Recent Posts

Sunday, January 19, 2025
ಸಿನಿಮಾಸುದ್ದಿ

ಸ್ನೇಹಿತೆ ನಿವೇದಿತಾ ಗೌಡ ಜತೆ 29ನೇ ಹುಟ್ಟುಹುಬ್ಬ ಆಚರಿಸಿಕೊಂಡ ರ‍್ಯಾಪರ್​ ಸ್ಟಾರ್​ – ಕಹಳೆ ನ್ಯೂಸ್

ಬೆಂಗಳೂರು: ಬಿಗ್​ ಬಾಸ್​ ಖ್ಯಾತಿಯ, ಸಂಗೀತ ಸಂಯೋಜಕ ಚಂದನ್​ ಶೆಟ್ಟಿಗೆ ಇಂದು 29ನೇ ಜನ್ಮದಿನದ ಸಂಭ್ರಮ. ತಡರಾತ್ರಿ ಚಂದನ್​ ತಮ್ಮ ಜನ್ಮದಿನವನ್ನು ಕುಟುಂಬದವರು, ಸ್ನೇಹಿತೆ ನಿವೇದಿತಾ ಗೌಡ ಜತೆ ಆಚರಿಸಿಕೊಂಡರು.

ಬೆಂಗಳೂರಿನ ನಾಗರಬಾವಿ ಮನೆಯಲ್ಲಿ ಚಂದನ್​ ಶೆಟ್ಟಿ ಜನ್ಮದಿನ ಆಚರಣೆ ನಡೆಯಿತು. ಕೇಕ್​ನ್ನು ಸಿಎಸ್​ ಎಂದು ವಿನೂತನವಾಗಿ ಸಿದ್ಧಗೊಳಿಸಲಾಗಿತ್ತು. ಅಭಿಮಾನಿಗಳೂ ಸಹ ಪಾಲ್ಗೊಂಡು ಶುಭಾಶಯ ಕೋರಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಈ ವೇಳೆ ಮಾತನಾಡಿದ ಚಂದನ್​ ಶೆಟ್ಟಿ, ಮೊದಲು ಹುಟ್ಟುಹಬ್ಬ ತುಂಬ ಲಿಮಿಟ್​ ಆಗಿತ್ತು. ಬಿಗ್ ಬಾಸ್ ಮುಗಿದ ಬಳಿಕ ತುಂಬ ಜನ ವಿಶ್​ ಮಾಡುತ್ತಿದ್ದಾರೆ. ರಾತ್ರಿ 12 ಗಂಟೆಗೆ ಇಷ್ಟೊಂದು ಜನರು ಬಂದು ಜನ್ಮದಿನದ ಶುಭಾಶಯ ಕೋರುತ್ತಿರುವುದು ಖುಷಿ ತಂದಿದೆ, ಇವತ್ತು ಇಡೀ ದಿನ ನಾನು ಮನೆಯಲ್ಲೇ ಇರುತ್ತೇನೆ. ಯಾರಿಗೆ ಬರಬೇಕು ಎನಿಸಿದರೂ ಬನ್ನಿ. ಕೇಕ್​ ನಿಮಗೋಸ್ಕರ ಕಾಯುತ್ತಿದೆ ಎಂದು ಹೇಳಿದರು.