Friday, January 24, 2025
ಸುದ್ದಿ

Dr ನಾನಾ ಸಾಹೇಬ್ ಧರ್ಮಧಿಕಾರಿ ಪ್ರತಿಷ್ಠನಾದ ಶ್ರೀ ಸದಸ್ಯರಿಂದ ಜಲ ಪುನರ್ ಭರಣ ಮಾಹಿತಿ ಕಾರ್ಯಕ್ರಮ.-ಕಹಳೆ ನ್ಯೂಸ್

ವಲಯ ಪರಿಶೀಲನಾ ಸಭೆಯನ್ನು ಇನ್ನಂಜೆ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ನಡೆಸಲಾಯಿತು ಕಾರ್ಯಾಗಾರಲ್ಲಿ ಮೇಲ್ಬಾವಣಿಯ ಸೌರಶಕ್ತಿ, ಮಳೆ ನೀರು ಕೊಯ್ಲು ವರ್ಮಿ ಕಾಂಪೋಸ್ಟಿಂಗ್ ಮತ್ತು ತ್ಯಾಜ್ಯ ನಿರ್ವಹಣೆ ಬಗ್ಗೆ ಮಾಹಿತಿಯನ್ನು ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಗಳಾದ ಶ್ರೀಯುತ ಸಂತೋಷ್ ಶೆಟ್ಟಿಗಾರ್ (ಡಾ. ನಾನಾ ಸಾಹೇಬ್ ಧರ್ಮಾಧಿಕಾರಿ ಪ್ರತಿಷ್ಠಾನದ ಸದಸ್ಯರು ಮತ್ತು ರೋಟರಿ ಸದಸ್ಯರಾದ ಚಂದ್ರಶೇಖರ್ ಸಾಲಿಯನ್ ಇವರುಗಳು ಮಾಹಿತಿಯನ್ನು ನೀಡುತ್ತಾ ಸದ್ಯ ನಾವು ಎದುರಿಸುತ್ತಿರ್ವ ತಾಪಮಾನ ಮುಂದಿನ 50 ವರ್ಷ ದಲ್ಲಿ ಆಗಬಹುದಾದ ಪರಿಣಾಮ ಈ ಬಗ್ಗೆ ಜಾಗೃತರಾಗಲೇ ಬೇಕು ಈಗಾಗಲೇ ಶೆ 40 ರಷ್ಟು ನೆಲ ಜಲ ದ ಜೀವ ಸಂಕುಲ ನಾಶವಾಗಿದೆ ಪೃಕ್ರತಿ ಯಿಂದ ಮನುಷ್ಯ ಮನುಷ್ಯ ನಿಂದ ಪೃಕ್ರತಿ ಅಲ್ಲ , ತನ್ನ ಬದುಕಿನ ಆದುನಿಕತೆ ಮಾಡುತ್ತ ಪೃಕ್ರತಿ ಮರೆತು ಬಿಟ್ಟ ಅಲಸ್ಯ ಮತ್ತು ಐಷ ರಾಮ ಮನುಷ್ಯ ನಿಗೆ ಮುಳುವಾಗಿದೆ ಪುರಾ ಜೀವ ಸಂಕುಲ ಪೃಕ್ರತಿಗೆ ಪೂರಕವಾಗಿ ಬದುಕಿದರೆ ಮನುಷ್ಯ ಎಲ್ಲಾ ವನ್ನು ನಾಶ ಮಾಡುತ್ತಿದ್ದಾನೆ ಮೊದಲು ಮಾನವರಾಗಿ ಬದುಕಿ ನಮ್ಮ ಪೂರ್ವಜರ ತ್ಯಾಗದ ಆದರ್ಶ ಪಡೆಯೋಣ ಈ ರೀತಿಯ ಜಾಗೃತಿ ಕಾರ್ಯಕ್ರಮ ರೋಟರಿ ಮಾಡುತ್ತಿರುದು ಅಭಿನಂದನಿಯ ಎಂದರು

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಅಧ್ಯಕ್ಷರಾದ ಗ್ಲಾಡಸನ್ ಕುಂದರ್ ರವರು ಸ್ವಾಗತಿಸಿ ಸಭೆಯನ್ನು ವಲಯ ಮಂಡಲಿಗೆ ಹಸ್ತಾಂತರಿಸಿದರು ನಂತರ ಸಹಾಯಕ ಗವರ್ನರ್ ವಲಯ 5 Rtn dr phf ಶಶಿಕಾಂತ ಕರಿಕ ಇವರು ಕಾರ್ಯಕ್ರಮದ ಉದ್ದೇಶವನ್ನು ವಿವರಿಸಿದರು, ಸಭೆಯು ಡಾಕ್ಟರ್ ಚೇತನ ಶಶಿಕಾಂತ್ ಇವರ ಪ್ರಾರ್ಥನೆ ಮೂಲಕ ಪ್ರಾರಂಭವಾಯಿತು ಉಪಸ್ಥಿತ ನಿಯೋಜಿತ ಸಹಾಯಕ ಗವರ್ನರ್ Rtn phf ನಿಯೋಜಿತ ಸಹಾಯಕ ಗವರ್ನರ್ Rtn phf ಶೈಲೇಂದ್ರ ರಾವ್,Rtn ಹರಿಪ್ರಕಾಶ್ ಶೆಟ್ಟಿ, Rtn ಸುವರ್ಣ ನಾಯಕ್, Rtn ಬಾಲಕೃಷ್ಣ ಆಚಾರ್ಯ, ವಲಯದ ಹೆಚ್ಚಿನ ರೋಟರಿಯ ಅಧ್ಯಕ್ಷರುಗಳು, ರೋಟರಿ ಶಂಕರಪುರದ ಕಾರ್ಯದರ್ಶಿ ಸಿಲ್ವಿಯಾ ಕಸ್ಟಲಿನೊ, ಉಪಸ್ಥಿತರಿದ್ದರು.