Friday, January 24, 2025
ಸುದ್ದಿ

ಅಣ್ಣನ ಜೊತೆ ತಂಗಿ ಜಗಳ ; ಹಾಗಂತ ಮೊಬೈಲ್‌ನ್ನೇ ನುಂಗಿಬಿಡೋದಾ..!? ಮುಂದೇನಾಯ್ತು ನೋಡಿ..! –ಕಹಳೆ ನ್ಯೂಸ್

ಮಧ್ಯ ಪ್ರದೇಶದ ಭಿಂಡ್ ಜಿಲ್ಲೆಯ ಅಮಯಾನ್ ಪಟ್ಟಣದಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದೆ. ಹೌದು.. ಸಹೋದರನೊಂದಿಗೆ ಜಗಳ ಮಾಡಿಕೊಂಡ ಯುವತಿಯೊಬ್ಬಳು ಕೋಪಗೊಂಡು ಚೈನೀಸ್ ಮೊಬೈಲ್‌ನ್ನೇ ನುಂಗಿ ಬಿಟ್ಟಿದ್ದಾಳೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಘಟನೆಯಿಂದ ಮನೆಯವರು ಆಘಾತಕ್ಕೊಳಗಾಗಿದ್ದು, ತಕ್ಷಣವೇ ಯುವತಿಯನ್ನ ಜಿಲ್ಲಾಸ್ಪತ್ರೆ ಕರೆದುಕೊಂಡು ಹೋಗಿದ್ದಾರೆ. ಆದರೆ ವಿಷಯದ ಗಂಭೀರತೆಯನ್ನು ಕಂಡು, ಯುವತಿಯನ್ನ ತಕ್ಷಣವೇ ಗ್ವಾಲಿಯರ್‌ನ ಜಯಾರೋಗ್ಯ ಆಸ್ಪತ್ರೆಗೆ ಶಿಫಾರಸು ಮಾಡಲಾಗಿದೆ. ಅಲ್ಲಿ ಯುವತಿಗೆ ಶಸ್ತ್ರಚಿಕಿತ್ಸೆಯ ಮೂಲಕ ಆಕೆಯ ಹೊಟ್ಟೆಯಲ್ಲಿ ಸಿಲುಕಿದ್ದ ಮೊಬೈಲ್‌ಅನ್ನು ಹೊರತೆಗೆದಿದ್ದಾರೆ. ಸಕಾಲದಲ್ಲಿ ಬಾಲಕಿಯ ಆಪರೇಷನ್ ಮಾಡದಿದ್ದರೆ ಆಕೆಯ ಜೀವಕ್ಕೆ ಅಪಾಯವಾಗುತ್ತಿತ್ತು ಎಂದು ವೈದ್ಯರು ಹೇಳಿದ್ದಾರೆ.