunday, January 26, 2025
ಸುದ್ದಿ

ಮಹಿಳೆಯ ಜೊತೆಗಿನ ಫೋಟೋ ವೈರಲ್ ಪ್ರಕರಣ : ಬೆಂಗಳೂರಿನ ಸೈಬರ್ ಕ್ರೈಂ ಠಾಣೆಗೆ ಶಾಸಕ ಮಠಂದೂರರ ಆಪ್ತ ಸಹಾಯಕನಿಂದ ದೂರು – ಕಹಳೆ ನ್ಯೂಸ್

ಪುತ್ತೂರಿನ ಶಾಸಕರಾದ ಮಠಂದೂರುರವರು ಮಹಿಳೆಯೊಬ್ಬರ ಜತೆಗಿನ ಅಶ್ಲೀಲವಾದ ಕೆಲ ಫೋಟೊಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು . ಈ ವಿಷಯದ ಕುರಿತು ಶಾಸಕ ಮಠಂದೂರು ಇವರ ಆಪ್ತ ಸಹಾಯಕ ಬೆಂಗಳೂರಿನ ಸೈಬರ್ ಕ್ರೈಂ ಠಾಣೆಗೆ ದೂರು ನೀಡಿದ್ದಾರೆ. ಇವರು ನೀಡಿದ ದೂರಿನಂತೆ ಅಲಸೂರು ಸೈಬರ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಚುನಾವಣಾ ಸಂದರ್ಭದಲ್ಲಿ, ಅದರಲ್ಲೂ ಟಿಕೆಟ್ ಘೋಷಣೆಗೆ ಪಕ್ಷ ಸಿದ್ದತೆ ನಡೆಸುತ್ತಿರುವ ವೇಳೆ ಮಾನ ಹಾನಿ ಮಾಡುವ ದುರುದ್ದೇಶದಿಂದ ಎಡಿಟೆಡ್ ಫೋಟೊವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿ ಬಿಡಲಾಗಿದೆ. ಇದರ ಹಿಂದಿರುವ ಜನರನ್ನು ಪತ್ತೆ ಹಚ್ಚಿ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಪೊಲೀಸರಿಗೆ ಶಾಸಕರು ದೂರು ನೀಡಿರುವುದಾಗಿ ತಿಳಿಸಿದ್ದಾರೆ. ಈ ಪ್ರಕರಣದ ಕುರಿತು ಮಹಿಳೆಯೂ ಉಪ್ಪಿನಂಗಡಿ ಠಾಣೆಗೆ ದೂರು ನೀಡಿದ್ದು.ಅವರು ಸಹ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಪೋಟೊಗಳು ಅಸಲಿ ಅಲ್ಲ ಎಂದು ತಿಳಿಸಿದ್ದಾರೆ. ಈ ವಿಷಯದ ಕುರಿತು ಸರಿಯಾದ ಕ್ರಮ ಕೈಗೊಳ್ಳಬೇಕೆಂದು ಅವರು ಅಗ್ರಹಿಸಿದ್ದಾರೆ.