Thursday, January 23, 2025
ಸುದ್ದಿ

ಕೊನೆಗೂ “ರೈ”ಗೆ ಒಲಿದ “ಕೈ”; ಹೇಳ್ತಾರ ಕಾವು, ಚಿಲ್ತಡ್ಕ ಬೈ ಬೈ.. ಕುತೂಹಲ ಮೂಡಿಸಿದ ಕಾಂಗ್ರೆಸ್ ಟಿಕೆಟ್ ಲಾಬಿ; ಗೆದ್ದು ಗದ್ದುಗೆ ಏರುವ ಹಂಬಲದಲ್ಲಿ ಅಶೋಕ್ ಕುಮಾರ್ ರೈ- ಕಹಳೆ ನ್ಯೂಸ್

ಪುತ್ತೂರು: ಮೇ.10ರಂದು ನಡೆಯುವ ರಾಜ್ಯ ವಿಧಾನಸಭಾ ಚುನಾವಣೆಯ ಸಂಬಂಧಿಸಿದಂತೆ ಕಾಂಗ್ರೇಸ್‌ ಅಭ್ಯರ್ಥಿಗಳ 3 ನೇ ಪಟ್ಟಿ ಬಿಡುಗಡೆ ಮಾಡಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಪುತ್ತೂರಿನಿಂದ ಕಾಂಗ್ರೇಸ್‌ನ 13 ಕ್ಕೂ ಹೆಚ್ಚು ಮಂದಿ ಟಿಕೆಟ್‌ ಆಕಾಂಕ್ಷಿಗಳು ಭಾರೀ ಪೈಪೋಟಿ ನಡೆಸಿದ್ದು, ಪುತ್ತೂರು ಕ್ಷೇತ್ರದಿಂದ ಅಶೋಕ್‌ ಕುಮಾರ್‌ ರೈ ಮತ್ತು ಮಾಜಿ ಶಾಸಕಿ ಶಕುಂತಳಾ ಟಿ ಶೆಟ್ಟಿ ಅವರು ಹೆಸರು ಮುಂಚೂಣಿಯಲ್ಲಿತ್ತು. ಇದೀಗ ತೀವ್ರ ಕುತೂಹಲ ಹೆಚ್ಚಿಸಿದ ಪುತ್ತೂರು ಕ್ಷೇತ್ರದಿಂದ ಕಾಂಗ್ರೇಸ್‌ ಅಭ್ಯರ್ಥಿಯಾಗಿ ಅಶೋಕ್‌ ಕುಮಾರ್‌ ರೈ ಅವರು ಆಯ್ಕೆಯಾಗಿದ್ದಾರೆ.

ಕಳೆದ ಬಾರಿಯ ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ಬಿಜೆಪಿಯಿಂದ ಅಶೋಕ್‌ ಕುಮಾರ್‌ ರೈ ಅಂತಿಮ ಹಂತದಲ್ಲಿ ಟಿಕೆಟ್‌ ಕೈ ತಪ್ಪಿತ್ತು. ಅನೇಕ ಬಡವರ ಪಾಲಿನ ಆಶಾಕಿರಣವಾದ ಅಶೋಕ್‌ ರೈ ಕುಮಾರ್‌ ಕೊಡುಗೈ ದಾನಿಯು, ಅನೇಕ ದೇವಸ್ಥಾನಗಳ ಜೀರ್ಣೋದ್ದಾರದಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿದ್ದರು.