Friday, January 24, 2025
ಸುದ್ದಿ

ಹೇರ್ ಕಟ್ಟಿಂಗ್ ಬಗ್ಗೆ ಅಸಮಧಾನ; ಅಪರ‍್ಟ್ಮೆಂಟ್‌ನಿಂದ ಜಿಗಿದು ಪ್ರಾಣ ಬಿಟ್ಟ ಬಾಲಕ..!- ಕಹಳೆ ನ್ಯೂಸ್

ಇತ್ತೀಚಿನ ದಿನಗಳಲ್ಲಿ ಸಣ್ಣ ವಿಚಾರಗಳಿಗೆ ಮನನೊಂದು ಆತ್ಮಹತ್ಯೆ ಮಾಡಿಕೊಳ್ಳುವವರ ಸಂಖ್ಯೆ ಹೆಚ್ಚಾಗ್ತಾ ಇದೆ. ಬಾಲಕನೋರ್ವ ಹೇರ್‌ಕಟ್ ವಿಷಯವಾಗಿ ಬೇಸರಗೊಂಡು ಪ್ರಾಣ ಕಳೆದುಕೊಂಡಿದ್ದಾನೆ. ಹೌದು..13 ವರ್ಷದ 8ನೇ ತರಗತಿ ವಿದ್ಯಾರ್ಥಿ ಅಪಾರ್ಟ್ಮೆಂಟ್‌ನ 16ನೇ ಮಹಡಿಯಿಂದ ಕೆಳಗ್ಗೆ ಬಿದ್ದು ಆತ್ಯಹತ್ಯೆ ಮಾಡಿಕೊಂಡಿರುವ ಘಟನೆ ಮಹಾರಾಷ್ಟ್ರದ ಬಾಯಂದರ್‌ನಲ್ಲಿ ನಿನ್ನೆ ನಡೆದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಹೇರ್ ಸಲೂನ್‌ಗೆ ಬಾಲಕನನ್ನು ಕರೆದುಕೊಂಡು ಹೋಗಿ ಹೇರ್ ಕಟ್ಟಿಂಗ್ ಮಾಡಿಸಲಾಗಿತ್ತು. ಆದರೆ ಈ ಹೇರ್ ಸ್ಟೈಲ್ ಬಾಲಕನಿಗೆ ಇಷ್ಟವಾಗಲಿಲ್ಲ. ತನ್ನ ಚಿಕ್ಕ ಕೂದಲಿನಿಂದ ಅಸಮಾಧಾನಗೊಂಡಿದ್ದನು. ಮನೊಂದ ಬಾಲಕ ಅಪಾರ್ಟ್ಮೆಂಟ್‌ನ 16ನೇ ಮಹಡಿಯಲ್ಲಿದ್ದ ತನ್ನ ಮನೆಯ ಸ್ನಾನದ ಕೊಠಡಿಯ ಕಿಟಕಿಯಿಂದ ಕೆಳಕ್ಕೆ ಹಾರಿದ್ದಾನೆ.