Thursday, January 23, 2025
ಸುದ್ದಿ

ಪುತ್ತೂರು : ಮೊಟ್ಟೆತ್ತಡ್ಕದಲ್ಲಿ ಐಕ್ಯ ಕಲಾ ಸೇವಾ ಟ್ರಸ್ಟ್ (ರಿ.)ನ ಉದ್ಘಾಟನೆ – ಕಹಳೆ ನ್ಯೂಸ್

ಪುತ್ತೂರು : ಕಳೆದ 9 ವರ್ಷಗಳಿಂದ Seven Star Guys ಎಂಬ ಹೆಸರಿನಲ್ಲಿ ಹತ್ತು ಹಲವಾರು ಸಾಂಸ್ಕøತಿಕ ಕಾರ್ಯಕ್ರಮಗಳನ್ನು ನೀಡುತ್ತಾ ಬಂದಂತಹ ತಂಡ ಇದೀಗ ಇನ್ನಷ್ಟು ಸಮಾಜಮುಖಿ ಕೆಲಸ ಕಾರ್ಯಗಳನ್ನು ಮಾಡಬೇಕೆಂಬ ಉದ್ದೇಶ ಇಟ್ಟುಕೊಂಡು ಐಕ್ಯ ಕಲಾ-ಸೇವಾ ಟ್ರಸ್ಟ್ (ರಿ.) ಎಂಬ ಮರುನಾಮಕರಣದೊಂದಿಗೆ ಶ್ರೀ ಚಾಮುಂಡೇಶ್ವರಿ ದೇವಸ್ಥಾನ ಮಿಷನ್ ಮೂಲೆ, ಮೊಟ್ಟೆತ್ತಡ್ಕ ಕ್ಷೇತ್ರದಲ್ಲಿ ಉದ್ಘಾಟನೆಗೊಂಡಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಕಾರ್ಯಕ್ರಮದಲ್ಲಿ ಕ್ಷೇತ್ರದ ಆಡಳಿತ ಮುಕ್ತೆಸರರಾದ ಶ್ರೀ ರಮೇಶ್ ರೈ ಮಿಷನ್ ಮೂಲೆ, ಅಧ್ಯಕ್ಷ ರಾದ ಶ್ರೀ ರಾಮಶೆಟ್ಟಿ, ಕಾರ್ಯದರ್ಶಿ ಶೇಖರ್ ಕೆ. ಬಿ , ವಿಶ್ವನಾಥ ರೈ ಮಿಷನ್ ಮೂಲೆ, ತನಿಯಪ್ಪ ಸುವರ್ಣ, ಬಾಲಕೃಷ್ಣ ರೈ ಮತ್ತಿತರರು ಉಪಸ್ಥಿತರಿದ್ದರು.

ಟ್ರಸ್ಟ್ ನ ಸಂಚಾಲಕರಾಗಿ ಅವಿನಾಶ್. ವಿ. ಆರ್, ಅಧ್ಯಕ್ಷರಾಗಿ ಚೇತನ್ ಕುಮಾರ್, ಉಪಾಧ್ಯಕ್ಷರಾಗಿ ಉತ್ತೇಶ್. ಬಿ, ಕಾರ್ಯದರ್ಶಿಯಾಗಿ ಕೆ. ಕಾರ್ತಿಕ್, ಜೊತೆ ಕಾರ್ಯದರ್ಶಿಯಾಗಿ ಅಭಿಷೇಕ್ ಶೆಟ್ಟಿ, ಕೋಶಾಧಿಕಾರಿಯಾಗಿ ದಕ್ಷಿತ್ ಎಸ್. ಎಂ. ಆಯ್ಕೆಯಾಗಿದ್ದಾರೆ.

ಕೀರ್ತನ್ ಕೆ, ದೀಕ್ಷಿತ್ ಡಿ. ಬಿ, ಸಚಿನ್ ಕುಮಾರ್, ಶ್ರೀಧರ್ ಎಸ್, ಪುನೀತ್ ಕೆ, ಪ್ರಜ್ವಲ್ ಭಂಡಾರಿ, ಆದರ್ಶ್, ಕೆ ದೀಕ್ಷಿತ್ ಕುಮಾರ್, ಅನುಷಾ ವಿ.ಆರ್, ಕಾವ್ಯ ಮಿಥುನ್, ಪ್ರಿಯಾಂಕಾ, ಕಾವ್ಯ ಚೇತನ್ ಟ್ರಸ್ಟ್ ನ ಸದಸ್ಯರಾಗಿ ಆಯ್ಕೆಯಾಗಿದ್ದಾರೆ.