Thursday, January 23, 2025
ಸುದ್ದಿ

ದಣಿವರಿಯದಾತ ನಮ್ಮೂರ ಶ್ರಮಿಕಾ, ಅಭಿವೃದ್ದಿಯೊಂದೆ ಇದೆ ಮೂಲ ಮಂತ್ರ’ : ‘ಹರೀಶ್ ಪೂಂಜ ನವ ಬೆಳ್ತಂಗಡಿ ಹರಿಕಾರ’ ಕನ್ನಡ ಆಲ್ಬಂ ಸಾಂಗ್ ಬಿಡುಗಡೆ –ಕಹಳೆ ನ್ಯೂಸ್

ಬೆಳ್ತಂಗಡಿ ಶಾಸಕರಾಗಿ ತಾಲೂಕಿನ ಸಮಗ್ರ ಅಭಿವೃದ್ಧಿಗೆ ಶ್ರಮಿಸಿದ ಹರೀಶ್ ಪೂಂಜರ ಬಗೆಗಿನ ‘ಹರೀಶ್ ಪೂಂಜಾ ನವ ಬೆಳ್ತಂಗಡಿ ಹರಿಕಾರ’ ಎಂಬ ಟೈಟಲ್‌ನೊಂದಿಗೆ ಕನ್ನಡ ಆಲ್ಬಂ ಸಾಂಗ್ ನಿನ್ನೆ ಬಿಡುಗಡೆಯಾಗಿದೆ. ಆಲ್ಬಮ್ ಸಾಂಗ್‌ನ್ನು ಶಾಸಕ ಹರೀಶ್ ಪೂಂಜ ಬಿಡುಗಡೆಗೊಳಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

‘ದಣಿವರಿಯದಾತ ನಮ್ಮೂರ ಶ್ರಮಿಕಾ, ಅಭಿವೃದ್ದಿಯೊಂದೆ ಇದೆ ಮೂಲ ಮಂತ್ರ’ ಎಂಬ ಅರ್ಥಪೂರ್ಣ ಹಾಡಿನಲ್ಲಿ ಬಲಿಷ್ಟ ಬೆಳ್ತಂಗಡಿ ನಿರ್ಮಾಣಕ್ಕಾಗಿ ಹರೀಶ್ ಪೂಂಜಾ ಅವರು ಶ್ರಮಿಸಿದ ಬಗೆಯನ್ನ ವಿವರಿಸಲಾಗಿದೆ.
ಎಪಿಕೆ ಕ್ರಿಯೇಷನ್ ಅರ್ಪಿಸುವ, ‘ಹರೀಶ್ ಪೂಂಜ ನವ ಬೆಳ್ತಂಗಡಿ ಹರಿಕಾರ’ ಹಾಡಿಗೆ, ಅಜಿತ್ ಪೂಜಾರಿ ಕನ್ಯಾಡಿ ನಿರ್ದೇಶನ ರಾಗಸಂಯೋಜನೆ, ಸಾಹಿತ್ಯ ಗಾಯನವನ್ನ ಮಾಡಿದ್ದು, ನಿಧೀಶ್ ಶೆಟ್ಟಿ ಕನ್ಯಾಡಿ, ನವೀನ್ ಸುವರ್ಣ ಕನ್ಯಾಡಿ, ಅವಿನಾಶ್ ಶೆಟ್ಟಿ ಕನ್ಯಾಡಿ, ರಾಘವೇಂದ್ರ ಗೌಡ ಹೂಂಕ್ರೊಟ್ಟು, ಅಶೋಕ್ ಬಂಗೇರ ಓಟ್ಲ, ಪವನ್ ಪ್ರಭು ಉಜಿರೆ ಇವರುಗಳ ನಿರ್ಮಾಣದಲ್ಲಿ ಹಾಡು ಮೂಡಿ ಬಂದಿದೆ.

ಆಲ್ಬಮ್ ಸಾಂಗ್ ಬಿಡುಗಡೆ ಸಂದರ್ಭದಲ್ಲಿ ಬಿಜೆಪಿ ಬೆಳ್ತಂಗಡಿ ಮಂಡಲದ ಅಧ್ಯಕ್ಷ ಜಯಂತ್ ಕೋಟ್ಯಾನ್, ಪ್ರಧಾನ ಕಾರ್ಯದರ್ಶಿ ಗಣೇಶ್ ಗೌಡ ನಾವೂರು, ಕರುಣಾಕರ ಸುವರ್ಣ ಉಪ್ಪಿನಂಗಡಿ, ಪ್ರಮುಖರಾದ ಸದಾನಂದ ಉಂಗಿಲಬೈಲು, ಸುಧೀರ್ ಸುವರ್ಣ, ಚಂದ್ರರಾಜ್ ಮೇಲಂತಬೆಟ್ಟು, ಗಾಯಕ ಅಜಿತ್ ಪೂಜಾರಿ ಕನ್ಯಾಡಿ ಮುಂತಾದವರು ಇದ್ದರು.