Thursday, January 23, 2025
ಸುದ್ದಿ

ಮಂಗಳೂರು ; ಹಂಪ್ಸ್ ನಲ್ಲಿ ಏಕಾಏಕಿ ಬ್ರೇಕ್ ಹಾಕಿದ ಬಸ್ ಚಾಲಕ : ಸೀಟಿನಿಂದ ಬಿದ್ದು ಮಹಿಳೆ ಗಂಭೀರ – ಕಹಳೆ ನ್ಯೂಸ್

ಮಂಗಳೂರು : ಹಂಪ್ಸ್ ನಲ್ಲಿ ಬಸ್ ದಿಢೀರ್ ಬ್ರೇಕ್ ಹಾಕಿದ ಪರಿಣಾಮ ಹಿಂದಿನ ಸೀಟಿನಲ್ಲಿ ಕುಳಿತಿದ್ದ ಮಹಿಳೆಯೊಬ್ಬರು ಸೀಟಿನಿಂದ ಕೆಳಗೆ ಬಿದ್ದು ಗಂಭೀರ ಗಾಯಗೊಂಡ ಘಟನೆ ನಗರದ ಮಂಗಳೂರಿನ ಲೇಡಿಹಿಲ್ ಬಳಿ ನಡೆದಿದೆ. ಪಾರ್ವತಮ್ಮ (53) ಗಾಯಗೊಂಡ ಮಹಿಳೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಪಾರ್ವತಮ್ಮ ತನ್ನ ಪತಿ ಮತ್ತು ಮೊಮ್ಮಗನೊಂದಿಗೆ ಮಂಗಳೂರಿನ ಆಸ್ಪತ್ರೆಗೆಂದು ಬಂದು ಬಸ್ ವೊಂದರಲ್ಲಿ ವಾಪಸ್ ಉಡುಪಿಗೆ ಹೋಗುತ್ತಿದ್ದರು. ಈ ವೇಳೆ ಬಸ್ ಲೇಡಿಹಿಲ್ ಸಾಯಿಬಾಬಾ ಮಂದಿರದ ಬಳಿ ತಲುಪಿದಾಗ ಬಸ್ ಚಾಲಕ ಹಂಪ್ಸ್ ಗಮನಿಸದೆ ಏಕಾಏಕಿ ಬ್ರೇಕ್ ಹಾಕಿದ್ದಾನೆ.

ಈ ವೇಳೆ ಬಸ್‌‌ನ ಹಿಂಬದಿ ಸೀಟಿನಲ್ಲಿ ಕುಳಿತಿದ್ದ ಪಾರ್ವತಮ್ಮ ಅವರು ಬಸ್ಸಿನೊಳಗೆ ಬಿದ್ದು ಸೊಂಟ ಮತ್ತು ಬೆನ್ನು ಮೂಳೆಗೆ ಗಂಭೀರವಾದ ಗಾಯಗಳಾಗಿವೆ ಎನ್ನಲಾಗಿದೆ.ಗಾಯಾಳು ಮಹಿಳೆಯನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿದೆ.ಈ ಬಗ್ಗೆ ಮಂಗಳೂರು ಪಶ್ಚಿಮ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.