Friday, January 24, 2025
ಸುದ್ದಿ

ಮದುವೆ ಆಗಲು ಕೆನಡಾದಿಂದ ಬಂದ ಪ್ರೇಯಸಿ..! ಆಕೆಗೆ ಗುಂಡಿಟ್ಟು ಕೊಂದ ಪ್ರಿಯಕರ! ಕಾರಣವೇನು..? –ಕಹಳೆ ನ್ಯೂಸ್

ಮದುವೆ ಆಗುವ ಆಸೆಯಿಂದ ಕೆನಡಾದಿಂದ ಭಾರತಕ್ಕೆ ಬಂದ ಯುವತಿಯನ್ನು ಆಕೆಯ ಪ್ರಿಯಕರನೇ ಹಣೆಗೆ 2 ಬಾರಿ ಗುಂಡು ಹಾರಿಸಿ ಹತ್ಯೆ ಮಾಡಿದ ಘಟನೆ ಹರಿಯಾಣದಲ್ಲಿ ನಡೆದಿದೆ. ನೀಲಂ ಎಂಬಾಕೆಯನ್ನು ಆಕೆಯ ಗೆಳೆಯ ಸುನೀಲ್ ಕಳೆದ ಜೂನ್ ತಿಂಗಳಲ್ಲಿ ಕೊಂದು ಮೈದಾನದಲ್ಲಿ ಸುಟ್ಟು ಹಾಕಿದ್ದಾನೆ ಎಂಬ ಉದ್ದಿ ಇದೀಗ ಬೆಳಕಿಗೆ ಬಂದಿದೆ.
ಮನೆಯಿಂದ ನಾಪತ್ತೆಯಾಗಿದ್ದ ನೀಲಂ ಬಾಯ್ ಫ್ರೆಂಡ್ ಜೊತೆ ಇದ್ದಾಳೆ ಎಂದು ಕುಟುಂಬಸ್ಥರು ಭಾವಿಸಿದ್ದರು. ಇದೀಗ ಪೊಲೀಸರು ಬಿವಾನಿ ಎಂಬಲ್ಲಿ ಯುವತಿಯ ಅಸ್ಥಿಪಂಜರಗಳನ್ನು ಕಲೆ ಹಾಕಿದ್ದಾರೆ. ನೀಲಂಗಳನ್ನು ಅಪಹರಿಸಿ ಕೊಲೆ ಮಾಡಿರುವುದಾಗಿ ವಿಚಾರಣೆ ವೇಳೆ ಸುನೀಲ್ ಒಪ್ಪಿಕೊಂಡಿದ್ದಾನೆ. ಈತ ಮದುವೆ ಆಗುವ ಪ್ರಸ್ತಾಪ ಇಟ್ಟಿದ್ದಕ್ಕಾಗಿ ಪ್ರೇಯಸಿಯ ಹಣೆಗೆ ಎರಡು ಬಾರಿ ಗುಂಡು ಹಾರಿಸಿ ಕೊಲೆ ಮಾಡಿದ್ದನ್ನು ವಿವರಿಸಿದ್ದಾನೆ.
ಕಳೆದ ಜೂನ್ ತಿಂಗಳಲ್ಲಿ ನೀಲಂ ಕೆನಡಾಗೆ ಹೋಗಲು ಅಂತಾರಾಷ್ಟ್ರೀಯ ಇಂಗ್ಲೀಷ್ ಪರೀಕ್ಷೆಯಲ್ಲಿ ಪಾಸಾಗಿದ್ದಳು. ಆದರೆ ಗೆಳೆಯ ಸುನೀಲ್ ಭಾರತಕ್ಕೆ ಮರಳುವಂತೆ ಪಟ್ಟು ಹಿಡಿದಿದ್ದ ಎಂದು ನೀಲಂ ಸೋದರಿ ಪೊಲೀಸರಿಗೆ ನೀಡಿದ ದೂರಿನಲ್ಲಿ ಆರೋಪಿಸಿದ್ದಳು.
ನೀಲಂ ಕೆನಡಾದಿಂದ ಮರಳಿದ ನಂತರ ದೂರವಾಣಿ ಕರೆಯನ್ನೂ ಮಾಡಿರಲಿಲ್ಲ. ಅಲ್ಲದೇ ಸುನೀಲ್ ಕೂಡ ನಾಪತ್ತೆಯಾಗಿದ್ದ. ಈ ಬಗ್ಗೆ ಕುಟುಂಬದವರು ಪೊಲೀಸರಿಗೆ ದೂರು ನೀಡಿದ್ದರೂ ಅಪಹರಣ ಪ್ರಕರಣ ದಾಖಸಿಕೊಂಡಿದ್ದ ಪೊಲೀಸರು ಯಾವುದೇ ಕ್ರಮ ಕೈಗೊಂಡಿರಲಿಲ್ಲ. ನೀಲಂ ಕುಟುಂಬಸ್ಥರು ಗೃಹ ಸಚಿವರನ್ನು ಭೇಟಿ ಮಾಡಿ ಒತ್ತಡ ಹೇರಿದ್ದರಿಂದ ತನಿಖೆ ಕೈಗೊಂಡ ಪೊಲೀಸರು ಪ್ರಕರಣವನ್ನು ಭೇದಿಸಿದ್ದು, ಸುನೀಲ್ ನನ್ನು ಬಂಧಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು