Thursday, January 23, 2025
ಸುದ್ದಿ

ಚುನಾವಣೆ ಹಿನ್ನೆಲೆ; ಕಡಬ ಠಾಣಾ ವ್ಯಾಪ್ತಿಯ ವಿವಿಧ ಕಡೆಗಳಲ್ಲಿ ಪಥ ಸಂಚಲನ – ಕಹಳೆ ನ್ಯೂಸ್

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಕಡಬ: ಮುಂಬರುವ ವಿಧಾನಸಭಾ ಚುನಾವಣೆಯ ಮತದಾನವನ್ನು ಶಾಂತಿ ಸುವ್ಯವಸ್ಥೆ ನಡೆಸಲು ಜಿಲ್ಲಾಡಳಿತ ಮತ್ತು ರಾಜ್ಯ ಚುನಾವಣಾ ಅಯೋಗದ ನಿರ್ದೇಶನದಂತೆ ಕಡಬ ಠಾಣಾ ವ್ಯಾಪ್ತಿಯ ವಿವಿಧ ಕಡೆಗಳಲ್ಲಿ ಪಥ ಸಂಚಲನ ನಡೆಯಿತು.
ಕಡಬ ಪಟ್ಟಣ ಸೇರಿದಂತೆ ಕೋಡಿಂಬಾಳ,ಕಲ್ಲುಗುಡ್ಡೆ ಗ್ರಾಮೀಣ ಭಾಗದ ಸೂಕ್ಷ್ಮ ಮತ್ತು ಅಥಿಸೂಕ್ಷ್ಮ ಪ್ರದೇಶಗಳ ಪ್ರಮುಖ ರಸ್ತೆಗಳಲ್ಲಿ ಪಥಸಂಚಲನ ಸಾಗಿತು. ಕಡಬ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ಹರೀಶ್ ನೇತೃತ್ವದಲ್ಲಿ ನಡೆದ ಪಥಸಂಚಲನದಲ್ಲಿ ಠಾಣಾ ಸಿಬ್ಬಂದಿಗಳು , ಕೇಂದ್ರ ಪ್ಯಾರಾ ಮಿಲಿಟರಿ ಪಡೆಯ ಸಿಬ್ಬಂದಿಗಳು ಭಾಗವಹಿಸಿದ್ದರು. ಇದೇ ವೇಳೆ ಸೈನಿಕರ ಪರವಾಗಿ ಜೈಯ ಘೋಷಗಳನ್ನು ಕೂಗಿದರು.

2023ರ ವಿಧಾನಸಭಾ ಚುನಾವಣೆ ಪ್ರಕ್ರಿಯೆನ್ನು ಶಾಂತಿ ಮತ್ತು ಸೌಹಾರ್ದತೆ ಮತ್ತು ನ್ಯಾಯ ನಿರ್ಬಿತಿಯಿಂದ ನಡೆಸುವ ಉದ್ದೇಶದಿಂದ ರಾಜ್ಯ ಚುನಾವಣಾ ಆಯೋಗದ ಸೂಚನೆಯಂತೆ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗಿದೆ. ಸಾರ್ವಜನಿಕರು ಶಾಂತಿ ಧೈರ್ಯ, ನಿರ್ಬಿತಿಯಿಂದ ಯಿಂದ ಮತದಾನ ಮಾಡಬೇಕು. ಜೊತೆಗೆ ಯಾವುದೇ ಚುನಾವಣಾ ನೀತಿ ಸಹಿತ ಉಲ್ಲಂಘನೆಯ ಪ್ರಕರಣಗಳು ನಡೆದಂತೆ ಎಚ್ಚರಿಕೆ ವಹಿಸಬೇಕು.ಒಂದುವೇಳೆ ನೀತಿ ಸಹಿತ ಉಲ್ಲಂಘನೆ ಪ್ರಕರಣ ನಡೆದರೆ ಕೂಡಲೇ ಚುನಾವಣಾಧಿಕಾರಿಗಳ ಗಮನಕ್ಕೆ ತಂದು ಚುನಾವಣೆಯನ್ನು ಯಶಸ್ವಿಯಾಗಿ ನಡೆಸಿ ಕೊಡುವಂತೆ ಮನವಿ ಎಸ್.ಐ ಹರೀಶ್ ಮಾಡಿದರು.