Thursday, January 23, 2025
ಸುದ್ದಿ

ಹಾರಾಡುತ್ತಿದ್ದ ಹೆಲಿಕ್ಯಾಪ್ಟರ್ ನೊಳಗೆ ಕಾಳಿಂಗ ಸರ್ಪ..! ಮುಂದೇನಾಯ್ತು ನೋಡಿ., -ಕಹಳೆ ನ್ಯೂಸ್

ರಸ್ತೆಯಲ್ಲಿ ನಡೆಯೋ ವೇಳೆ ದಿಢೀರನೆ ಸರ್ಪ ಅಡ್ಡ ಬಂದ್ರೆನೆ ಮೈ ಚಳಿ ಬಂದಾಗುತ್ತೆ. ಆದ್ರೆ ಹೆಲಿಕಾಫ್ಟರ್ ಹೆಲಿಕಾಪ್ಟರ್ ಓಡಿಸುವ ಪೈಲಟ್ ತನ್ನ ಬೆನ್ನ ಹಿಂದೆಯೇ ಕಾಳಿಂಗಸರ್ಪ ತಲೆ ಹಾಕಿದ್ದನ್ನು ಕಂಡರೆ ಏನಾಗಬಹುದು? ಹೇಳಿ..ಹೌದು ಹೆಲಿಕಾಫ್ಟರ್‌ನಲ್ಲಿ ಕಾಳಿಂಗಸರ್ಪ ಕಾಣಿಸಿಕೊಂಡ ಘಟನೆ ನಡೆದಿದೆ. ಏನೂ ಅನಾಹುತವಾಗದಂತೆ ಪೈಲಟ್ ರುಡಾಲ್ಫ್ ಎರಾಸ್ಮಸ್ ಪರಿಸ್ಥಿತಿಯನ್ನು ನಿಭಾಯಿಸಿ ಎಲ್ಲರ ಮೆಚ್ಚುಗೆ ಪಡೆದಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ದ.ಆಫ್ರಿಕಾದ ವೂರ್ಸೆಸ್ಟರ್‌ನಿಂದ ನೆಲ್ಸ್ ಪ್ರುಟ್‌ಗೆ 4 ಮಂದಿಯಿದ್ದ ಸಣ್ಣ ವಿಮಾನ ವನ್ನು ರುಡಾಲ್ಫ್ ಚಾಲನೆ ಮಾಡುತ್ತಿದ್ದರು. ಅವರಿಗೆ ತಾವು ಆಸನದೊಳಗೇ ಕೂತು ಸ್ವಲ್ಪ ಹೊತ್ತು ಆದಾಗ ಬೆನ್ನಹಿಂದೆ ತಣ್ಣಗಾಗಲು ಆರಂಭವಾಗಿ, ಏನೋ ಹರಿದಾಡಿ ದಂತಾದಾಗ, ತಿರುಗಿ ನೋಡುತ್ತಾರೆ… ಕಾಳಿಂಗ ಸರ್ಪದ ದರ್ಶನ! ಕೂಡಲೇ ಕಾಪ್ಟರ್‌ನೊಳಕ್ಕೆ ಹಾವಿದೆ, ಸದ್ಯದಲ್ಲೇ ಭೂಸ್ಪರ್ಶ ಮಾಡಲಾಗುತ್ತದೆ. ಧೈರ್ಯವಾಗಿ ಕುಳಿತುಕೊಳ್ಳಿ ಎಂದು ಪ್ರಯಾಣಿಕರಿಗೆ ತಿಳಿಸಿದರು.

ಅಲ್ಲೇ ಸನಿಹದಲ್ಲಿದ್ದ ವೆಲ್ಕಾಮ್ ವಿಮಾನ ನಿಲ್ದಾಣದಲ್ಲಿ ಇಳಿಸಿಯೇಬಿಟ್ಟರು. ಎಲ್ಲರು ಇಳಿದ ಬಳಿಕ ಕಡೆಯದಾಗಿ ರುಡಾಲ್ಫ್ ಇಳಿದುಕೊಂಡು ಆಸನದ ಕೆಳಗೆ ನೋಡಿದಾಗ ಕಾಳಿಂಗ ಸರ್ಪ ಸುರುಳಿ ಸುತ್ತಿಕೊಂಡು ಮಲಗಿತ್ತು. ಬಳಿಕ ಅದನ್ನು ಹೊರ ತೆಗೆಯಲಾಯಿತು.