Monday, January 27, 2025
ಸುದ್ದಿ

ಕಾಡಾನೆ ತುಳಿದು ಬಾಲಕಿ ಸಾವು : ತಾಯಿ ಸ್ಧಿತಿ ಗಂಬೀರ –ಕಹಳೆ ನ್ಯೂಸ್

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಜಕಲಿ ಗ್ರಾಮದಲ್ಲಿ ಆನೆಗಳ ಹಿಂಡು ಬಾಲಕಿಯೋರ್ವಳನ್ನು ತುಳಿದು ಸಾಯಿಸಿವೆ. 16 ವರ್ಷದ ಕವನಾ ಎಂಬ ಬಾಲಕಿ ಆನೆ ದಾಳಿಗೆ ಸಾವನ್ನಪ್ಪಿದ್ದಾಳೆ.

ಇಂದು ಬೆಳಗ್ಗೆ ಮಂಜುಳಾ ಮತ್ತು ಮಗಳು ಕವನಾ ಜಮೀನಿನಲ್ಲಿ ಅವರೆಕಾಯಿ ಬಿಡಿಸುತ್ತಿದ್ದ ವೇಳೆ ಆನೆ ದಾಳಿ ಮಾಡಿದೆ. ಕವನಳನ್ನು ಆನೆಯು ಅಟ್ಟಾಸಿಕೊಂಡು ತನ್ನ ಸೊಂಡಿಲಿನಿAದ ದೂರಕ್ಕೆ ಎಸೆದಿದೆ. ಆಗ ಮಹಿಳೆಯರ ಕೂಗಾಟ ಕೇಳಿ, ಅಕ್ಕಪಕ್ಕದ ಜಮೀನುಗಳಲ್ಲಿದ್ದ ಕೂಲಿಗಾರರು ಇವರ ಕಡೆಗೆ ಧಾವಿಸಿ ಬಂದಾಗ ಆನೆಯನ್ನು ನೋಡಿ ಅವರೂ ಹೆದರಿದ್ದಾರೆ. ಅಷ್ಟರಲ್ಲಿ ಕವನಳ ಮೇಲೆ ಆನೆ ದಾಳಿ ನಡೆಸಿದ್ದರಿಂದಾಗಿ ಆಕೆ ಗಂಭೀರವಾಗಿ ಗಾಯಗೊಂಡಿದ್ದಳು. ತಕ್ಷಣವೇ ಆಕೆಯನ್ನು ಆಸ್ಪತ್ರೆಗೆ ಸೇರಿಸಲಾಯಿತಾದರೂ ಆಕೆಯು ಆಸ್ಪತ್ರೆಯಲ್ಲಿ ಕೊನೆಯುಸಿರು ಎಳೆದಿದ್ದಾಳೆ ಎಂದು ತಿಳಿದು ಬಂದಿದೆ.

ಇನ್ನು ಕವನಾ ತಾಯಿ ಮಂಜಮ್ಮರನ್ನ ಆನೆ ಸೊಂಡಿಲಿನಲ್ಲಿ ಎತ್ತಿ ಬಿಸಾಡಿದೆ. ಗಾಯಗೊಂಡಿರುವ ಮಂಜುಳಾರನ್ನು ದಾವಣಗೆರೆಯ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ಕವನಾಳ ಶವವನ್ನು ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದ್ದು ಅವರ ಕುಟುಂಬಸ್ಥರು ಕಂಬನಿ ಮಿಡಿದಿದ್ದಾರೆ.

ಬೆಳಗಿನ ಜಾವ ತೋಟಕ್ಕೆ ತೆರಳಿದ್ದ ಮೂವರು ವ್ಯಕ್ತಿಗಳ ಮೇಲೆ ಪುಂಡಾನೆಗಳು ದಾಳಿ ನಡೆಸಿವೆ. ಇನ್ನು ದಾಂಧಲೆ ನಡೆಸುತ್ತಿರುವ ಆನೆಗಳಗಳನ್ನ ಓಡಿಸಲು ಅರಣ್ಯ ಇಲಾಖೆ ಹಾಗೂ ಗ್ರಾಮಸ್ಥರು ಹರಸಾಹಸ ಪಡುತ್ತಿದ್ದಾರೆ.

ಚನ್ನಗಿರಿ ತಾಲೂಕಿನ ಸೋಮ್ಲಾಪುರ ಹಾಗೂ ಕಾಶಿಪುರ ಸುತ್ತಮುತ್ತ ಕಾಡಾನೆ ಹಾವಳಿ ತೀವ್ರವಾಗಿದ್ದು, ಇದರ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳುವಂತೆ ಅರಣ್ಯ ಇಲಾಖೆಯನ್ನು ಗ್ರಾಮಸ್ಥರು ಒತ್ತಾಯಿಸಿದ್ದಾರೆ.