Friday, January 24, 2025
ಸುದ್ದಿ

ಕಾರ್ಯಾಪಾಡಿ ಒಕ್ಕೂಟದಲ್ಲಿ ನಡೆಯುತ್ತಿರುವ ಆರಾಧನಾ ಜ್ಞಾನ ವಿಕಾಸ ಕೇಂದ್ರಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳದ ವತಿಯಿಂದ ‘ಪ್ರಬುದ್ಧ ಜ್ಞಾನ ವಿಕಾಸ ಕೇಂದ್ರ’ ಪ್ರಮಾಣ ಪತ್ರ ನೀಡಿ ಗೌರವ – ಕಹಳೆ ನ್ಯೂಸ್

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಬಿಸಿ ಟ್ರಸ್ಟ್(ರಿ) ಗುರುವಾಯನಕೆರೆ ಇದರ ವತಿಯಿಂದ ಕಾರ್ಯಾಪಾಡಿ ಒಕ್ಕೂಟದಲ್ಲಿ ನಡೆಯುತ್ತಿರುವ ಆರಾಧನಾ ಜ್ಞಾನ ವಿಕಾಸ ಕೇಂದ್ರಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳದ ವತಿಯಿಂದ ಪ್ರಬುದ್ಧ ಜ್ಞಾನ ವಿಕಾಸ ಕೇಂದ್ರಕ್ಕೆ ಪ್ರಮಾಣ ಪತ್ರ ನೀಡಿ ವಿಶೇಷವಾಗಿ ಗೌರವಿಸಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಏ.07ರಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಬಿಸಿ ಟ್ರಸ್ಟ್(ರಿ) ಗುರುವಾಯನಕೆರೆ ಇದರ ವತಿಯಿಂದ ಕಾರ್ಯಾಪಾಡಿ ಒಕ್ಕೂಟದಲ್ಲಿ ಆರಂಭಗೊಂಡ ಆರಾಧನಾ ಜ್ಞಾನ ವಿಕಾಸ ಕೇಂದ್ರವು ಮಾತೃ ಶ್ರೀ ಹೇಮಾವತಿ ಡಿ ಹೆಗಡ್ಡೆಯವರ ಮಾರ್ಗದರ್ಶನದಲ್ಲಿ ಕಳೆದ 23 ವರ್ಷಗಳಿಂದ ನಡೆದು ಬಂದಿದೆ. ಕೇಂದ್ರದ ಸದಸ್ಯರು ಮಹಿಳಾ ಸಬಲೀಕರಣ, ಕೌಟುಂಬಿಕ ಸಾಮರಸ್ಯ, ವಯುಕ್ತಿಕ ಸ್ವಚ್ಛತೆ ಪೌಷ್ಟಿಕ ಆಹಾರ ಆರ್ಥಿಕ ಸಬಲೀಕರಣ ಕೌಶಲ್ಯ ಅಭಿವೃದ್ಧಿ ಮುಂತಾದ ಹಲವು ವಿಚಾರಗಳ ಬಗ್ಗೆ ಮಾಹಿತಿ ಪಡೆದುಕೊಂಡು ಉತ್ತಮ ರೀತಿಯಲ್ಲಿ ಅಭಿವೃದ್ಧಿ ಹೊಂದಿದ್ದಾರೆ.

ಶ್ರೀ ಕ್ಷೇತ್ರ ಧರ್ಮಸ್ಥಳದ ವತಿಯಿಂದ ಆರಾಧನಾ ಜ್ಞಾನ ವಿಕಾಸ ಕೇಂದ್ರವನ್ನ ಪ್ರಬುದ್ಧ ಜ್ಞಾನ ವಿಕಾಸ ಕೇಂದ್ರ ಎಂದು ಗುರುತಿಸಿ ಮಾನ್ಯ ಯೋಜನಾಧಿಕಾರಿಯವರಾದ ಯಶವಂತ್ ಪ್ರಮಾಣ ಪತ್ರ ನೀಡಿದರು. ಸೇವಾಪ್ರತಿನಿಧಿ ಸರೋಜ ಇವರು ಕಾರ್ಯಕ್ರಮ ನಿರೂಪಿಸಿದರು ಕೇಂದ್ರದ ಸದಸ್ಯರಾದ ಪ್ರಸನ್ನ ಭಟ್ ಧನ್ಯವಾದ ನೀಡಿದರು.