Thursday, January 23, 2025
ಸುದ್ದಿ

ಎಂಥಾ ಅವಸ್ಥೆ ಮರ‍್ರೆ. ರೈಲು ನಿಲ್ದಾಣಕ್ಕೆ ಸ್ಟೇಷನ್ ಮಾಸ್ಟರ್ ಬೆಕ್ಕು ನೇಮಕ..! ಈ ಬೆಕ್ಕು ಯೂಟ್ಯೂಬ್‌ನಲ್ಲಿ ಸೆಲೆಬ್ರೆಟಿ ಮರ‍್ರೆ..! –ಕಹಳೆ ನ್ಯೂಸ್

ರೈಲು ನಿಲ್ದಾಣಕೆ ಸ್ಟೇಷನ್ ಮಾಸ್ಟರ್ ಆಗಿ ಬೆಕ್ಕೊಂದು ನೇಮಕವಾದ ವಿಶೇಷ ಸುದ್ದಿಯಿದು. ಈ ಸುದ್ದಿ ಬಂದಿರುವುದು ತೈವಾನ್ ಮೆಟ್ರೋ ನಿಲ್ದಾಣದಿಂದ. ಈ ನಿಲ್ದಾಣಕ್ಕೆ ಗೌರವಾನ್ವಿತ ಸ್ಟೇಷನ್ ಮಾಸ್ಟರ್ ಆಗಿ ನೇಮಕಗೊಂಡ ಮಿಕಾನ್ ಬೆಕ್ಕಿನ ಕಥೆ ಇದಾಗಿದೆ. ತೈವಾನ್ ಕಾಹೋಸಿಂಗ್ ಮೆಟ್ರೋದ 15 ನೇ ವರ್ಷದ ಸೇವೆಯನ್ನು ಆಚರಿಸಲು ವಿಶೇಷ ನೇಮಕಾತಿಯನ್ನು ಮಾಡಲಾಗಿದೆ. ಈ ನೇಮಕಾತಿಯಲ್ಲಿ ಮಿಕಾನ್ ಹೀರೋ ಎನಿಸಿಕೊಂಡಿದೆ. ಇದು ಈಗಾಗಲೇ ಯೂಟ್ಯೂಬ್‌ನಲ್ಲಿ ಸೆಲೆಬ್ರಿಟಿಯಾಗಿದೆ. ಇನ್‌ಸ್ಟಾಗ್ರಾಮ್‌ನಲ್ಲಿ 54 ಸಾವಿರ ಅನುಯಾಯಿಗಳನ್ನು ಹೊಂದಿರುವ ಮಿಕಾನ್, ಜಿಂಜರ್ ಟ್ಯಾಬಿ ಕ್ಯಾಟ್ ಸಿಯಾಟೌ ಶುಗರ್ ರಿಫೈನರಿ ಮೆಟ್ರೋ ಸ್ಟೇಷನ್‌ನಲ್ಲಿ ಗೌರವಾನ್ವಿತ ಸ್ಟೇಷನ್ ಮಾಸ್ಟರ್ ಆಗಿ ನೇಮಕಗೊಂಡಿದೆ

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು