ಮುಂಬೈ ಮೂಲದ ‘ಪಾಪ್ಯುಲೇಶನ್ ಫಸ್ಟ್‘ ಸಂಸ್ಥೆ ನೀಡುವ 2017ನೇ ಸಾಲಿನ ‘ಲಾಡ್ಲಿ ಮೀಡಿಯಾ ಪ್ರಶಸ್ತಿ’ಯನ್ನು (ಸುದ್ದಿ ವರದಿ ವಿಭಾಗ) ‘ಪ್ರಜಾವಾಣಿ’ಯ ಮುಖ್ಯ ವರದಿಗಾರ ರಾಜೇಶ್ ರೈ ಚಟ್ಲ ಅವರಿಗೆ ದೆಹಲಿಯ ಯುನೈಟೆಡ್ ಸರ್ವಿಸಸ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ ಸಂಸ್ಥೆಯ ಸಭಾಂಗಣದಲ್ಲಿ ಹಿರಿಯ ಪತ್ರಕರ್ತ, ಮ್ಯಾಗ್ಸಸೆ ಪುರಸ್ಕೃತ ಪಿ. ಸಾಯಿನಾಥ್ ಶುಕ್ರವಾರ ಪ್ರದಾನ ಮಾಡಿದರು.
‘ಲಾಡ್ಲಿ ಮೀಡಿಯಾ ಅಂಡ್ ಅಡ್ವರ್ಟೈಸಿಂಗ್’ ಪ್ರಶಸ್ತಿ ಯ ರಾಷ್ಟ್ರೀಯ ಸಂಯೋಜಕಿ ಡೋಲಿ ಠಾಕೂರ್ , ‘ಪಾಪ್ಯುಲೇಶನ್ ಫಸ್ಟ್‘ ಸಂಸ್ಥೆಯ ನಿರ್ದೇಶಕಿ ಡಾ.ಎ. ಎಲ್. ಶಾರದಾ ಉಪಸ್ಥಿತರಿದ್ದರು.
ಕರ್ನಾಟಕದಲ್ಲಿರುವ ಲೈಂಗಿಕ ಕಾರ್ಯಕರ್ತೆಯರ ಕುರಿತು ‘ದಂಧೆಯ ಒಡಲಾಳ’ ಶೀರ್ಷಿಕೆಯಲ್ಲಿ ಪ್ರಕಟವಾದ ಸರಣಿ ವರದಿ ಈ ಪ್ರಶಸ್ತಿಗೆ ಆಯ್ಕೆಯಾಗಿದೆ. ಲಿಂಗ ಸಂವೇದನೆ ಹಾಗೂ ಲಿಂಗ ತಾರತಮ್ಯ ನಿವಾರಣೆ ನಿಟ್ಟಿನಲ್ಲಿ ಜಾಗೃತಿ ಮೂಡಿಸುವ ಮಾಧ್ಯಮ ವರದಿಗಳಿಗೆ ರಾಷ್ಟ್ರೀಯ ಮಟ್ಟದಲ್ಲಿ ಪ್ರತಿವರ್ಷ ‘ಲಾಡ್ಲಿ ಮೀಡಿಯಾ ಅಂಡ್ ಅಡ್ವರ್ಟೈಸಿಂಗ್’ ಹೆಸರಿನಲ್ಲಿ ವಿವಿಧ ವಿಭಾಗಗಳಲ್ಲಿ ಪ್ರಶಸ್ತಿ ನೀಡಲಾಗುತ್ತಿದೆ.