Thursday, January 23, 2025
ಕ್ರೈಮ್ಬೆಂಗಳೂರುರಾಜಕೀಯರಾಜ್ಯ

ಕಾರಿನಲ್ಲಿ ಮೊಬೈಲ್, ಸೀರೆ, ಬ್ಲೌಸ್ ಪೀಸ್, ಶಾಲು, ಪ್ರೋಗ್ರೆಸ್ ರಿಪೋರ್ಟ್ ಇರುವ ಬುಕ್​ಲೆಟ್ಸ್​ಗಳನ್ನು ಮತದಾರರಿಗೆ ಹಂಚಲುಕೊಂಡೊಯ್ಯತ್ತಿದ್ದ ವೇಳೆ ಚೆಕ್​ಪೋಸ್ಟ್​ನಲ್ಲಿ ಕಾಂಗ್ರೆಸ್ ಶಾಸಕಿ ಸೌಮ್ಯಾ ರೆಡ್ಡಿ ಕಾರು ಜಪ್ತಿ ಮಾಡಿದ ಪೊಲೀಸರು – ಕಹಳೆ ನ್ಯೂಸ್

ಜಯನಗರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕಿ ಸೌಮ್ಯಾ ರೆಡ್ಡಿಗೆ (Sowmya Reddy) ಸೇರಿದ ಇನೋವಾ ಕಾರನ್ನು ಫ್ಲೈಯಿಂಗ್ ಸ್ಕ್ವಾಡ್ ಹಾಗೂ ತಿಲಕನಗರ ಪೊಲೀರು ಗುರುವಾರ ವಶಕ್ಕೆ ಪಡೆದಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಚೆಕ್​ಪೋಸ್ಟ್​ನಲ್ಲಿ ತಪಾಸಣೆ ವೇಳೆ ಪೊಲೀಸರು ಕಾರನ್ನು ಜಪ್ತಿ ಮಾಡಿ, ಅದರಲ್ಲಿರುವ ವಸ್ತುಗಳನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಸದ್ಯ ಕಾರನ್ನು ತಿಲಕ​ನಗರ ಠಾಣೆ ಆವರಣದಲ್ಲಿ ನಿಲುಗಡೆ ಮಾಡಲಾಗಿದೆ.

ಕಾರಿನಲ್ಲಿ ಮೊಬೈಲ್​ಗಳು, 23 ಸೀರೆಗಳು, 23 ಬ್ಲೌಸ್ ಪೀಸ್, 16 ಶಾಲು, 150 ಪ್ರೋಗ್ರೆಸ್ ರಿಪೋರ್ಟ್ ಇರುವ ಬುಕ್​ಲೆಟ್ಸ್, ಸ್ಯಾಮ್ಸಂಗ್, ನೋಕಿಯಾ ಆಯಂಡ್ರಾಯ್ಡ್ ಮೊಬೈಲ್​ಗಳನ್ನು ಮತದಾರರಿಗೆ ಹಂಚಲುಕೊಂಡೊಯ್ಯಲಾಗುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.