Friday, January 24, 2025
ಸುದ್ದಿ

ಜೂನ್ 5ಕ್ಕೆ ‘ಅಭಿಷೇಕ್ ಅಂಬರೀಶ್ ಮದುವೆ ಫಿಕ್ಸ್..! ಮದುವೆಗೆ ಆಮಂತ್ರಣ ನೀಡಿ ʼಪ್ರಧಾನಿ ಮೋದಿಯನ್ನೇ ಆಹ್ವಾನʼ | -ಕಹಳೆ ನ್ಯೂಸ್

ರೆಬೆಲ್ ಸ್ಟಾರ್ ಅಂಬರೀಶ್ ಪುತ್ರ ಅಭಿಷೇಕ್ ಅಂಬರೀಶ್ ಅವರ ಮದುವೆ ಜೂನ್ 5ಕ್ಕೆ ಫಿಕ್ಸ್ ಆಗಿದೆ. ಮದುವೆಗೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಆಹ್ವಾನ ಪತ್ರಿಕೆ ನೀಡಿ ಆಹ್ವಾನಿಸಿದ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಸದ್ಯ ವೈರಲ್ ಆಗಿದೆ. ಜೂನ್ 5ಕ್ಕೆ ರೆಬೆಲ್ ಸ್ಟಾರ್ ಅಂಬರೀಶ್ ಪುತ್ರ ಮದುವೆ ಫಿಕ್ಸ್ ಆಗಿದ್ದು, ಅವಿವಾ ಮತ್ತು ಅಭಿಷೇಕ್ ಮದುವೆಗೆ ಈಗಾಗಲೇ ದಿನಗಣನೆ ಶುರುವಾಗಿದೆ. ಅದ್ಧೂರಿ ಮದುವೆ ಭರ್ಜರಿ ಸಿದ್ದತೆ ನಡೆಸಲಾಗುತ್ತಿದೆ. ಮದುವೆ ಡೇಟ್ ಫಿಕ್ಸ್ ಆಗ್ತಿದ್ದಂತೆ, ಪ್ರಧಾನಿ ಮೋದಿ ಅವರನ್ನ ನಟ ಅಭಿಷೇಕ್- ಸಂಸದೆ ಸುಮಲತಾ ಅಂಬರೀಶ್ ಭೇಟಿಯಾಗಿದ್ದಾರೆ. ಅಭಿಷೇಕ್ ಅಂಬರೀಶ್ ಅವರ ಮದುವೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಆಹ್ವಾನ ಪತ್ರಿಕೆ ನೀಡಿ ಆಹ್ವಾನ ನೀಡಿದ್ದಾರೆ. ಮದುವೆಗೆ ದೇಶದ ಪ್ರಧಾನಿ ಮೋದಿ ಆಗಮನ ಮಾಡುತ್ತಾರಾ ಅನ್ನೋದನ್ನು ಕಾದು ನೋಡಬೇಕಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು