Friday, January 24, 2025
ಸುದ್ದಿ

ಇದೆಂಥಾ ಅವಸ್ಥೆ ರ‍್ರೆ..! ಬೀದಿ ನಾಯಿ ಮೇಲೂ ಲೈಂಗಿಕ ದೌರ್ಜನ್ಯ; ಕಾಮುಕ ಅಂದರ್ – ಕಹಳೆ ನ್ಯೂಸ್

ದಿನದಿಂದ ದಿನಕ್ಕೆ ಮನುಷ್ಯನ ಮನಃಸ್ಥಿತಿ ವಿಕೃತವಾಗುತ್ತಿದೆ. ಇಲ್ಲಿವರೆಗೆ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗ್ತಾ ಇದ್ದ ಕಾಮ ಪಿಶಾಚಿಗಳು ಇತ್ತೀಚೆಗೆ ಮೂಕ ಪ್ರಾಣಿಗಳ ಜೊತೆ ಪೈಶಾಚಿಕವಾಗಿ ನಡೆದುಕೊಳ್ಳುತ್ತಿರುವ ಪರಿ ನೋಡ್ತಿದ್ರೆ ಅದು ನಿಜ ಅಂತ ಅನ್ನಿಸದೇ ಇರೋಲ್ಲ.
ಕೆಲವೇ ಕೆಲ ದಿನಗಳ ಹಿಂದಷ್ಟೆ ವೈರಲ್ ಆಗಿದ್ದ ಸುದ್ದಿಯೊಂದು ಜನರನ್ನ ಹೌಹಾರುವಂತೆ ಮಾಡಿತ್ತು. ವ್ಯಕ್ತಿಯೊಬ್ಬ ಹಸುವಿನ ಜೊತೆ ಲೈಂಗಿಕ ಕ್ರಿಯೆ ನಡೆಸಿದ್ದ ಅನ್ನೊ ಸುದ್ದಿ ಅದು. ಆ ವ್ಯಕ್ತಿಯ ಮನಃಸ್ಥಿತಿ ಎಂಥಹದ್ದಾಗಿರಬಹುದು ಎಂದು ಎಲ್ಲರೂ ಶಾಪ ಹಾಕಿದ್ದಾರೆ.
ಈ ಘಟನೆ ನಡೆದು ಇನ್ನೂ ಕೆಲವೇ ದಿನಗಳು ಕಳೆದಿವೆ, ಆಗಲೇ ಮುಂಬೈನ ಅಂಧೇರಿಯಲ್ಲಿ ೪೫ ವರ್ಷದ ವ್ಯಕ್ತಿ ಬೀದಿ ನಾಯಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಈ ಪ್ರಕರಣ ಬೆಳಕಿಗೆ ಬರುತ್ತಿದ್ದ ಹಾಗೆಯೇ ಅಂಧೇರಿಯ ಪೊಲೀಸರು, ಈ ಕೃತ್ಯವನ್ನೆ ಎಸಗಿರುವ ಮಿಥಲೇಶ್ ದಾಸ್ ಅನ್ನೊ ವ್ಯಕ್ತಿಯನ್ನ ಬಂಧಿಸಿದ್ದಾರೆ. ಕಳೆದ ಮಂಗಳವಾರದAದು ಅಂಧೇರಿಯ ವೀರಾ ದೇಸಾಯಿ ರಸ್ತೆ ಬಳಿ ಮಿಥಲೇಶ್ ದಾಸ್ ನಾಯಿಯ ಮೇಲೆ ಬಲಾತ್ಕಾರ ಮಾಡುವುದನ್ನ ಯುವತಿಯೊಬ್ಬಳು ಗಮನಿಸಿದ್ದಾಳೆ. ಕೊನೆಗೆ ಆಕೆ, ಸ್ಥಳೀಯ ಪೊಲೀಸ್ ಠಾಣೆಗೆ ಹೋಗಿ ದೂರನ್ನ ಕೊಟ್ಟಿದ್ದಾಳೆ. ಈಗ ಆ ವ್ಯಕ್ತಿಯನ್ನ ಬಂಧಿಸಲಾಗಿದ್ದು, ಆ ವ್ಯಕ್ತಿಯ ಮೇಲೆ ಸದ್ಯಕ್ಕೆ ಸೆಕ್ಷನ್ 377 ನಿಯಮದಡಿಯಲ್ಲಿ ಪ್ರಕರಣವನ್ನ ದಾಖಲಿಸಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು