Friday, September 20, 2024
ರಾಜಕೀಯ

ಪ್ರತಾಪ್ ಸಿಂಹ ಅಪ್ಪನಿಗೆ ಹುಟ್ಟಿದ ಮಗನಾಗಿದ್ರೆ ನನ್ನ ಮುಂದೆ ಬರಲಿ ; ಎಂ.ಬಿ.ದೇವಯ್ಯ ಗುಡುಗು – ಕಹಳೆ ನ್ಯೂಸ್

ಮಡಿಕೇರಿ: ಸಂಸದ ಪ್ರತಾಪ್ ಸಿಂಹ ಅಪ್ಪನಿಗೆ ಹುಟ್ಟಿದ ಮಗನಾಗಿದ್ರೆ ನನ್ನ ಮುಂದೆ ಬರಲಿ. ಆವಾಗ ಈ ಕೊಡಗಿನ ದೇವಯ್ಯ ಯಾರೆಂದು ತೋರಿಸುತ್ತೀನಿ ಎಂದು ಬಿಜೆಪಿ ಮುಖಂಡ ಎಂ.ಬಿ.ದೇವಯ್ಯ ಗುಡುಗಿದ್ದಾರೆ.

ಕೊಡಗಿನಲ್ಲಿ ನಡೆದ ಘಟನೆ ಬಗ್ಗೆ ಪ್ರತಾಪ್ ಸಿಂಹ ಫೇಸ್‍ಬುಕ್ ಲೈವ್ ನಲ್ಲಿ ಸ್ಪಷ್ಟನೆ ನೀಡಿದ್ದರು. ಈ ಕುರಿತು ಪ್ರತಿಕ್ರಿಯಿಸಿರುವ ದೇವಯ್ಯ, ತದಕುತ್ತೇನೆ ಅಂದ್ರೆ ನಾನೇನು ಊರು ಬಿಟ್ಟು ಹೋಗುವ ವ್ಯಕ್ತಿಯಲ್ಲ. ನಾನು ಗಾಂಧಿವಾದಿ ಅಲ್ಲ. ಸುಭಾಸ್ ಚಂದ್ರ, ಚಂದ್ರಶೇಖರ್ ಆಜಾದ್ ಅಂತಹ ನಾಯಕರ ತತ್ವಗಳನ್ನು ಅಳವಡಿಸಿಕೊಂಡ ವ್ಯಕ್ತಿ. ಹೊಡೆದವನಿಗೆ ಇನ್ನೊಂದು ಕೆನ್ನೆ ತೋರಿಸುವಂತ ವ್ಯಕ್ತಿ ನಾನಲ್ಲ. ತಾಕತ್ತಿದ್ದರೆ ಬಂದು ದೇವಯ್ಯನನ್ನು ಮುಟ್ಟಿ ನೋಡಲಿ. ಆವಾಗ ದೇವಯ್ಯ ಯಾರು? ಕೊಡಗಿನ ಜನ ಎಂತಹವರು ಎಂಬುದನ್ನು ತೋರಿಸುತ್ತೇವೆ ಎಂದು ಸವಾಲು ಹಾಕಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು

ನನಗೆ 68 ವಯಸ್ಸು, ಅವನಿಗೆ 35 ವರ್ಷ ಇರಬಹುದು. ಪ್ರತಾಪ್ ಸಿಂಹ ನನ್ನ ಮಗಳು ವಯಸ್ಸಿನವನು. ನಮ್ಮ ಪಕ್ಷದ ಕಿರಿಯ ಸಂಸದ ತಪ್ಪು ಹೆಜ್ಜೆ ಇಡೋತ್ತಿರುವಾಗ ತಿಳಿ ಹೇಳುವ ಜವಾಬ್ದಾರಿ ನನ್ನ ಮೇಲಿದೆ. ಅಂದು ಮಾತನಾಡುವಾಗ ಭಾವೋದ್ವೇಕ ಆಗಿದ್ದು ನಿಜ. ಅಂದೇ ನಾನು ಕ್ಷಮೆ ಕೇಳಿದ್ದೇನೆ. ಕೆನ್ನೆಗೆ ಬಾರಿಸುತ್ತೇನೆ ಎಂದು ಹೇಳುವ ಅವರ ನಾಲಗೆ ಆ ವ್ಯಕ್ತಿಯ ಕುಲವನ್ನು ಹೇಳುತ್ತದೆ ಎಂದು ಕಿಡಿ ಕಾರಿದ್ರು.

ನಾನು ಹತ್ತಾರು ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸಿದ್ದೇನೆ. ಇಂದು ಸಹ ಹತ್ತಾರು ಸಂಸ್ಥೆಗಳನ್ನು ನಡೆಸಿಕೊಂಡು ಹೋಗುವ ಸಾಮರ್ಥ್ಯವನ್ನು ಹೊಂದಿದ್ದೇನೆ. ದಾರಿಯಲ್ಲಿ ಹೋಗುವ ಬಿಕಾರಿ ಹಾಗೆ ಮಾತನಾಡಲು ಹೋಗಲ್ಲ. ಕೆಲಸದಲ್ಲಿ ಅನುಭವ ಹೊಂದಿದ್ದರಿಂದ ಕೆಲವು ಸಲಹೆಗಳನ್ನು ನೀಡಿದ್ದೇನೆ. ಅಂದು ನಾನು ಪ್ರತಾಪ್ ಸಿಂಹ ವಿರುದ್ಧ ಯಾವುದೇ ಅಸಂಸದೀಯ ಪದ ಬಳಕೆ ಮಾಡಿಲ್ಲ ಎಂದು ಸ್ಪಷ್ಟನೆ ನೀಡಿದರು.

ಅಂದು ನಡೆದಿದ್ದು ಏನು? : 
ಗುರುವಾರ ಕೇಂದ್ರದ ಪರಿಶೀಲನೆ ತಂಡದೊಂದಿಗೆ ಸಂಸದ ಪ್ರತಾಪ್ ಸಿಂಹರವರು ಮಡಿಕೇರಿ ತಾಲೂಕಿನ ಹೆಬ್ಬೆಟ್ಟಗೇರಿ ಗ್ರಾಮಕ್ಕೆ ಬಂದಿದ್ದರು. ಈ ವೇಳೆ ಕೇಂದ್ರ ತಂಡಕ್ಕೆ ಭೂ ಪರಿವರ್ತನೆಯ ಬಗ್ಗೆ ಮಾಹಿತಿ ನೀಡುತ್ತಿದ್ದ ಸಂಸದರ ಮೇಲೆ ಸ್ಥಳೀಯ ಬಿಜೆಪಿ ಮುಖಂಡ ಎಂ.ಬಿ.ದೇವಯ್ಯ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದರು. “ನೀವು ಕೇಂದ್ರದ ಪರಿಶೀಲನೆ ತಂಡಗಳಿಗೆ ತಪ್ಪು ಮಾಹಿತಿ ನೀಡುತ್ತಿದ್ದೀರಿ, ನಿಮ್ಮನ್ನು ಸಂಸದರನ್ನಾಗಿ ಮಾಡಿದ್ದು ನಮ್ಮ ದುರಂತ. ತಪ್ಪು ಮಾಹಿತಿ ನೀಡಿ ಜನರನ್ನು ಒಕ್ಕಲೆಬ್ಬಿಸಲು ಯತ್ನಿಸುತ್ತಿದ್ದೀರಿ. ಬೆಂದ ಗಾಯಕ್ಕೆ ಉಪ್ಪು ನೀರು ಸುರಿಯುತ್ತಿದ್ದೀರಿ” ಎಂದು ಬಹಿರಂಗವಾಗಿ ಆಕ್ರೋಶ ಹೊರಹಾಕಿದ್ದರು.