Thursday, January 23, 2025
ಸುದ್ದಿ

*ಚಲನಚಿತ್ರ ನಟ ನಿರ್ದೇಶಕ ಶಿವದ್ವಜ್ ಶೆಟ್ಟಿ ಯವರಿಂದ ಮಿಡಿತ ಕಿರುಚಿತ್ರದ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆ – ಕಹಳೆ ನ್ಯೂಸ್

ಜಾಹೀರಾತು
ಜಾಹೀರಾತು
ಜಾಹೀರಾತು

ಬಹು ನಿರೀಕ್ಷಿತ ಕನ್ನಡದಲ್ಲಿ ವಿಭಿನ್ನ ಕಥಾಂದರವಿರುವ , ಸಮಾಜಕ್ಕೆ ಉತ್ತಮ ಸಂದೇಶವಿರುವ, inspire ಚಿತ್ರತಂಡದ ಅಜ್ಜನಮಾಯೆ ಖ್ಯಾತಿಯ ರವಿಚಂದ್ರ.ರೈ.ಬಿ ಮುಂಡೂರು ಕಥೆ-ಚಿತ್ರಕಥೆ-ನಿರ್ದೇಶನದ, ಕಾಂತಾರ ಖ್ಯಾತಿಯ ಚಲನಚಿತ್ರ ನಟ ಪ್ರಕಾಶ್.ಕೆ.ತುಮಿನಾಡು ಸಲಹೆ ಸಹಕಾರದ ಮಿಡಿತ ಕಿರುಚಿತ್ರದ ಫಸ್ಟ್ ಲುಕ್ ಪೋಸ್ಟರನ್ನು ಚಲನಚಿತ್ರ ನಟ ನಿರ್ದೇಶಕ ನಿರ್ಮಾಪಕ ಶಿವದ್ವಜ್.ಶೆಟ್ಟಿ ಯವರು ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿ ಯವರ ದಿವ್ಯ ಸನ್ನಿಧಿಯಲ್ಲಿ ಬಿಡುಗಡೆಗೊಳಿಸಿದರು

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಕಿರುಚಿತ್ರದಲ್ಲಿ ಪ್ರಕಾಶ್ ತುಮಿನಾಡು ಅವರ ಮಗ ಖುಷಿತ್ ತುಮಿನಾಡು ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದು ಈ ಚಿತ್ರಕ್ಕೆ ಸೂರಜ್ ಪಂಜಳ ರವರ ಕ್ಯಾಮರ ವರ್ಕ್, ಪ್ರಜ್ವಲ್ ಇವರ ಡ್ರೋನ್ ಕ್ಯಾಮರ, ರವಿ ಸಿಂಗೇರಿ ಹಾಗೂ ಅನುಪ್ತ.ಶೆಟ್ಟಿ ಯವರ ಪ್ರಸಾದನ, ವಿಕ್ರಮ್ ನಾಯಕ್ ರವರ ಸಂಕಲನ,ಚೇತನ್ ಮೊಟ್ಟೆತಡ್ಕ ರವರ ಸಾಹಿತ್ಯ,ದೀಪಕ್ ಆಚಾರಿ ಅವರ ಟೈಟಲ್,ವಿಜಯಶ್ರೀ ಮುಳಿಯ ರವರ ಗಾಯನ,ಸವಿ ಸಂಗೀತ ಸ್ಟುಡಿಯೋ ರವರ ಸಂಗೀತ ಈ ಚಿತ್ರಕ್ಕಿದೆ.
ಈ ಚಿತ್ರದಲ್ಲಿ ಹರೀಶ್ ಆಲಂಗಾಜೆ, ಡಿ.ಕೆ.ಶೇಷಪ್ಪ ಪೂಜಾರಿ ಪುರುಷರಕಟ್ಟೆ, ವಿಜಯ ಅತ್ತಾಜೆ, ರಮಿತಾ ರಾವ್, ಪ್ರವೀಣ್ ಮುಲಾರ್, ವೆಂಕಪ್ಪ ಬರೆಪಾಡಿ, ಜಗದೀಶ್.ಶೆಟ್ಟಿ ಕೆರೆಮೂಲೆ, ಉಮೇಶ್.ಎಸ್.ಕೆ, ಪ್ರತೀಕ್ ತುಮಿನಾಡು ಅಭಿನಯಿಸಿದ್ದಾರೆ.ಸುಶಾಂತ್ ಮರೀಲ್ ಇವರ ಸಹಕಾರದೊಂದಿಗೆ ಚಿತ್ರದ ಸಂಕಲನ ಕಾರ್ಯ ನಡೆಯುತಿದ್ದು ಅತೀ ಶೀಘ್ರದಲ್ಲಿ ನಿಮ್ಮ ಮುಂದೆ ಬರಲಿದೆ ಎಂದು ಚಿತ್ರತಂಡ ತಿಳಿಸಿದೆ.