Tuesday, January 28, 2025
ಸುದ್ದಿ

ಅನಾರೋಗ್ಯದಿಂದಿದ್ದಾಗ ಚಿಕಿತ್ಸೆ ನೀಡಿದ ವೈದ್ಯಾಧಿಕಾರಿಯನ್ನು ಕಂಡು ಕೃತಜ್ಞತೆ ತೋರಿದ ಬಸವ ; ಪುತ್ತೂರು ಜಾತ್ರೆಯಲ್ಲೊಂದು ಭಾವುಕತೆಯ ದೃಶ್ಯ- ಕಹಳೆ ನ್ಯೂಸ್

ಪುತ್ತೂರು: ತನ್ನ ಆರೋಗ್ಯ ರಕ್ಷಕನನ್ನು ನೋಡಿ ಮಹಾಲಿಂಗೇಶ್ವರ ದೇವಳದ ಬಸವ ಕೃತಜ್ಞತಾ ಭಾವನೆ ವ್ಯಕ್ತಪಡಿಸಿದ ಘಟನೆ ಪುತ್ತೂರು ಶ್ರೀ‌ಮಹಾಲಿಂಗೇಶ್ವರ ದೇವಳದ ಜಾತ್ರೆಯ ಪ್ರಥಮ ದಿನದಂದು ಬೆಳಕಿಗೆ ಬಂದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಪಶು ಸಂಗೋಪನಾ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಪ್ರಸನ್ನ ಹೆಬ್ಬಾರ್ ಅವರು ದೇವಳದ ಬಸವ ಸಹಿತ ಗೋ ಶಾಲೆಯ ಎಲ್ಲಾ ಜಾನುವಾರುಗಳ ಆರೋಗ್ಯದ ಕಾಳಜಿ ವಹಿಸುತ್ತಿದ್ದರು. ಅದೇ ರೀತಿ ಬಸವ ಅನಾರೋಗ್ಯದಿಂದಿದ್ದ ವೇಳೆಯಲ್ಲಿ ಚಿಕಿತ್ಸೆ ನೀಡಿದ ಅವರನ್ನು ಜಾತ್ರೆಯ ವೇಳೆ ಶ್ರೀ ದೇವರ ಬಲಿ ಉತ್ಸವ ಸಂದರ್ಭ ನೋಡಿ ಒಮ್ಮೆ ಅವರತ್ತ ಮುಖ‌ಮಾಡಿ ಕೃತಜ್ಞತಾ ಭಾವದಿಂದ ಪ್ರೀತಿ ತೋರಿಸಿತು.

ಇವರಿಬ್ಬರ ಪ್ರೀತಿಯ ಚಿತ್ರವನ್ನು ನಗರಸಭೆ ಸದಸ್ಯ ಪಿ.ಜಿ. ಜಗನ್ನಿವಾಸ್ ರಾವ್ ತನ್ನ ಮೊಬೈಲ್ ಕ್ಯಾಮರದಲ್ಲಿ ಸೆರೆ ಹಿಡಿದರು.