Thursday, January 23, 2025
ಸುದ್ದಿ

ಮುಂಜಾನೆ ವೇಳೆ ಬಿ.ಸಿ ರೋಡು ಸಮೀಪ ಪ್ರಪಾತಕ್ಕೆ ಬಿದ್ದ ಬೈಕ್ ; ಹಿಂಬದಿ ಸವಾರ ಸಾವು..!–ಕಹಳೆ ನ್ಯೂಸ್

ಬಂಟ್ವಾಳ: ಬೈಕ್ ಪ್ರಪಾತಕ್ಕೆ ಬಿದ್ದು ಬೈಕಿನಲ್ಲಿ ಹಿಂಬದಿ ಸವಾರನಾಗಿ ಪ್ರಯಾಣಿಸುತ್ತಿದ್ದ ಚಿಕ್ಕ ಮಂಗಳೂರು ಮೂಲದ ಯುವಕ ಮೃತಪಟ್ಟ ಘಟನೆ ಮುಂಜಾವಿನ ವೇಳೆ ಬಿಸಿರೋಡಿನ ಕೈಕಂಬ ಸಮೀಪದ ತಲಪಾಡಿ ಎಂಬಲ್ಲಿ ನಡೆದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಚಿಕ್ಕಮಗಳೂರು ನಿವಾಸಿ ಮಂಗಳೂರು ಖಾಸಗಿ ಕಂಪೆನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಯಶೋಧರ (25) ಮೃತಪಟ್ಟ ದುರ್ದೈವಿ ಯುವಕ.

ಈತನ ಸ್ನೇಹಿತ ಬೈಕ್ ಚಲಾಯಿಸುತ್ತಿದ್ದ ಅವಿನಾಶ್ ಅಲ್ಪಸ್ವಲ್ಪ ಗಾಯಗಳೊಂದಿಗೆ ಯಾವುದೇ ಪ್ರಾಣಾಪಯವಿಲ್ಲದೆ ಪಾರಾಗಿದ್ದಾನೆ.
ಇವರಿಬ್ಬರೂ ಮಂಗಳೂರು ಸಿಟಿ ಸೆಂಟರ್ ನಲ್ಲಿ ಉದ್ಯೋಗಿಗಳಾಗಿದ್ದು,ಬೆಳ್ತಂಗಡಿಯಲ್ಲಿ ಸ್ನೇಹಿತನ ಮನೆಯಲ್ಲಿ ನಡೆಯುವ ಕೋಲಕ್ಕೆ ಹೋಗಿ ಅಲ್ಲಿಂದ ಸುಮಾರು 3.30 ಗಂಟೆ ವೇಳೆಗೆ ಬರುತ್ತಿರುವಾಗ ಬಿಸಿರೋಡಿನ ಕೈಕಂಬ ಸಮೀಪದ ಕೆ.ಎಸ್.ಆರ್.ಟಿ.ಸಿ.ಬಸ್ ಡಿಪೋ ದ ಬಳಿ ತಲಪಾಡಿ ಎಂಬಲ್ಲಿ ಸುಮಾರು ಹತ್ತಕ್ಕೂ ಅಧಿಕ ಅಡಿ ಇರುವ ಆಳಕ್ಕೆ ಬಿದ್ದು ಬೈಕಿನ ಹಿಂಬದಿಯಲ್ಲಿ ಇದ್ದ ಸಹಸವಾರ ಯಶೋಧರ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಅಪಘಾತಕ್ಕೆ ಸ್ಪಷ್ಟವಾದ ಕಾರಣ ತಿಳಿದು ಬಂದಿಲ್ಲ.
ಮೆಲ್ಕಾರ್ ಟ್ರಾಫಿಕ್ ಪೋಲೀಸರು ಸ್ಥಳಕ್ಕೆ ಬೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.