Sunday, November 24, 2024
ಸುದ್ದಿ

ಇತಿಹಾಸ ಪ್ರಸಿದ್ದ ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವರ ಜಾತ್ರೆ : ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಚಾಲನೆ – ಕಹಳೆ ನ್ಯೂಸ್

ಪುತ್ತೂರು: ಇತಿಹಾಸ ಪ್ರಸಿದ್ದ ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವರ ಜಾತ್ರೋತ್ಸವಕ್ಕೆ ಏ. 10 ರಂದು ಧ್ವಜಾರೋಹಣ ಮೂಲಕ ಚಾಲನೆ ದೊರೆತ ಬೆನ್ನಲ್ಲೇ ದೇವಳದ ಎದುರು ಗದ್ದೆಯಲ್ಲಿನ ಶ್ರೀ ಪಾರ್ವತಿ ಸಾಂಸ್ಕೃತಿಕ ವೇದಿಕೆಯಲ್ಲಿ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಏ.17ರ ಬ್ರಹ್ಮರಥೋತ್ಸವದ ಸಂದರ್ಭ ಬಿಟ್ಟು ಏ.10ರಿಂದ 20ರ ತನಕ ಉಳಿದ ದಿನಗಳಲ್ಲಿ ಪ್ರತಿ ದಿನ ಸಂಜೆಯಿಂದ ರಾತ್ರಿ ತನಕ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.

ದೇವಳದ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಶ್ರೀ ಐತ್ತಪ್ಪ ನಾಯ್ಕ್ ಅವರು ಡಾ.ಸುಧಾ ರಾವ್ ಮತ್ತು ಶ್ರೀಮತಿ ವೀಣಾ ಬಿ.ಕೆ ಜೊತೆಗೂಡಿ ದೀಪ ಪ್ರಜ್ವಲನೆ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಆರಂಭದಲ್ಲಿ ಓಂಕಾರ ಮತ್ತು ಶಂಖನಾದ ಮೊಳಗಿಸಲಾಯಿತು. ನಿವೃತ್ತ ಶಿಕ್ಷಕ ಸುರೇಶ್ ಶೆಟ್ಟಿ, ಡಾ. ಶಶಿಧರ್ ಕಜೆ, ಡಾ | ರಾಜೇಶ್ ಬೆಜ್ಜಂಗಳ, ಮೂಕಾಂಬಿಕಾ ಕಲ್ಚರಲ್ ಅಕಾಡೆಮಿಯ ನೃತ್ಯ ನಿರ್ದೇಶಕ ವಿದ್ವಾನ್ ಬಿ. ದೀಪಕ್ ಕುಮಾರ್, ಶಿಕ್ಷಕ ಸುಬ್ಬಪ್ಪ ಕೈಕಂಬ, ಪ್ರೊ. ವಿ.ಜಿ. ಭಟ್ ಉಪಸ್ಥಿತರಿದ್ದರು. ಕೃಷ್ಣವೇಣಿ, ವಿದುಷಿ ಪ್ರೀತಿಕಲಾ, ರೂಪಲೇಖ, ವಿಜಯ ಸರಸ್ವತಿ, ಮಾಲಿನಿ ಭಟ್, ಪ್ರೇಮಲತಾ ರಾವ್, ಉಮಾ ಡಿ ಪ್ರಸನ್ನ, ಲಕ್ಷ್ಮಿ ವಿ.ಜಿ ಭಟ್, ಸುಧಾ, ಹರಿಣಿ ಪುತ್ತೂರಾಯ ಶಂಖನಾದ ಮೊಳಗಿಸಿದರು. ಬಳಿಕ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ರಾಜೇಶ್ ಬನ್ನೂರು ರವರು ಸಭಾಕಾರ್ಯಕ್ರಮ ನಿರ್ವಹಿಸಿದರು.

ಜಾತ್ರೋತ್ಸವದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಏ. 10 ರಂದು ಗಾನ ಪ್ರತಿಭೆಗಳು ಪುತ್ತೂರು, ಇವರಿಂದ ಭಕ್ತಿ ರಸಮಂಜರಿ. ಆರೋಹಿ ಮಂಗಳೂರು ಇವರಿಂದ ಭರತನಾಟ್ಯ, ತನುಷಾ ಇವರಿಂದ ಭರತನಾಟ್ಯ, ಕುಮಾರಿ ಅನರ್ಘ್ಯ ಪಾಂಗಳಾಯಿ ಇವರಿಂದ ದೇವರ ನಾಮ ಮತ್ತು ದಾಸರ ಪದಗಳು, ಅನನ್ಯ ನಾರಾಯಣ ಮತ್ತು ಬಳಗ ಮಂಗಳೂರು ಇವರಿಂದ ಸಂಗೀತ ಸುಧೆ, ಬಾರಿಸು ಕನ್ನಡ ಡಿಂಡಿಮವ ಪುತ್ತೂರು ಇವರಿಂದ ಸಾಂಸ್ಕೃತಿಕ ವೈವಿಧ್ಯ, ಶ್ರೀ ಕೃಷ್ಣ ಯುವಕಮಂಡಲ ಸಿಟಿ ಗುಡ್ಡೆ ನೆಹರುನಗರ ಇವರಿಂದ ಸಾಂಸ್ಕೃತಿಕ ವೈವಿಧ್ಯ, ಅದೇ ರೀತಿ ವಿಶ್ವಕಲಾನಿಕೇತನ ಕುಡ್ಕಾಡಿ ಅವರಿಂದ ಭರತನಾಟ್ಯ ಕಾರ್ಯಕ್ರಮ ವಿಜೃಂಭಣೆಯಿಂದ ನಡೆಯಿತು.