Friday, September 20, 2024
ಸುದ್ದಿ

ಜಗತ್ತಿನ ಎಲ್ಲಾ ಕಡೆಗಳಿಂದ ಉದಾತ್ತವಾದ ಯೋಚನೆಗಳು ನಮ್ಮತ್ತ ಹರಿದು ಬರಬೇಕು ; ಪ್ರಗತಿ ಸ್ಟಡಿ ಸೆಂಟರ್‍ನ ವಿದ್ಯಾ ಗಣಪತಿ ಉತ್ಸವದಲ್ಲಿ ಶ್ರೀಶ ಕುಮಾರ್ ಅಭಿಮತ – ಕಹಳೆ ನ್ಯೂಸ್

ಪುತ್ತೂರು : “ಜಗತ್ತಿನ ಎಲ್ಲಾ ಕಡೆಗಳಿಂದ ಉದಾತ್ತವಾದ ಯೋಚನೆಗಳು ನಮ್ಮತ್ತ ಹರಿದು ಬರಬೇಕು. ನಮ್ಮ ಚಿಂತನೆಗಳು ಒಳಿತಿನ ಭಾವನೆಗಳನ್ನು ಎತ್ತಿ ಹಿಡಿಯಬೇಕು. ಹಿಂದೂ ದೇವರ ಕೈಯಲ್ಲಿ ಆಯುಧಗಳಿವೆಯಂದರೆ ಅದು ದುಷ್ಟರ ಮೇಲೆ ಪ್ರಯೋಗವಾಗುತ್ತದೆ ಹೊರತು ಸಜ್ಜನರ ಮೇಲಲ್ಲ. ಜೀವನದಲ್ಲಿ ಪ್ರಗತಿ ಕಾಣಬೇಕಾದರೆ ನಮ್ಮ ನಡೆ ಸಜ್ಜನರ ಜೊತೆಯಿರಬೇಕು. ಯಾರು ದಾರಿ ತಪ್ಪಿ ಮುಂದುವರಿತನೋ ಭಗವಂತನ ಇರುವಿಕೆ ಅವನನ್ನು ಶಿಕ್ಷಿಸುತ್ತದೆ. ಧರ್ಮ, ಅರ್ಥ, ಕಾಮಗಳನ್ನು ಗೆದ್ದಾಗ ಮಾತ್ರ ಭಗವಂತ ಮೋದಕಹಸ್ತನಾಗುತ್ತದೆ”. ವಿನಾಯಕನ ಅಂಗಾಂಗಗಳ ವೈಶಿಷ್ಟ್ಯಗಳನ್ನು ಅರ್ಥಪೂರ್ಣವಾಗಿ ವಿವರಿಸುತ್ತಾ ಪ್ರಗತಿ ಸ್ಟಡಿ ಸೆಂಟರ್‍ನಲ್ಲಿ ನಡೆದ ವಿದ್ಯಾ ಗಣಪತಿ ಉತ್ಸವದ ಸಭಾ ಕಾರ್ಯಕ್ರಮದಲ್ಲಿ ಧಾರ್ಮಿಕ ಭಾಷಣವನ್ನುದ್ದೇಶಿಸಿ ಮಾತಾನಾಡುತ್ತಿದ್ದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಪುತ್ತೂರು ಮಹಿಳಾ ಕಾಲೇಜು ಕನ್ನಡ ವಿಭಾಗದ ಮುಖ್ಯಸ್ಥ ಡಾ. ನರೇಂದ್ರ ರೈ ದೇರ್ಲ ಮಾತನಾಡಿ, “ಶಿಕ್ಷಣದಲ್ಲಿ ಶಿಸ್ತಿರಬೇಕು. ವೇಷಭೂಷಣವಲ್ಲ, ಆತನ ಇರುವಿಕೆ ಪೂರ್ಣ ಪ್ರಮಾಣದ ಶಿಕ್ಷಕನನ್ನು ತೋರುತ್ತದೆ” ಅವರು ಈ ಸಂದರ್ಭದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳನ್ನು ಸ್ಮರಿಸುತ್ತಾ, “ಭಗವಂತನನ್ನು ಮೊದಲು ನಿನ್ನಲ್ಲಿ ಕಾಣು ಆಗ ಭಗವಂತ ನೀನಿದ್ದಲ್ಲೇ ಗೋಚರಿಸುತ್ತಾನೆ” ಎಂದರು.

ಜಾಹೀರಾತು
ಜಾಹೀರಾತು
ಜಾಹೀರಾತು


ಉದ್ಘಾಟಕರಾಗಿ ಆಗಮಿಸಿದ್ದ ಡಾ. ಭಾಸ್ಕರಾನಂದ್ ಕುಮಾರ್ Former Professor, Dept. of Orthopaedic Surgeon Hand surgical services, Kasturba Medical College and  Hospital, Manipal ಕಾರ್ಯಕ್ರಮದಲ್ಲಿ ದೀಪ ಬೆಳಗಿಸಿ, ದಶಮಾನೋತ್ಸವದ ಸ್ಮರಣ ಸಂಚಿಕೆ “ದಶಪ್ರಣತಿ”ಯನ್ನು ವಿಶೇಷ ರೀತಿಯಲ್ಲಿ ಬಿಡುಗಡೆಗೊಳಿಸಿ, ಮಾತನಾಡಿ, “ದುವ್ರ್ಯಸನಗಳು ಸೇವಿಸಿಯೇ ಅದರ ಕೆಡುಕುಗಳನ್ನು ಅರಿತುಕೊಳ್ಳಬೇಕಾಗಿಲ್ಲ. ದೇವರು ಅರ್ಥೈಸಿಕೊಳ್ಳುವಂತಹ ಜ್ಞಾನವನ್ನು ನಮಗೆ ನೀಡಿದ್ದಾರೆ. ಹಾಗಾಗಿ ವಿಷಪೂರಿತ ಆಹಾರ ಮತ್ತು ವಿಷಯಗಳನ್ನು ತ್ಯಜಿಸಬೇಕಾಗಿದೆ ಉತ್ತಮ ಸ್ಮøತಿಯನ್ನು ಬೆಳೆಸಿಕೊಳ್ಳಬೇಕಾಗಿದೆ” ಎಂದು ನುಡಿದರು.

ಜಾಹೀರಾತು

ಅತಿಥಿಗಳಾಗಿ ಭಾಗವಹಿಸಿದ್ದ ಸರಕಾರಿ ಪದವಿ ಪೂರ್ವ ಕಾಲೇಜು ಸವಣೂರಿನ ಆಂಗ್ಲಭಾಷಾ ಉಪನ್ಯಾಸಕರಾದ ಬಿ. ವಿ. ಸೂರ್ಯನಾರಾಯಣ ಮಾತನಾಡಿ, “ಸಾಧನೆಗೆ ಮತ್ತು ಗೌರವಕ್ಕೆ ಒಂದು ಕಾಲ ಬಂದೇ ಬರುತ್ತದೆ. ಕಾಯುವ ತಾಳ್ಮೆ ಇರಬೇಕು ಜೊತೆಗೆ ನಿರೀಕ್ಷೆಯಿಲ್ಲದ ಪ್ರಯತ್ನ ಮಾಡಿ. ಫಲ ಸಿಕ್ಕೇ ಸಿಗುತ್ತದೆ. ಹಸಿವಾದರೆ ತಡೆದುಕೊಳ್ಳಿ. ಯಾರೊಂದಿಗೂ ಬೇಡಬೇಡಿ, ಸಾಯುವ ಪರಿಸ್ಥಿತಿ ಬಂದರೆ ಮಾತ್ರ ಅದಕ್ಕೆ ಮುಂದಾಗಿ. ಆದರೆ ಶಿಕ್ಷಣ ಮೊಟಕುಗೊಳ್ಳುತ್ತದೆಯೆಂದರೆ ತಕ್ಷಣ ಯಾರೊಂದಿಗಾದರೂ ಬೇಡಿಯಾದರೂ ಪಡೆದುಕೊಳ್ಳಿ. ಶಿಕ್ಷಣ ಮಾತ್ರ ಭವಿಷ್ಯ, ಶಿಕ್ಷಣ ಮಾತ್ರ ಬಾಳು, ಶಿಕ್ಷಣ ಮಾತ್ರ ಶ್ರೇಯಸ್ಸು ಶಿಕ್ಷಣ ಮಾತ್ರ ಉಳಿದೆಲ್ಲ ಸಂಪತ್ತಿಗಿಂತ ಶ್ರೇಷ್ಠವಾದ ಸಂಪತ್ತು” ಎಂದು ನುಡಿದರು.

ಮತ್ತೋರ್ವ ಅತಿಥಿಯಾಗಿದ್ದ ವಿವೇಕಾನಂದ ಇಂಜಿನಿಯರ್ ಕಾಲೇಜು ಮೆಕ್ಯಾನಿಕಲ್ ವಿಭಾಗದ ಪ್ರಾದ್ಯಾಪಕರಾದ ಪ್ರೊ. ಸುದರ್ಶನ್ ಎಂ. ಎಲ್. ಮಾತನಾಡಿ, “ಅವಕಾಶ ಎಲ್ಲರಿಗೂ ಸಿಗುತ್ತದೆ. ಅದಕ್ಕೆ ತಕ್ಕಂತೆ ಅನ್ವೇಷಣೆ ನಡೆಸಬೇಕು. ಆದರೆ ಅದಕ್ಕೆ ಬೇಕಾದ ಅನುಕೂಲತೆಗಳನ್ನು ನಾವೇ ಸೃಷ್ಟಿಸಿಕೊಳ್ಳಬೇಕು ದೂರದೃಷ್ಟಿಯನ್ನು ಇಟ್ಟುಕೊಂಡಾಗ ಮಾತ್ರ ಅವಕಾಶ ಸದುಪಯೋಗಗೊಳ್ಳಲು ಸಾಧ್ಯ ಎಂದು ಹೇಳಿದರು.

ಇನ್ನೋರ್ವ ಅತಿಥಿಯಾಗಿ ಆಗಮಿಸಿದ್ದ ವಿವೇಕಾನಂದ ಬಿ.ಎಡ್ ಕಾಲೇಜಿನ ಉಪನ್ಯಾಸಕರು ಮತ್ತು ಕಲಾವಿದರಾದ ಡಾ. ಶೋಭಿತಾ ಸತೀಶ್ ಸಂಸ್ಥೆಯ ದೂರದೃಷ್ಟಿತ್ವಕ್ಕೆ ಶುಭ ಹಾರೈಸಿದರು.

ಇನ್ನೋರ್ವ ಅತಿಥಿಯಾಗಿ ಆಗಮಿಸಿದ್ದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಸಂಜಯನಗರದ ಶಿಕ್ಷಕರಾದ ಹಾಗೂ ತುಳು ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕøತರಾದ ರಮೇಶ್ ಉಳಯ ಮಾತಾನಾಡಿ, “ಒಳ್ಳೆಯದು ಕೆಟ್ಟದು ಅನ್ನುವಂತಹುದು ನಮ್ಮಲ್ಲೇ ಇದೆ. ‘ನಾನು’ ಬದಲಾಗುವುದರಿಂದ ಜಗತ್ತಿನ ಒಬ್ಬ ಮೂರ್ಖ ಬದಲಾಗುತ್ತಾನೆ. ಒಳ್ಳೆಯದನ್ನು ಆರಿಸಿಕೊಳ್ಳುವ ಯತ್ನವನ್ನು ಮಾಡೋಣ. ಒಳ್ಳೆಯ ಸಮಾಜವನ್ನು ರೂಪಿಸುವ, ಒಳ್ಳೆಯ ಸಮಾಜzಲ್ಲಿÀ ಬಾಳುವ, ಬದುಕುವ ಸಂಕಲ್ಪವನ್ನು ಕೈಗೊಳ್ಳೋಣ” ಎಂದು ನುಡಿದರು.

ಇನ್ನೋರ್ವ ಅತಿಥಿಯಾಗಿ ‘ಸ್ಟಾರ್ ಸುವರ್ಣ ಡ್ಯಾನ್ಸ್ ಡ್ಯಾನ್ಸ್ ಜೂನಿಯರ್ ಸೀಸನ್-2’ ರನ್ನರ್ ಅಪ್ ಮತ್ತು ‘ಭರ್ಜರಿ ಕಾಮಿಡಿ’ ಖ್ಯಾತಿಯ ಬಾಲಪ್ರತಿಭೆ ಕು. ದೀಕ್ಷಾ ರೈ ಮಾತಾನಾಡಿ, “ಎಲ್ಲಾ ಮಕ್ಕಳಿಗೂ ಪ್ರತಿಭೆ ಇರುತ್ತದೆ. ನಾವು ಅದಕ್ಕೆ ಸಮಯ ನೀಡಿ ಅಭ್ಯಾಸ ನಡೆಸಿದರೆ ಗುರಿ ತಲುಪಲು ಸಾಧ್ಯವಾಗುತ್ತದೆ. ಎಂದು ನುಡಿದರು.

ಮತ್ತೋರ್ವ ಅತಿಥಿ ಬೊಳ್ವಾರಿನ ಪ್ರಗತಿ ಸ್ಪೆಷಾಲಿಟಿ ಆಸ್ಪತ್ರೆ ಮಹಿಳಾ ವೈದ್ಯರು ಹಾಗೂ ಆಯುರ್ವೇದ ತಜ್ಞರಾದ ಡಾ. ಸುಧಾ ರಾವ್ ಶುಭ ಹಾರೈಸಿದರು. ಸಂಸ್ಥೆಯ ಸಂಚಾಲಕರಾದ ಪಿ. ವಿ. ಗೋಕುಲ್‍ನಾಥ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಪ್ರಾಂಶುಪಾಲರಾದ ಹೇಮಲತಾ ಗೋಕುಲ್ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಡಾ. ಭಾಸ್ಕರಾನಂದ್ ಕುಮಾರ್ Former Professor, Dept. of Orthopaedic Surgeon Hand surgical services, Kasturba Medical College and  Hospital, Manipal ಸ್ಟಾರ್ ಸುವರ್ಣ ಡ್ಯಾನ್ಸ್ ಡ್ಯಾನ್ಸ್ ಜೂನಿಯರ್ ಸೀಸನ್-2 ರನ್ನರ್ ಅಪ್ ಮತ್ತು ಭರ್ಜರಿ ಕಾಮಿಡಿ ಖ್ಯಾತಿಯ ಬಾಲಪ್ರತಿಭೆ ಕು. ದೀಕ್ಷಾ ರೈ ಹಾಗೂ ಅತ್ಯುತ್ತಮ ಪೋಷಕರನ್ನು ಅಭಿನಂದಿಸಿ, ಶಾಲು ಹೊದೆಸಿ ಸನ್ಮಾನಿಸಲಾಯಿತು. ಹಾಗೂ ದಶಪ್ರಣತಿಗೆ ಸಹಕರಿಸಿದವರನ್ನು ಮತ್ತು ಸಂಚಿಕೆಗೆ ಲೇಖನ ನೀಡಿದವರನ್ನು ಗುರುತಿಸಿ ಅಭಿನಂದಿಸಲಾಯಿತು,
2017-18ನೇ ಸಾಲಿನಲ್ಲಿ ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣಹೊಂದಿದ 6 ವಿದ್ಯಾರ್ಥಿಗಳಿಗೆ ಶಾಲು ಹೊದೆಸಿ ಸನ್ಮಾನಿಸಿ, ಹತ್ತು ಸಾವಿರ ನಗದು ಚೆಕ್ ನೀಡಿ ಮಾಜಿ ಪ್ರಾಧ್ಯಾಪಕ ಡಾ. ಭಾಸ್ಕರಾನಂದ್ ಕುಮಾರ್ ಅಭಿನಂದಿಸಿದರು. ಮದ್ಯಾಹ್ನದ ಅನ್ನಸಂತರ್ಪಣೆ ನಂತರ ಕಿರಣ್ ಕುಮಾರ್ ಗಾನಸಿರಿ ನೇತೃತ್ವದಲ್ಲಿ ಭಕ್ತಿ-ಭಾವ-ಗಾನ ವೈಭವ ಸಾಂಸ್ಕøತಿಕ ಕಾರ್ಯಕ್ರಮ ನಡೆಯಿತು.

ನಂತರ ಗಣಪತಿ ಮೂರ್ತಿಯು ಕೇರಳದ ವಿಶೇಷ ಚೆಂಡೆ, ಮಂಗಳವಾದ್ಯ ಮತ್ತು ಭಜನೆ ತಂಡದೊಂದಿಗೆ ಪುತ್ತೂರು ಧರ್ಮಸ್ಥಳ ಬಿಲ್ಡಿಂಗ್‍ನಿಂದ ಮುಖ್ಯರಸ್ತೆಯಲ್ಲಿ ಬಸ್ಸು ನಿಲ್ದಾಣವಾಗಿ ಸುದ್ದಿ ಬಿಡುಗಡೆ ಕಛೇರಿಯಾಗಿ ಮಹಾಲಿಂಗೇಶ್ವರ ದೇವಸ್ಥಾನದ ರಥಬೀದಿಯಲ್ಲಿ ಸಾಗಿ ದೇವಸ್ಥಾನದ ಮಾರುಗದ್ದೆಯಲ್ಲಿ ಇರುವ ಜೋಡು ಕರೆಯಲ್ಲಿ ವಿಸರ್ಜನೆಗೊಂಡಿತು.

ಸಭಾ ಕಾರ್ಯಕ್ರಮವನ್ನು ಉಪನ್ಯಾಸಕಿ ಗೀತಾ ಕೊಂಕೋಡಿ ಸ್ವಾಗತಿಸಿ, ಉಪನ್ಯಾಸಕಿ ವಿಜಯಶ್ರೀ ಪ್ರಾರ್ಥಿಸಿದರು. ಉಪನ್ಯಾಸಕಿ ಅಶ್ವಿನಿ ಶೆಟ್ಟಿ ವಂದಿಸಿದರು. ತುಳು ಚಿತ್ರರಂಗ ಚಲನಚಿತ್ರ ನಟ ಅನುರಾಗ್ ಆರ್ ಬಂಗೇರ ನಿರೂಪಿಸಿದರು. ಉಪನ್ಯಾಸಕರುಗಳು ಸಹಕರಿಸಿದರು.