ಸಂತಫಿಲೋಮಿನಾ ಕಾಲೇಜಿನಲ್ಲಿ ವಿಜ್ಞಾನ ವೇದಿಕೆಯ ಕಾರ್ಯ ಕ್ರಮಗಳ ಉದ್ಘಾಟನೆ ಮತ್ತು ಅತಿಥಿ ಉಪನ್ಯಾಸ – ಕಹಳೆ ನ್ಯೂಸ್
ಸಂತ ಫಿಲೋಮಿನಾ ಕಾಲೇಜಿನ ವಿಜ್ಞಾನ ವೇದಿಕೆಯ ಆಶ್ರಯದಲ್ಲಿ ವಿಜ್ಞಾನ ವೇದಿಕೆಯ ಕಾರ್ಯಕ್ರಮಗಳ ಉದ್ಘಾಟನೆ ಮತ್ತು ಅತಿಥಿ ಉಪನ್ಯಾಸ ಕಾರ್ಯಕ್ರಮವನ್ನುಆಯೋಜಿಸಲಾಯಿತು. ಪುತ್ತೂರಿನ ಖ್ಯಾತ ದಂತ ವೈದ್ಯರಾದ ಡಾ| ಎಲ್ ಕೃಷ್ಣಪ್ರಸಾದ್ ಉದ್ಘಾಟಕರಾಗಿಭಾಗವಹಿಸಿದ್ದರು.
ಕಾರ್ಯ ಕ್ರಮದ ಅಧ್ಯಕ್ಷತೆಯನ್ನುವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಡಾ| ಆಂಟನಿಪ್ರಕಾಶ್ ಮೊಂತೆರೊರವರು ವೈಜ್ಞಾನಿಕ ಮನೋಭಾವವನ್ನು ಬೆಳೆಸಿಕೊಳ್ಳುವಂತೆ ವಿದ್ಯಾರ್ಥಿಗಳಿಗೆ ಕರೆ ನೀಡಿದರು. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಕ್ಯಾಂಪಸ್ ನಿದೇಶಕರಾದ ಸ್ಟ್ಯಾನಿಪಿಂಟೋರವರು ವಿದ್ಯಾರ್ಥಿಗಳಿಗೆ ಶುಭಹಾರೈಸಿದರು. ಉದ್ಘಾಟನ ಕಾರ್ಯಕ್ರಮದ ಬಳಿಕ| ಎಲ್ ಕೃಷ್ಣಪ್ರಸಾದ್ರವರುʼದಂತವೈದ್ಯಕೀಯಮತ್ತು ರಸಾಯನಶಾಸ್ತ್ರʼಎಂಬವಿಷಯದ ಕುರಿತು ಉಪನ್ಯಾಸ ನೀಡಿದರು. ತಮ್ಮಉಪನ್ಯಾಸದಲ್ಲಿ ಅವರು ದಂತ ಕೆಡುವ ಬಗೆ ಹೇಗೆ ಮತ್ತು ಹುಳುಕು ಹಲ್ಲುಗಳ ಚಿಕಿತ್ಸೆ ಮಾಡುವ ವಿವಿಧವಿಧಾನಗಳನ್ನುತಿಳಿಸಿದರು.
ತನ್ವಿ ಮತ್ತು ಬಳಗ ವಿಜ್ಞಾನ ವೇದಿಕೆಯ ಅಧ್ಯಕ್ಷರಾದ ರಕ್ಷಾ ಅಂಚನ್ ಸ್ವಾಗತಿಸಿದರು. ವಿಜ್ಞಾನ ವೇದಿಕೆಯ ನಿದೇಶಕರಾದ ಡಾ| ಪಿ.ಎಸ್. ಕೃಷ್ಣಕುಮಾರ್ ಉದ್ಘಾಟಕರನ್ನುಸಭೆಗೆಪರಿಚಯಿಸಿದರು. ಉಪಾಧ್ಯಕ್ಷರಾದ ಪ್ರಕೃತಿ ಅಶೋಕ್ ವಂದಿಸಿದರು. ತೃತೀಯ ಬಿಎಸ್ಸಿಯ ವಿದ್ಯಾರ್ಥಿ ಸೌಜನ್ಯ ಕಾರ್ಯಕ್ರಮ ನಿರೂಪಿಸಿದರು.
ವೇದಿಕೆಯಲ್ಲಿ ವಿಜ್ಞಾನ ವಿಭಾಗ ದಡೀನ್ ಹಾಗೂ ಕಾಲೇಜಿನ ಉಪ-ಪ್ರಾಂಶುಪಾಲರಾದಪ್ರೊ| ಗಣೇಶ್ ಭಟ್ ಹಾಗೂವಿಜ್ಞಾನವೇದಿಕೆಯ ವಿದ್ಯಾರ್ಥಿಪದಾಧಿಕಾರಿಗಳುಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ವಿಜ್ಞಾನ ದಿನಾಚರಣೆಯ ಅಂಗವಾಗಿ ನಡೆಸಿದ ಪ್ರಬಂಧ ಸ್ಪರ್ದೆ ವಿಜೇತರಿಗೆ ಬಹುಮಾನಗಳನ್ನುವಿತರಿಸಲಾಯಿತು.